ತೋಟದ ಮನೆಯಲ್ಲಿದ್ದವನನ್ನು ಹುಡುಕಿಕೊಂಡು ಬಂದು ಹಲ್ಲೆ | ಆಗುಂಬೆಯಲ್ಲಿ ನಡೆದಿದ್ದೇನು?
assault case in agumbe police station , thirthahalli news , kavarihaklu

SHIVAMOGGA | MALENADUTODAY NEWS | ಮಲೆನಾಡು ಟುಡೆ Feb 18, 2025
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಆಗುಂಬೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರ ಮೇಲೆ ತೀವ್ರವಾಗಿ ಹಲ್ಲೆ ಮಾಡಲಾಗಿದೆ. ಇಲ್ಲಿನ ಗೋಪಾಲ ಎಂಬವರು ಹಲ್ಲೆಗೊಳಗಾಗಿದ್ದು, ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಒದಗಿಸಲಾಗಿದೆ.
ಗೋಪಾಲ ಆಗುಂಬೆ ಸಮೀಪದ ಕವರಿಹಕ್ಕಲಿನ ತೋಟವೊಂದರಲ್ಲಿ ಕೆಲಸ ಮಾಡುತ್ತಿದ್ದು, ತೋಟದ ಮನೆಯಲ್ಲಿ ವಾಸವಿದ್ದರು. ಮನೆಯಲ್ಲಿ ಇದ್ದ ಸಂದರ್ಭದಲ್ಲಿ ಬೈಕ್‌ನಲ್ಲಿ ಬಂದ ಇಬ್ಬರು ಇವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಪೆಟ್ಟು ತಿನ್ನಲಾಗದೆ ಗೋಪಾಲರವರು ಕಿರುಚುತ್ತಿದ್ದುದನ್ನು ಗಮನಿಸಿ ಸ್ಥಳಕ್ಕೆ ತೋಟದ ರೈಟರ್ ಓಡಿ ಬಂದಿದ್ದಾರೆ. ಈ ವೇಳೆ ಆರೋಪಿಗಳು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಹಲ್ಲೆ ಮಾಡಿದವರು ಗುರುತು ಸಹ ಪತ್ತೆಯಾಗಿದ್ದು, ಘಟನೆಗೆ ಕಾರಣದ ಬಗ್ಗೆ ಸ್ಥಳೀಯವಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈ ಸಂಬಂಧ ಆಗುಂಬೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸ್ತಿದ್ದಾರೆ.
SUMMARY | assault case in agumbe police station , thirthahalli news , kavarihaklu
KEY WORDS | assault case in agumbe police station , thirthahalli news , kavarihaklu