ಬೆಂಗಳೂರಲ್ಲಿ ಶಿವಮೊಗ್ಗ ರೌಡಿಗಳಿಂದ ಮರ್ಡರ್! | ಟ್ಯಾಂಕ್ ಮೊಹಲ್ಲಾ ರಿಜ್ವಾನ್ ಮೋಸ್ಟ್ ಡೆಂಜರಸ್ ಆಗಿದ್ದೇಗೆ? JP ಬರೆಯುತ್ತಾರೆ
bangalore hyder ali murder case

SHIVAMOGGA| MALENADUTODAY NEWS | ಮಲೆನಾಡು ಟುಡೆ Mar 5, 2025
ಶಿವಮೊಗ್ಗದಲ್ಲಿ ಕ್ರೈಂ ಮಾಡ್ತಾರೆ ಎಂಬ ಕಾರಣಕ್ಕೆ ಶಿವಮೊಗ್ಗ ಜಿಲ್ಲೆಯಿಂದಲೇ ಗಡಿಪಾರು ಆದವರು, ತಾವು ಗಡಿಪಾರಾದ ಜಿಲ್ಲೆಯಲ್ಲಿಯೇ ಕ್ರೈಂ ಮಾಡುತ್ತಾರೆ ಎಂದರೆ ಅದರರ್ಥ. ಅವರುಗಳ ಉದ್ದೇಶ ನಟೋರಿಯಸ್ ಆಗಿದೆ ಅಂತಂದುಕೊಳ್ಳುವುದಕ್ಕೆ ಅಡ್ಡಿಯಿಲ್ಲ. ಸದ್ಯ ಈ ಪದ ಹಾಗೂ ವಾಕ್ಯ ಬಳಸುವುದಕ್ಕೆ ಕಾರಣ ಕಳೆದ ಫೆಬ್ರವರಿ 28 ಕ್ಕೆ ಬೆಂಗಳೂರು ಅಶೋಕನಗರ ಪೊಲೀಸ್ ಠಾಣೆ ಸಮೀಪ ನಡೆದ ಹೈದರ್ ಅಲಿ ಎಂಬಾತನ ಬರ್ಬರ ಹತ್ಯೆ!
ಹೈದರ ಅಲಿ ಮರ್ಡರ್ ಕೇಸ್
ಈ ಮರ್ಡರ್ ಕೇಸ್‌ನಲ್ಲಿ ಈಗಾಗಲೇ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕೊಲೆಯ ಮೋಟೋ ಮತ್ತು prima facie ಸತ್ಯಗಳನ್ನ ಪೊಲೀಸರು ಕಂಡುಕೊಂಡಿದ್ದಾರೆ. ಆದರೂ ಗ್ಲಾನ್ಸ್ ಆಗಿ ಗಮನಿಸುವುದಾರೆ, ಬಿಡಿಎ ಅಧ್ಯಕ್ಷ ಎನ್.ಎ.ಹಾರೀಸ್ ನಿಕಟವರ್ತಿಯಾಗಿದ್ದ ರೌಡಿಶೀಟರ್ ಹೈದರ್ ಆಲಿ, ಮತ್ತೊಬ್ಬ ರೌಡಿಶೀಟರ್ ಅಬ್ಬಾಸ್ ಮತ್ತು ರೌಡಿಶೀಟರ್ ನಾಜುದ್ದೀನ್ ನಡುವೆ ದುಷ್ಮನಿ ಇತ್ತು. ಹೋದ ವರ್ಷದ ರಂಜಾನ್ ಸಂದರ್ಭದಲ್ಲಿ ಇವರ ದುಷ್ಮನಿ ಅಳಿಸಿ ಕೆಲವರು ರಾಜಿ ಮಾಡಿಸಿದ್ರು. ಆದರೆ ಮನಸ್ಸಿನೊಳಗಿನ ದ್ವೇಷ ಮಾತ್ರ ಉರಿಯುತ್ತಲೇ ಇದ್ದ ಕಾರಣ, ಕಳೆದ ಫೆಬ್ರವರಿ 28 ರಂದು ಹೈದರ್ ಅಲಿ ನಡುಬೀದಿ ಹೆಣವಾಗಿದ್ದ.
ಶಿವಮೊಗ್ಗ ಮತ್ತು ಬೆಂಗಳೂರು
ಈ ಕೊಲೆಗೆ ಕಾರಣ ಕೆಲವರು ರಾಜಕಾರಣ ಅಂತಿದ್ದಾರೆ. ಬಿಬಿಎಂಪಿ ಚುನಾವಣೆ ಫೇಸ್ ಮಾಡೋದು ಕಷ್ಟ ಅಂದ್ಕೊಂಡು ಹೈದರ್‌ನನ್ನ ಎತ್ತಿಬಹುದು ಎನ್ನಲಾಗುತ್ತದೆ. ಇನ್ನೊಂದು ಕಡೆ ಹೈದರ್ ಅಲಿ ಆಪ್ತನ ಮೇಲೆ ಕೈ ಮಾಡಿದ್ದಕ್ಕೆ ಹೈದರ್ ಒಂದಿಷ್ಟು ಮಂದಿಗೆ ಆವಾಜ್ ಹಾಕಿದ್ದ ಆ ಕಾರಣಕ್ಕೆ ಅವರು ಸ್ಕೆಚ್ ಹಾಕಿ ಹೈದರ್‌ನನ್ನೆ ಫಿನಿಶ್ ಮಾಡಿದ್ರು ಎಂದು ಸಹ ಹೇಳಲಾಗುತ್ತದೆ. ಇವೆಲ್ಲದರ ನಡುವೆ ರೆಡ್ ಇಂಕ್‌ನಲ್ಲಿ ಬರೆದ ಹಾಗೆ ಪಾಯಿಂಟ್ ಔಟ್ ಆಗ್ತಿರುವುದು ಬೆಂಗಳೂರಲ್ಲಿ ಮತ್ತೆ ಶಿವಮೊಗ್ಗ ರೌಡಿಗಳ ಬರ್ಬರ ಕ್ರೈಂ ದಾಖಲಾಗಿರುವುದು. ಆನೆಪಾಳ್ಯದ ಕೆಲ ರೌಡಿಗಳ ಜೊತೆಗೆ ಶಿವಮೊಗ್ಗದ ರೌಡಿಗಳು ಹೈದರ್‌ನನ್ನ ಮುಗಿಸಿದ್ದರು. ಬಂಧಿತ ನಯಾಝ್ ಪಾಷ, ಶಿವಮೊಗ್ಗದ ರೌಡಿ ರಿಝ್ವಾನ್, ಮತೀನ್, ಸದ್ದಮ್, ದರ್ಶನ್, ರಾಹಿದ್, ವಸೀಮ್ ಪೈಕಿ ವಸೀಮ್, ರಾಹಿದ್ ಹಾಗೂ ರಿಜ್ವಾನ್ ಶಿವಮೊಗ್ಗದವರು.ಇವರಷ್ಟೆ ಅಲ್ಲದೆ ಶಿವಮೊಗ್ಗದ ಇನ್ನೊಂದಿಷ್ಟು ಮಂದಿ ಬೆಂಗಳೂರಲ್ಲಿ ಗುಂಪು ಕಟ್ಟಿಕೊಂಡು ಅಲ್ಲಿನ ಅಂಡರ್‌ಗ್ರೌಂಡ್ ಫೀಲ್ಡ್‌ನಲ್ಲಿ ಬ್ಯಾಟ್‌ಮನ್‌ಗಳಾಗಿ ವರ್ಕ್ ಮಾಡ್ತಿದ್ದಾರೆ ಎನ್ನುತ್ತೆ ಇಂಟಲಿಜೆನ್ಸ್ ಮೂಲ.
ರಿಜ್ವಾನ್ ಆಂಡ್ ಗ್ಯಾಂಗ್
ಸಿಕ್ಕ ವರ್ತಮಾನದ ಪ್ರಕಾರ, ಹೈದರ್ ಅಲಿ ಮರ್ಡರ್ ಕೇಸ್‌ನಲ್ಲಿರುವ ಶಿವಮೊಗ್ಗದ ಆರೋಪಿಗಳ ಪೈಕಿ ಕೆಲವರಿಗೆ ಇದು ಫಸ್ಟ್ ಕೇಸ್, ಮತ್ತೆ ಕೆಲವರು ಶಿವಮೊಗ್ಗದಿಂದ ಗಡಿಪಾರಾದವರು. ಈ ಪೈಕಿ ಓರ್ವ ಶಿವಮೊಗ್ಗದ ಮೋಸ್ಟ್ ಡೇಂಜರಸ್ ಕ್ರಿಮಿನಲ್. ಬಂಧಿತರ ಪೈಕಿ ರಿಜ್ವಾನ್, ಸದ್ದಾಂ, ಮತೀನ್ ಮೇಲೆ ಶಿವಮೊಗ್ಗದಲ್ಲಿ ಸಾಕಷ್ಟು ಪ್ರಕರಣಗಳಿವೆ. ರಿಜ್ವಾನ್ ಗಡಿಪಾರು ಆಗಿರುವ ರೌಡಿಶೀಟರ್ ಆಗಿದ್ದು, ಉಳಿದಿಬ್ಬರ ಬಗ್ಗೆ ಮಾಹಿತಿ ಸ್ಪಷ್ಟವಾಗಬೇಕಿದೆ. ಇನ್ನೂ ವಸೀಮ್ ಹಾಗೂ ರಾಹಿದ್ ಶಿವಮೊಗ್ಗದ ರಾಗಿಗುಡ್ಡ ಹಾಗೂ ಟ್ಯಾಂಕ್ ಮೊಹಲ್ಲಾದವರು. ಇವರಿಗಿದು ಫಸ್ಟ್ ಕೇಸ್ ಎನ್ನಲಾಗುತ್ತಿದೆ. ಆದರೆ ರಿಜ್ವಾನ್‌ಗೆ ಇದು ಮೂರನೇ ಕೇಸ್. ಶಿವಮೊಗ್ಗದಲ್ಲಿ ಲೋಕಿ ಅಣ್ಣನ ಮರ್ಡರ್ ಕೇಸ್‌ನಲ್ಲಿ ಆರೋಪಿಯಾಗಿರುವ ಈತ ಹೈದರಾಬಾದ್‌ನ ಒರ್ವ ಎಂಎಲ್‌ಎ ಮಗನ ಸ್ನೇಹಿತನ ಕೊಲೆ ಪ್ರಕರಣದಲ್ಲಿಯು ಆರೋಪಿ. ಹೈದರ್ ಅಲಿ ಮರ್ಡರ್ ಕೇಸ್ ಈತನ ಹ್ಯಾಟ್ರಿಕ್ ಕೈಂ. ಭೂಗತಲೋಕದಲ್ಲಿ ರಾಬ್ಜಿ ಡಾನ್ ಆಗಲು ಹೊರಟಿರುವ ಈತ ಶಿವಮೊಗ್ಗದಿಂದ ಗಡಿಪಾರಾದ ಬಳಿಕ ಬೆಂಗಳೂರಿನಲ್ಲಿ ಹೈದರ್ ಆಫೋಸಿಟ್ ಟೀಂನ ಶೆಲ್ಟರ್ ಪಡೆದುಕೊಳ್ತಾನೆ. ಹಾಗೆ ಸಿಕ್ಕ ಶೆಲ್ಟರ್‌ನಲ್ಲಿಯೇ ಒಂದು ತಿಂಗಳ ಹಿಂದೆ ಹೈದರ್ ಅಲಿ ಮರ್ಡರ್ ಸ್ಕೆಚ್ ಪ್ಲಾನ್ ಆಗಲು ಶುರುವಾಗಿತ್ತು. ಫೆಬ್ರವರಿ 28 ಕ್ಕೆ ಪ್ಲಾನ್ ಎಗ್ಸಿಕ್ಯೂಷನ್ ಆಗಿತ್ತು.
ಶಿವಮೊಗ್ಗ ಪೊಲೀಸ್
ಬೆಂಗಳೂರಿನಲ್ಲಿ ಹಿಂದಿನಿಂದಲೂ ಶಿವಮೊಗ್ಗ ಹುಡುಗರ ರೌಡಿಸಂ ಬಗ್ಗೆ ಸುದ್ದಿಯಾಗುತ್ತಲೇ ಬಂದಿದೆ. ಇದಕ್ಕೀಗ ರಿಜ್ವಾನ್ ಗ್ಯಾಂಗ್ ಹೊಸ ಸೇಪರ್ಡೆಯಾಗಿದೆಯಷ್ಟೆ. ಆದರೆ ಈ ನಿಟ್ಟಿನಲ್ಲಿ ಶಿವಮೊಗ್ಗ ಪೊಲೀಸರು ಹೆಚ್ಚು ಅಲರ್ಟ್ ಆಗಿರಬೇಕಿದೆ. ಏಕೆಂದರೆ ಸದ್ಯ ಪರಪ್ಪನ ಅಗ್ರಹಾರ ಸೇರಿರುವವರು ಬೆಂಗಳೂರಿನಿಂದಲೇ ಶಿವಮೊಗ್ಗದಲ್ಲಿ ನೆಟ್‌ವರ್ಕ್ ಹರಡಲು ಪ್ರಯತ್ನಿಸುವ ಅಪಾಯವಿದೆ. ಇದಕ್ಕೆ ಹಿಂದಿನ ಹಲವು ಉದಾಹರಣೆಗಳು ಪೊಲೀಸ್ ಇಲಾಖೆಯಲ್ಲಿಯೇ ಸಿಗುತ್ತದೆ.