ಬೆಂಗಳೂರುನಲ್ಲಿ ಭದ್ರಾವತಿ ಯುವತಿ ಕೊಲೆ | ಪತಿ ಅರೆಸ್ಟ್ | ನಡೆದಿದ್ದೇನು?
bangalore kengeri police station bhadravathi case | ಭದ್ರಾವತಿಯ ಯುವತಿ ನವ್ಯಶ್ರಿ ಕಿರಣ್ ಎಂಬಾತನನ್ನ ಪ್ರೀತಿಸಿ ಮೂರುವರ್ಷಗಳ ಹಿಂದೆ ಮದುವೆಯಾಗಿದ್ದರು
SHIVAMOGGA | MALENADUTODAY NEWS | Aug 29, 2024 ಮಲೆನಾಡು ಟುಡೆ
ಬೆಂಗಳೂರು ನಲ್ಲಿ ನೆಲೆಸಿದ್ದ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಯುವತಿಯೊಬ್ಬಳ ಕೊಲೆ ಪ್ರಕರಣದಲ್ಲಿ ಆಕೆಯ ಪತಿಯನ್ನ ಬೆಂಗಳೂರು ಕೆಂಗೇರಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಭದ್ರಾವತಿಯ ನವ್ಯಶ್ರೀ(28) ಕೊಲೆಯಾದವರು, ಪತಿ ಕಿರಣ್‌ನನ್ನು(31) ಪೊಲೀಸರು ಬಂಧಿಸಿದ್ದಾರೆ. ಕೊಲೆಗೆ ಕೌಟುಂಬಿಕ ಕಲಹ ಕಾರಣ ಎನ್ನಲಾಗಿದೆ.
ಕೆಂಗೇರಿ ಪೊಲೀಸ್ ಠಾಣೆ
ಇವರಿಬ್ಬರು ಪರಸ್ಪರ ಪ್ರೀತಿಸಿ ಮೂರು ವರ್ಷಗಳ ಹಿಂದಷ್ಟೆ ಮದುವೆಯಾಗಿದ್ದರು. ಕಿರಣ್ ಕ್ಯಾಬ್ ಚಾಲಕನಾಗಿದ್ದ, ಇಬ್ಬರು ಬೆಂಗಳೂರು ಎಸ್‌ಎಂವಿ ಲೇಔಟ್‌ನಲ್ಲಿ ವಾಸವಿದ್ದರು. ಪತ್ನಿಯ ಮೇಲಿನ ಅನುಮಾನ ಸಂಸಾರದಲ್ಲಿ ಜಗಳಕ್ಕೆ ಕಾರಣವಾಗಿತ್ತು. ಇದೇ ವಿಚಾರಕ್ಕೆ ಪ್ರತಿನಿತ್ಯ ಗಲಾಟೆಯಾಗುತ್ತಿತ್ತು ಎನ್ನಲಾಗಿದೆ.
ಈ ನಡುವೆ ಕೊಲೆಯಾದ ನವ್ಯಶ್ರೀ ಮನೆಯ ವಿಚಾರದ ಬಗ್ಗೆ ತನ್ನ ಸ್ನೇಹಿತರಿಬ್ಬರಿಗೆ ವಿಷಯ ತಿಳಿಸಿದ್ದಳು. ಅಲ್ಲದೆ ಕೊಲೆಯಾದ ದಿನ ನವ್ಯಶ್ರೀಯ ಸ್ನೇಹಿತೆಯೊಬ್ಬರು ಅವರ ಮನೆಯಲ್ಲಿಯೇ ಉಳಿದಿದ್ದರು.ಅಂದು ಮನೆಯಲ್ಲಿದ್ದ ಪತಿ ಕುಡಿದ ಮತ್ತಿನಲ್ಲಿ ನವ್ಯಶ್ರಿಯನ್ನ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ಎಂದು ಆರೋಪಿಸಲಾಗಿದೆ. ಈ ಸಂಬಂಧ ಪೊಲೀಸರು ಆರೋಪಿಯನ್ನ ಬಂಧಿಸಿ ತನಿಖೆ ನಡೆಸ್ತಿದ್ದಾರೆ.
ಇನ್ನಷ್ಟು ಸುದ್ದಿಗಳು
Shivamogga | 30 ಸಾವಿರ ಕ್ಯೂಸೆಕ್ ಕ್ಕೂ ಅಧಿಕ ನೀರು ಬಿಡುಗಡೆ | ನಯಾಗರವಾದ ಜೋಗ ಜಲಪಾತ
ಶಿವಮೊಗ್ಗ-ಶಿರಾಳಕೊಪ್ಪ ಟೋಲ್ ಗೇಟ್ ವಿವಾದದ ಬಗ್ಗೆ ಸಂಸದ ಬಿ ವೈ ರಾಘವೇಂದ್ರ ಹೇಳಿದ್ದೇನು?
Shettihalli | ಶೆಟ್ಟಿಹಳ್ಳಿ ಅಭಯಾರಣ್ಯದಲ್ಲಿ ಜಿಂಕೆ ಬೇಟೆ | ಅರಣ್ಯ ಇಲಾಖೆ ಶಾಕ್ | ನಾಲ್ವರು ಅರೆಸ್ಟ್
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ