ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ಮತ್ತೊಂದು OTP ವಂಚನೆ! ₹3.48 ಲಕ್ಷ ಮಂಗಮಾಯ! ನಡೆದಿದ್ದೇನು?

Malenadu Today

MALENADUTODAY.COM | SHIVAMOGGA  | #KANNADANEWSWEB

ಯಾವುದೇ ಬ್ಯಾಂಕ್​ಗಳು ಗ್ರಾಹಕರ ಮೊಬೈಲ್​ಗೆ ಕರೆಮಾಡಿ, ಅವರಿಗೆ ಸಂಬಂಧಿಸಿದ OTP  ಗಳನ್ನು ಕೇಳುವುದಿಲ್ಲ ಎಂಬುದನ್ನ ಮತ್ತೊಮ್ಮೆ ಹೇಳುತ್ತಿದ್ದೇವೆ. ಈ ಸಂಬಂಧ ಬ್ಯಾಂಕ್​ಗಳು ಹಾಗೂ ಶಿವಮೊಗ್ಗ ಪೊಲೀಸರು ಓಟಿಪಿ ವಂಚನೆಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. 

Malenadu Today

ಇದರ ನಡುವೆಯು, ಜನರನ್ನ ಯಾಮಾರಿಸುವಂತಃ ಘಟನೆಗಳು ನಡೆಯುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾಗರ ತಾಲ್ಲೂಕಿನಲ್ಲಿ 3.48 ಲಕ್ಷ ರೂಪಾಯಿ ವಂಚನೆ ಮಾಡಲಾಗಿದೆ. ಖಾಸಗಿ ಬ್ಯಾಂಕ್ ಒಂದರ ಸಿಬ್ಬಂದಿ ತಾವು ಎಂದು ಕರೆ ಮಾಡಿದ ಮಹಿಳೆಯೊಬ್ಬರು, ಗ್ರಾಹಕರೊಬ್ಬರಿಂದ ಹಲವು ಬಾರಿ ಓಟಿಪಿ ಪಡೆದು, (otp fraud) ಹಣ ವಿತ್​ಡ್ರಾ  ಮಾಡಿಕೊಂಡಿದ್ದಾರೆ. ಮೊಬೈಲ್ಗೆ ಬಂದ ಒಟಿಪಿ ಕೊಟ್ಟ ಬೆನ್ನಲ್ಲೇ ಈ ರೀತಿಯಾಗಿ ಒಟ್ಟು ಮೂರು ಲಕ್ಷದ 48 ಸಾವಿರ ಅಕೌಂಟ್ನಿಂದ ವರ್ಗಾವಣೆಗೊಂಡಿದೆ. ಈ ಸಂಬಂಧ ಸಾಗರ ಟೌನ್​ ಪೊಲೀಸರಿಗೆ ಕಂಪ್ಲೇಂಟ್ ಕೊಡಲಾಗಿದ್ದು, ಪೊಲೀಸರು ತನಿಖೆ ನಡೆಸ್ತಿದ್ಧಾರೆ. 

BREAKING : ಮತ್ತೊಂದು ದರೋಡೆ ಯತ್ನವನ್ನು ತಡೆದ ಶಿವಮೊಗ್ಗ ಪೊಲೀಸ್! ನಾಲ್ವರ ಬಂಧನ !

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com

Share This Article