ದೇವಸ್ಥಾನ ಮತ್ತು ಸರ್ಕಾರಿ ಶಾಲೆಗೆ ಎಂಟ್ರಿ ಕೊಟ್ಟು ಆತಂಕ ಸೃಷ್ಟಿಸಿದ ಕರಡಿ

ಹೊಳೆಹೊನ್ನೂರು ಎಮ್ಮೆಹಟ್ಟಿ ಅಗಸನವಳ್ಳಿ ಸುತ್ತಮುತ್ತ ಕರಡಿ ಉಪಟಳ ವಿಪರೀತವಾಗಿದೆ The bear menace is rampant in and around Holehonnur, Emmehatti and Agasanavalli

ದೇವಸ್ಥಾನ ಮತ್ತು ಸರ್ಕಾರಿ ಶಾಲೆಗೆ ಎಂಟ್ರಿ ಕೊಟ್ಟು ಆತಂಕ ಸೃಷ್ಟಿಸಿದ ಕರಡಿ
Holehonnur, Emmehatti , Agasanavalli , ಹೊಳೆಹೊನ್ನೂರು, ಎಮ್ಮೆಹಟ್ಟಿ , ಅಗಸನವಳ್ಳಿ

SHIVAMOGGA | MALENADUTODAY NEWS | Aug 22, 2024 ಮಲೆನಾಡು ಟುಡೆ  

ಹೊಳೆಹೊನ್ನೂರು ಭಾಗದಲ್ಲಿ ಇತ್ತೀಚೆಗೆ ಕರಡಿ ಹಾವಳಿ ವಿಪರೀತವಾಗಿದೆ. ಈಗಾಗಲೇ ಹಲವು ಸಲ ಸಿಸಿ ಕ್ಯಾಮರಾಗಳಲ್ಲಿ ಕಾಣ ಸಿಕ್ಕಿರುವ ಕರಡಿಯಿಂದಾಗಿ  ಅಗಸನಹಳ್ಳಿ ಹಾಗೂ ಎಮ್ಮೆಹಟ್ಟಿ ಸುತ್ತಮುತ್ತಲಿನ ಜನರಲ್ಲಿ ಆತಂಕ ಮೂಡಿದೆ. 



ಈ ನಡುವೆ ವಡ್ಡರಹಟ್ಟಿಯ ಚೌಡಮ್ಮ ದೇವಸ್ಥಾನದಲ್ಲಿ ಕರಡಿಯ ಓಡಾಟ ಕಾಣ ಸಿಕ್ಕಿದೆ.ವಿಷಯ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಸಿಬ್ಬಂದಿಗಳಿಗೂ ದೇವಾಲಯದಲ್ಲಿ ಕರಡಿ ಇರುವುದು ಕಾಣಿಸಿದೆ. ಆ ಬಳಿಕ ಕರಡಿ ಎಮ್ಮೆಹಟ್ಟಿಯ ಶಾಲೆಯೊಂದರಲ್ಲಿ ಕಾಣಿಸಿಕೊಂಡಿದೆ. 

ಸದ್ಯ ಅರಣ್ಯ ಇಲಾಖೆ ಕರಡಿ ಹಿಡಿಯುವ ಪ್ರಯತ್ನ ನಡೆಸಿದೆಯಂತೆ. ಈ ಬಗ್ಗೆ ಸ್ಥಳೀಯರಿಗೆ ಭರವಸೆ ನೀಡಿರುವ ಅರಣ್ಯ ಇಲಾಖೆ ಕರಡಿ ಸೆರೆಗೆ ಬೋನುಗಳನ್ನ ಅಳವಡಿಸಲಾಗಿದೆ ಎಂದು ತಿಳಿಸಿದೆ.  

  ಇನ್ನಷ್ಟು ಸುದ್ದಿಗಳು