bcci cricket :  ಐಪಿಲ್​ ಪಂದ್ಯ ಒಂದು ವಾರ ರದ್ದು | ಪ್ರತಿ ಪಂದ್ಯಕ್ಕೆ ಬಿಸಿಸಿಐ ಕಳೆದುಕೊಳ್ತಿರೋದು ಎಷ್ಟು ಕೋಟಿ

prathapa thirthahalli
Prathapa thirthahalli - content producer

bcci cricket :   ಕಳೆದ ಮೂರ್ನಾಲ್ಕು ದಿನಗಳಿಂದ ಭಾರತ ಹಾಗು ಪಾಕಿಸ್ತಾನದ ನಡುವೆ ಯುದ್ದದ ವಾತಾವರಣ ನಿರ್ಮಾಣವಾಗಿದ್ದು, ಬಾರತ ಪಾಕಿಸ್ತಾನದಲ್ಲಿರುವ ಉಗ್ರ ನೆಲೆಗಳ ಮೇಲೆ ಮಿಸೈಲ್​ ದಾಳಿ ನಡೆಸುತ್ತಿದೆ.ಇದಕ್ಕೆ ಪ್ರತಿಯಾಗಿ ಪಾಕಿಸ್ತಾನವೂ ಸಹ ಪ್ರತಿ ದಾಳಿ ನಡೆಸುತ್ತಿದ್ದು, ಮುಂಜಾಗ್ರತೆ ದೃಷ್ಟಿಯಿಂದ ಬಿಸಿಸಿಐ ಐಪಿಎಲ್​ ಟೂರ್ನಿಯನ್ನು ಒಂದು ವಾರದವರೆಗೆ ರದ್ದುಗೊಳಿಸಿದೆ. ಈ ಪಂದ್ಯ ರದ್ದತಿಯಿಂದಾಗಿ ಬಿಸಿಸಿಐಗೆ ಕೊಟ್ಯಾಂತರ ರೂಪಾಯಿ ನಷ್ಟವಾಗುತ್ತಿದೆ ಎಂದು ವರದಿ ತಿಳಿಸಿದೆ.

bcci cricket : ಬಿಸಿಸಿಐಗೆ ಎಷ್ಟು ಕೋಟಿ ನಷ್ಟ

ಹಿಂದೂಸ್ಥಾನ್​ ಟೈಮ್ಸ್​ ವರದಿಯ ಪ್ರಕಾರ ಐಪಿಯಲ್​ ಋತುವಿನಲ್ಲಿ ಆಡದ ಪ್ರತಿಯೊಂದು ಪಂದ್ಯಕ್ಕೂ ಬಿಸಿಸಿಐ ಸುಮಾರು 125 ಕೋಟಿ ರೂ.ಗಳನ್ನು ಕಳೆದುಕೊಳ್ಳುತ್ತದೆ. ಧರ್ಮಶಾಲಾದಲ್ಲಿ ಗುರುವಾರ ದೆಹಲಿ ಕ್ಯಾಪಿಟಲ್ಸ್​ ಹಾಗೂ ಪಂಜಾಬ್​ ಕಿಂಗ್ಸ್​​ ನಡುವೆ ಪಮದ್ಯವನ್ನು ಏರ್ಪಡಿಸಲಾಗಿತ್ತು. ಆದರೆ ಭಾರತದ ಹಲವಾರು ನಗರಗಳಲ್ಲಿ ಪಾಕಿಸ್ತಾನದಿಂದ ಡ್ರೋನ್ ದಾಳಿಗಳು ನಡೆದ ಕಾರಣ ಪಂದ್ಯವನ್ನು ಅಂತಿಮವಾಗಿ ರದ್ದುಗೊಳಿಸಬೇಕಾಯಿತು. ಹಾಗೆಯೇ ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಗಡಿ ಉದ್ವಿಗ್ನತೆ ಬಿಸಿಸಿಐ ಸ್ಪರ್ಧೆಯನ್ನು ಒಂದು ವಾರ ಸ್ಥಗಿತಗೊಳಿಸಲು ಕಾರಣವಾಯಿತು.

- Advertisement -

ಒಂದು ವಾರದ ನಂತರವೂ ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಪಂದ್ಯ ಪುನರ್​ ಆರಂಭಗೊಳ್ಳುವುದು ಕಷ್ಟ.  ಈ ಕುರಿತು ಪಾಲುದಾರರಲ್ಲಿ ಹಲವಾರು ಸಮಾಲೋಚನೆಗಳು ನಡೆಯಲಿವೆ. ಪಂದ್ಯದ ಪ್ರಸಾರ, ಪ್ರಾಯೋಜಕತ್ವ ಮತ್ತು ಇತರ ಪಂದ್ಯ-ಸಂಬಂಧಿತ ಆದಾಯವನ್ನು ಗಣನೆಗೆ ತೆಗೆದುಕೊಂಡಾಗ ಬಿಸಿಸಿಐಗೆ 125 ಕೋಟಿಗಿಂತ ಹೆಚ್ಚಿನನಷ್ಟ ಉಂಟಾಗಬಹುದು.

ಬಿಸಿಸಿಐ ಈ ವರ್ಷ ಐಪಿಎಲ್​ ಪಂದ್ಯಾವಳಿಯನ್ನು ಮುಗಿಸುವ ಸಾಧ್ಯತೆ ಹೆಚ್ಚಿದ್ದರೂ, ಕೆಲವು  ಕಾರಣಗಳಿಂದ ಅವರು ಪಂದ್ಯವನ್ನು ಪೂರ್ಣಗೊಳಿಸಲು ಸಾಧ್ಯವಾಗದಿದ್ದರೆ. ಈ ಹಿಂದೆ ಮಂಡಳಿ ಗಳಿಸುತ್ತಿದ್ದ ₹5,500 ಕೋಟಿ ಜಾಹೀರಾತು ಆದಾಯದಲ್ಲಿ ಮೂರನೇ ಒಂದು ಭಾಗವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.

 

TAGGED:
Share This Article