ಹೊಳಲೂರು ಬ್ರಿಡ್ಜ್ ಮೇಲೆ ಕರಡಿಯ ಓಟ | ನೋಡಿದವರಿಗೆ ಶಾಕ್
video of a bear running on the Sanyasi Kodamaggie-Hollalur bridge is circulating on mobile phones.
SHIVAMOGGA | MALENADUTODAY NEWS | ಮಲೆನಾಡು ಟುಡೆ Dec 18, 2024
ಶಿವಮೊಗ್ಗದಲ್ಲಿಗ ಕರಡಿಯ ಉಪಟಳದ ಆತಂಕ ಶುರುವಾಗಿದೆ. ಇದಕ್ಕೆ ಕಾರಣವಾಗಿರುವುದು ವೈರಲ್ ಆಗುತ್ತಿರುವ ಒಂದು ವಿಡಿಯೋ . ಸನ್ಯಾಸಿ ಕೋಡಮಗ್ಗಿ –ಹೊಳಲೂರು ಸೇತುವೆ ಮೇಲೆ ಕರಡಿ ಓಡುತ್ತಿರುವ ವಿಡಿಯೋವೊಂದು ಮೊಬೈಲ್‌ಗಳಲ್ಲಿ ಹರಿದಾಡುತ್ತಿದ್ದು ವಿಡಿಯೋ ನೋಡಿದವರು, ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಹೊಳೆಹೊನ್ನೂರು ಸಮೀಪದ ಸನ್ಯಾಸಿ ಕೋಡಮಗ್ಗಿ ಹಾಗೂ ಹೊಳಲೂರು ನಡುವಿನ ಸೇತುವೆ ಮೇಲೆ ಕಳೆದ ಸೋಮವಾರ ಕರಡಿಯೊಂದು ಕಾಣಿಸಿಕೊಂಡಿದೆ ಎನ್ನಲಾಗಿದೆ. ಅದೇ ಮಾರ್ಗದಲ್ಲಿ ಬರುತ್ತಿದ್ದ ಕಾರೊಂದರಲ್ಲಿದ್ದ ಪ್ರಯಾಣಿಕರು ಈ ದೃಶ್ಯವನ್ನು ಚಿತ್ರೀಕರಿಸಿದ್ದಾರೆ. ಇನ್ನೂ ಈ ಭಾಗದಲ್ಲಿ ಚಿರತೆ ಕಾಣಿಸಿಕೊಳ್ಳುವುದು ವಿಶೇಷ ಏನೆಲ್ಲಾವಾದರೂ ಸಹ, ಕರಡಿಯ ಭಯವೂ ಸ್ಥಳೀಯವಾಗಿ ಮೂಡಿದೆ. ಆದರೆ ಈ ವಿಚಾರವಾಗಿ ಶಿವಮೊಗ್ಗದ ಅರಣ್ಯ ಇಲಾಖೆ ಇದುವರೆಗೂ ಮಾತನಾಡಿದ್ದು ಕಂಡುಬಂದಿಲ್ಲ
ಶಿವಮೊಗ್ಗದ ಹೊಳಲೂರು ಸೇತುವೆ ಮೇಲೆ ಕಾಣಿಸಿಕೊಂಡ ಕರಡಿ pic.twitter.com/qzwVOp4RCI — malenadutoday.com (@malnadtoday) December 18, 2024
SUMMARY | A video of a bear running on the Sanyasi Kodamaggie-Hollalur bridge is circulating on mobile phones.
KEY WORDS | video of a bear, Sanyasi Kodamaggie, Hollalur bridge , mobile phones.