ಆಪರೇಷನ್‌ ಜಾಂಬವಂತ ಸಕ್ಸಸ್‌ | ಸಿಕ್ಕಿಬಿದ್ದ ಕರಡಿ ನೋಡಲು ಬಂದ 10 ಹಳ್ಳಿ ಜನ| ಬೋನಿಗೆ ಬಿದ್ದ ದೃಶ್ಯ ಸಿಸಿ ಟಿವಿಯಲ್ಲಿ !

ಭದ್ರಾವತಿಯ ತಟ್ಟೆಹಳ್ಳಿಯಲ್ಲಿ ಆತಂಕ ಸೃಷ್ಟಿಸಿದ್ದ ಕರಡಿ ಸೆರೆಯಾಗಿದೆ A bear has been captured at Thattehalli in Bhadravathi

ಆಪರೇಷನ್‌ ಜಾಂಬವಂತ ಸಕ್ಸಸ್‌ | ಸಿಕ್ಕಿಬಿದ್ದ ಕರಡಿ ನೋಡಲು ಬಂದ 10 ಹಳ್ಳಿ ಜನ| ಬೋನಿಗೆ ಬಿದ್ದ ದೃಶ್ಯ ಸಿಸಿ ಟಿವಿಯಲ್ಲಿ !
bear has been captured at Thattehalli in Bhadravathi , ಭದ್ರಾವತಿಯಲ್ಲಿ ಕರಡಿ ಸೆರೆ

SHIVAMOGGA | MALENADUTODAY NEWS | Aug 25, 2024 ಮಲೆನಾಡು ಟುಡೆ  

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ತಟ್ಟೆಹಳ್ಳಿಯಲ್ಲಿ ಓಡಾಡುತ್ತಿದ್ದ ಕರಡಿ ಕೊನೆಗೂ ಬೋನಿನಲ್ಲಿ ಸೆರೆಯಾಗಿದೆ. ಈ ಸಂಬಂಧ ಅರಣ್ಯ ಇಲಾಖೆ ನಡೆಸಿದ ಕಾರ್ಯಾಚರಣೆ ಯಶಸ್ವಿಯಾಗಿದೆ. 

ಭದ್ರಾವತಿಯಲ್ಲಿ ತಗ್ಗಿದ ಆತಂಕ

ಕರಡಿಯ ಓಡಾಟದಿಂದಾಗಿ ಈ ಭಾಗದಲ್ಲಿ ಸಾಕಷ್ಟು ಆತಂಕ ಉಂಟಾಗಿತ್ತು. ಸಾಲದ್ದಕ್ಕೆ ಜನರು ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇತ್ತ ಅರಣ್ಯ ಇಲಾಖೆಯು ಸಹ ಕರಡಿಯನ್ನು ಹಿಡಿಯಲು ಕಾರ್ಯಾಚರಣೆಯನ್ನ ನಡೆಸಿತ್ತಾದರೂ ಅದು ಯಶಸ್ವಿಯಾಗಿರಲಿಲ್ಲ. ಇದೀಗ ಎಲ್ಲರೂ ನಿಟ್ಟುಸಿರು ಬಿಡುವಂತಾಗಿದೆ. 

ಕರಡಿ ಕಾರ್ಯಾಚರಣೆ

ತಟ್ಟೆಹಳ್ಳಿಯ ಚೌಡೇಶ್ವರಿ ದೇವಾಲಯದ ಆವರಣದಲ್ಲಿ ಕರಡಿಯ ಓಡಾಟವನ್ನು ಗಮನಿಸಿ ಬೋನು ಇಡಲಾಗಿತ್ತು. ಕರಡಿಯು ನಿನ್ನೆ ರಾತ್ರಿ ಬೋನಿಗೆ ಬಿದ್ದಿದೆ, ಕರಡಿ ಬೋನಿಗೆ ಬಿದ್ದಿರುವ ದೃಶ್ಯ ಇಲ್ಲಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. 

ಕರಡಿ ನೋಡಲು ಮುಗಿಬಿದ್ದ ಜನ

ಇನ್ನೂ ಕರಡಿ ಬೋನಿಗೆ ಬಿದ್ದಿದೆ ಎಂದು ಗೊತ್ತಾಗುತ್ತಲೇ ಈ ಭಾಗದ  ಅಗಸನಹಳ್ಳಿ, ಎಮ್ಮೆಹಟ್ಟಿ, ಕೆರೆಬೀರನಹಳ್ಳಿ, ತಿಮ್ಲಾಪುರ ಕ್ಯಾಂಪ್ ಸೇರಿದಂತೆ ಸುತ್ತಮುತ್ತ ಗ್ರಾಮದಲ್ಲಿನ ಜನರು ದೇವಾಲಯದ ಬಳಿ ಜಮಾಯಿಸಿದ್ದರು.ಅರಣ್ಯ ಇಲಾಖೆ ಸಿಬ್ಬಂದಿಗೆ ಕರಡಿಯನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸುವ ಕೆಲಸದ ಜೊತೆ ಜನರನ್ನು ನಿಬಾಯಿಸುವುದು ಸಹ ಹರಸಾಹಸದ ಕೆಲಸವಾಗಿ ಪರಿಣಮಿಸಿತ್ತು.  

  ಇನ್ನಷ್ಟು ಸುದ್ದಿಗಳು