ಮೊಟ್ಟೆ ಸತೀಶ ಮೇಲೆ ಹಲ್ಲೆ | ಎಸ್‌ಪಿ ಮಿಥುನ್‌ ಕುಮಾರ್‌ ಹೇಳಿದ್ದೇನು? |

Attack on Motte Satheesh | What did SP Mithun Kumar say?

ಮೊಟ್ಟೆ ಸತೀಶ ಮೇಲೆ ಹಲ್ಲೆ | ಎಸ್‌ಪಿ ಮಿಥುನ್‌ ಕುಮಾರ್‌ ಹೇಳಿದ್ದೇನು? |
Attack on Motte Satheesh , ಮೊಟ್ಟೆ ಸತೀಶ್

SHIVAMOGGA | MALENADUTODAY NEWS | Aug 16, 2024  ಮಲೆನಾಡು ಟುಡೆ  

ಶಿವಮೊಗ್ಗ ಕುಸ್ಕೂರಿನಲ್ಲಿ ಮೊಟ್ಟೆ ಸತೀಶ್‌ ಮೇಲೆ ನಡೆದ ಹಲ್ಲೆ ಸಂಬಂಧ ಶಿವಮೊಗ್ಗ ಎಸ್‌ಪಿ ಮಿಥುನ್‌ ಕುಮಾರ್‌ ರವರು ಮಲೆನಾಡು ಟುಡೆಗೆ ಮಾಹಿತಿ ನೀಡಿದ್ದಾರೆ. 

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ

ಶಿವಮೊಗ್ಗ ಎಸ್‌ಪಿ ಮಿಥುನ್‌ ಕುಮಾರ್‌ 

ಈ ಸಂಬಂಧ ಪ್ರತಿಕ್ರಿಯಿಸಿರುವ ಅವರು, ಮೊಟ್ಟೆ ಸತೀಶ್‌ ಮೇಲೆ ಹಲ್ಲೆ ನಡೆದಿರುವುದು ಜಮೀನು ವ್ಯಾಜ್ಯದ ಸಲುವಾಗಿ ಎಂದು ಸ್ಪಷ್ಟಪಡಿಸಿದ್ದಾರೆ. ಜಮೀನು ಖರೀದಿಯ ವಿಚಾರಕ್ಕೆ ಸತ್ಯನಾರಾಯಣ ರಾಜು ವ್ಯಾಜ್ಯ ಹೊಂದಿದ್ದರು. ಅದೇ ಕಾರಣಕ್ಕೆ ಅವರ ಮೇಲೆ ಹಲ್ಲೆ ನಡೆದಿದೆ. ಈ ಪ್ರಕರಣದಲ್ಲಿ ರೌಡಿ ಎಲಿಮೆಂಟ್ಸ್‌ ಕಂಡು ಬಂದಿಲ್ಲ ಎಂದಿದ್ದಾರೆ. 

ನಡೆದಿದ್ದು ಏನು

ಮಾಜಿ ಕಾರ್ಪೊರೇಟರ್‌ ಸತ್ಯನಾರಾಯಣ ರಾಜು (ಮೊಟ್ಟೆ ಸತೀಶ್)‌ ಕುಸ್ಕೂರು ಬಳಿ ಜಮೀನು ವಿಚಾರವಾಗಿ ಈ ಹಲ್ಲೆ  ನಡೆದಿದೆ. ಜಮೀನು ಖರೀದಿ ವಿಚಾರಕ್ಕೆ ಸತೀಶ್‌ ವ್ಯಾಜ್ಯ ಹೊಂದಿದ್ದರು. ನಿನ್ನೆ ದಿನ ರಾತ್ರಿ  ತಮ್ಮ ಜಮೀನಿನ ಬಳಿ ಸತೀಶ್‌ ತೆರಳಿದ್ದಾಗ. ಅವರ ಕಾರಿನ ಮೇಲೆ ದೊಣ್ಣೆಗಳಿಂದ ಗುಂಪೊಂದು ದಾಳಿ ನಡೆಸಿದೆ . ಬಳಿಕ ಸತೀಶ್‌ ಮೇಲೆ ಗುಂಪು ಹಲ್ಲೆ ಮಾಡಿದೆ. ಸತೀಶ್‌ ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದಾರೆ. ತಮ್ಮ ಮೇಲೆ ಹಲ್ಲೆಯ ಆತಂಕದಿಂದ ಸತೀಶ್‌ ತುಂಗಾ ನಗರ ಪೊಲೀಸ್‌ ಠಾಣೆಯಲ್ಲಿ ನಿನ್ನೆಯೇ ದೂರು ನೀಡಿದ್ದರು