ayanur Shivamogga | ಆಯನೂರು ಬೇಕರಿಯಲ್ಲಿ ಬೆಂಕಿ | ಮೂರು ಸಲ ಸ್ಫೋಟ |

13

SHIVAMOGGA | MALENADUTODAY NEWS | Aug 21, 2024 ಮಲೆನಾಡು ಟುಡೆ  

ಶಿವಮೊಗ್ಗ ಆಯನೂರು ನಲ್ಲಿ ಬೇಕರಿ ಅಂಗಡಿಯೊಳಗೆ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿ ಹೊತ್ತಿಕೊಂಡು ಉರಿಯುತ್ತಿದೆ.  

ನಡೆದಿದ್ದೇನು?

ಆಯನೂರು (Ayanur) ಹಣಗೆರೆ ರಸ್ತೆಯಲ್ಲಿ ಈ ಘಟನೆ ಸಂಭವಿಸಿದೆ. ಇಲ್ಲಿನ ಎಸ್‌ಎಲ್‌ವಿ ಅಯ್ಯಂಗಾರ್‌ ಬೇಕರಿಯಲ್ಲಿ ಇವತ್ತು ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಾಣಿಸಿಕೊಂಡ ಕೆಲವೇ ಹೊತ್ತಿನಲ್ಲಿ ಅಂಗಡಿಯೊಳಗೆ ಮೂರು ಸಲ ಸ್ಫೋಟವಾಗಿದೆ. 

ಇನ್ನೂ ಸ್ಫೋಟಕ್ಕೆ ಗ್ಯಾಸ್‌ ಸಿಲಿಂಡರ್‌ ಕಾರಣ ಎನ್ನಲಾಗುತ್ತಿದೆ. ಬೆಂಕಿ ಹೊತ್ತಿಕೊಳ್ಳಲು ಕಾರಣ ಸ್ಪಷ್ಟವಾಗಿಲ್ಲ. ಘಟನೆ ಬೆನ್ನಲ್ಲೆ ಸ್ಥಳೀಯರು ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ. 

ಇಲ್ಲಿನ ಪೆಟ್ರೋಲ್‌ ಬಂಕ್‌ ಬಳಿಯೇ ಘಟನೆ ನಡೆದಿದ್ದು, ವಿಷಯ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದಾರೆ.  

 ಇನ್ನಷ್ಟು ಸುದ್ದಿಗಳು

Share This Article