ಬೈಕ್‌ನಲ್ಲಿ ಬರ್ತಿದ್ದವನನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ, ಗನ್ ತೋರಿಸಿ ಬೆದರಿಕೆ | ಏನಿದು ತೀರ್ಥಹಳ್ಳಿಯಲ್ಲಿ
assault with deadly weapons, Thirthahalli taluk , Shivamogga district.

SHIVAMOGGA | MALENADUTODAY NEWS | ಮಲೆನಾಡು ಟುಡೆ Feb 3, 2025
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕುನಲ್ಲಿ ನಿನ್ನೆ ದಿನ ಸಂಜೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ ಘಟನೆಯೊಂದು ವರದಿಯಾಗಿದೆ. ಇಲ್ಲಿನ ಕಟ್ಟೆಹಕ್ಲು ಸಮೀಪ ಏಳಿಗೆ ಮಜರೆ ಗ್ರಾಮದ ಬಳಿ ಘಟನೆ ನಡೆದಿದೆ.
ತೀರ್ಥಹಳ್ಳಿ ಸುದ್ದಿ
ತಾಲ್ಲೂಕಿನ ಶೇಡ್ಗಾರು ಗ್ರಾಮಪಂಚಾಯಿತಿಯಲ್ಲಿ ಬರುವ ಬಿಳುಕೊಪ್ಪದ ಪುನೀತ್ ಎಂಬವರ ಮೇಲೆ ಹಲ್ಲೆ ಮಾಡಲಾಗಿದೆ. ಬೈಕ್‌ನಲ್ಲಿ ಬರುತ್ತಿದ್ದ ಇವರನ್ನ ಸಹೋದರಿಬ್ಬರು ತಮ್ಮ ಕಾರಿನಲ್ಲಿ ಚೇಸ್ ಮಾಡಿಕೊಂಡು ಬಂದ ಅಡ್ಡಹಾಕಿದ್ದಾರೆ. ಅಲ್ಲದೆ ಮಾರಕಾಸ್ತ್ರದಿಂದ ಪುನೀತ್ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲದೆ ನಾಡಬಂದೂಕು ತೋರಿಸಿ ಭಯ ಬೀಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ನಡುವೆ ಸ್ಥಳೀಯರು ಗಲಾಟೆ ಗಮನಿಸಿ ಸ್ಥಳಕ್ಕೆ ಬರುವ ಸಂದರ್ಭದಲ್ಲಿ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಸದ್ಯ ಗಾಯಗೊಂಡಿರುವ ಪುನೀತ್‌ರನ್ನ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
SUMMARY | An incident of assault with deadly weapons was reported yesterday evening in Thirthahalli taluk of Shivamogga district.
KEY WORDS | assault with deadly weapons, Thirthahalli taluk , Shivamogga district.