ಶಿವಮೊಗ್ಗ ತಾಲ್ಲೂಕುನಲ್ಲಿಯೇ 450 ಎಕರೆ ಭೂಮಿ ಇದ್ಯಾ? ರಾಜವಂಶಸ್ಥರು ಎಂದು ಕರೆದ ಆಯನೂರು ಮಂಜುನಾಥ್ ಹೇಳಿದ ಆಸ್ತಿ ಗುಟ್ಟೇನು?
ayanuru Manjunath pressmeet bsy byr and vijyendra , ಆಯನೂರು ಮಂಜುನಾಥ್, ಬಿಎಸ್ ಯಡಿಯೂರಪ್ಪ, ಬಿ ವೈ ವಿಜಯೇಂದ್ರ, ಬಿ ವೈ ರಾಘವೇಂದ್ರ, ಹರತಾಳು ಹಾಲಪ್ಪ, Ayanur Manjunath, B.S. Yediyurappa, B.Y. Vijayendra, B.Y. Raghavendra, Haratalu Halappa,
SHIVAMOGGA | MALENADUTODAY NEWS
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ
Sep 10, 2024 linganamakki dam water level
ನಾನೇಕೆ ಯಡಿಯೂರಪ್ಪನವರ ಕ್ಷೇಮೆ ಕೇಳಬೇಕು? ಕ್ಷೇಮೆ ಕೆಳುವ ಪ್ರಶ್ನೇಯೇ ಇಲ್ಲ ಎಂದು ಮಾಜಿ ಸಂಸದ ಆಯನೂರು ಮಂಜುನಾಥ್ ಹೇಳಿದ್ದಾರೆ.
ಶಿವಮೊಗ್ಗದಲ್ಲಿಂದು ಮಾತನಾಡಿದ ಅವರು, ಶಿವಮೊಗ್ಗದ ಕೆಎಡಿಬಿ ಹಗರಣದ ಬಗ್ಗೆ ಮಾತಾಡಿದ್ದೆ. ಅದಕ್ಕೆ ಸಮಜಾಯಿಶಿ ಕೋಡ್ತಾರಂತ ತಿಳಿದುಕೊಂಡಿದ್ದ್ದೆ. ನಾನು ಸಂಸದ ರಾಘವೇಂದ್ರ ಹಾಗೂ ಬಿವೈ ವಿಜಯೇಂದ್ರ ವಿರುದ್ದ ಮಾತಾಡಿದ್ದೆ ಎಂದು ದಾರಿ ತಪ್ಪಿಸುವ ಸುದ್ದಿಗೋಷ್ಠಿಯನ್ನು ಹರತಾಳು ಹಾಲಪ್ಪ ಮಾಡಿದ್ದಾರೆ ಎಂದು ಆಯನೂರು ಮಂಜುನಾಥ್ ಕುಟುಕಿದ್ದಾರೆ.
ಹರತಾಳು ಹಾಲಪ್ಪ haratalu halappa
ಹತ್ತು ವರ್ಷದಿಂದ ಯಡಿಯೂರಪ್ಪನವರ ಬಗ್ಗೆ ಮಾತನಾಡದ ಹರತಾಳು ಹಾಲಪ್ಪ ಈಗ ಮಾತಾಡಿದ್ದಾರೆ. ಎಲ್ಲಾ ಸಂಕಷ್ಟದ ಸಂದರ್ಭದಲ್ಲಿ ಯಡಿಯೂರಪ್ಪ ಪರ ಮಾತಾಡಿದ್ದು ನಾನು ಮತ್ತು ರೇಣುಕಾಚಾರ್ಯ ಮಾತ್ರ .ಕೇವಲ ನಾನು ವಿಜಯೇಂದ್ರ ರಾಘವೇಂದ್ರ ಭ್ರಷ್ಟಾಚಾರದ ಬಗ್ಗೆ ಮಾತಾಡಿದ್ದೇನೆ, ಬಂಗಾರಪ್ಪರವರ ಮಕ್ಕಳ ಬಗ್ಗೆ ಮಾತಾಡಿದ್ದೀರಾ ಅಲ್ವಾ ಹಾಲಪ್ಪನವರೇ, ಸಾಮಾನ್ಯ ವ್ಯಕ್ತಿ ನಾನು ಯಡಿಯೂರಪ್ಪ ಕುಟುಂಬದ ಬಗ್ಗೆ ಮಾತಾಡೋಕೆ ಆಗುತ್ತಾ ಎಂದು ಪ್ರಶ್ನಿಸಿರುವ ಆಯನೂರು, ಯಡಿಯೂರಪ್ಪನವರು ರಾಜವಂಶಸ್ಥರು. ಶಿವಮೊಗ್ಗ ತಾಲೂಕಿನವೊಂದರಲ್ಲಿಯೇ 450 ಎಕರೆ ಭೂ ಮಾಲೀಕರು ಅವರು ಎಂದು ಹೇಳಿದ್ದಾರೆ
ಬಿಎಸ್ ಯಡಿಯೂರಪ್ಪನವರದ್ದು ರಾಜವಂಶ bs yediyurappa
ಶ್ರೀಮಂತ ರಾಜವಂಶಸ್ಥದ ಬಗ್ಗೆ ನನ್ನಂತ ಸಾಮಾನ್ಯ ವ್ಯಕ್ತಿ ಮಾತಾಡೋಕೆ ಆಗುತ್ತಾ ? ಬಿಜೆಪಿಯ ರಾಜ್ಯಾಧ್ಯಕ್ಷರ ಬಗ್ಗೆ ಹಾಗೂ ಸಂಸದರ ಬಗ್ಗೆ ಮಾತಾಡಿದ್ದೆ. ಸಹ್ಯಾದ್ರಿ ನಾರಾಯಣ ಹಾಸ್ಟಿಟಲ್ ವಿಜಯೇಂದ್ರ ಹೆಸರಿನಲ್ಲಿದೆ. ಗದಗದ ಮೂಲದ ವ್ಯಕ್ತಿಗಳ ಹೆಸರಿನ ಮೇಲೆ ರಾಘವೇಂದ್ರರವರು ಜಮೀನು ಮಾಡಿದ್ದಾರೆ. ಸಂಸದ ರಾಘವೇಂದ್ರ ಪತ್ನಿಯ ಸಹೋದರ ಯಾವಾಗ ಬಂದು ಇಲ್ಲಿ ಜಮೀನು ಮಾಡಿದ್ರು, ಬಸವಾಪುರದಲ್ಲಿರುವ 380 ಎಕರೆ ಇರುವ ಜಾಗ ಕೇಳಿದ್ದೇನಾ? ನಿಮ್ಮದು ರಾಜವಂಶ, ರಾಘವೇಂದ್ರ ಮತ್ತು ವಿಜಯೇಂದ್ರ ಇಬ್ಬರು ಸಾಮಂತರು, ನಾನೇಕೆ ಯಡಿಯೂರಪ್ಪನವರ ಕ್ಷೇಮೆ ಕೇಳಬೇಕು. ನಕಲಿ ಸಹಿ ಮಾಡಿ ಜೈಲಿಗೆ ಹೋಗಲು ನಾನು ಕಾರಣನಾ. ಕ್ಷಮೆ ಕೆಳುವ ಪ್ರಶ್ನೇಯೇ ಇಲ್ಲ ಎಂದು ಆಯನೂರು ಸ್ಪಷ್ಟಪಡಿಸಿದ್ದಾರೆ.
ರಾಜವಂಶದ ಋಣ ನಾನು ತಿಂದಿಲ್ಲ, ಯಡಿಯೂರಪ್ಪನವರಿಂದ ನಾನು ಬೆಳೆದಿಲ್ಲ ಅವರ ಸಹಕಾರ ಇದೆ ಅಷ್ಟೇ. ವಿದ್ಯಾರ್ಥಿಯಾಗಿದ್ದಾಗಲೇ ಬಳ್ಳಾರಿ, ಗುಲ್ಬರ್ಗ, ಬೆಂಗಳೂರು ಜೈಲಿನಲ್ಲಿ ಇದ್ದು ಬಂದವನು ನಾನು. ನಮ್ಮ ರೆಂಬೆ ಕೊಂಬೆ ಕತ್ತರಿಸಿದ್ದೂ ಯಾರು ಅಂತ ಗೊತ್ತಿದೆ ಎಂದು ಆಯನೂರು ಮಂಜುನಾಥ್ ಟೀಕಿಸಿದರು
weekly astrology kannada | ವಾರದ ಭವಿಷ್ಯ | ಈ ವಾರ ಈ ರಾಶಿಗಳಿಗೆ ವಿಶೇಷ ಸುದ್ದಿ
naga yakshi mata | ಸಾಮಾನ್ಯ ಸಾಧುವಾಗಿದ್ದು ಹೇಗೆ? ಶಿವಮೊಗ್ಗದ ನಿಗೂಢ ಅವಧೂತ ! JP ಬರೆಯುತ್ತಾರೆ
ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್ ಒಂದು ಫಾಲೋ ಕೊಡಿ