ಭರ್ಜರಿ ಬೇಟೆ | ಬೊಮ್ಮನಕಟ್ಟೆಯ ಜಾಕ್‌ ಸೇರಿ ಮುರಗೋಡು, ಸುಣ್ಣ, ನುಗ್ಗೆ ಬಂಧನ |

Shivamogga Rural Police have cracked a arecanut theft case worth Rs 1.5 lakh and arrested five accused. During the interrogation of the accused, cases of theft in the past came to light. 

ಭರ್ಜರಿ ಬೇಟೆ | ಬೊಮ್ಮನಕಟ್ಟೆಯ ಜಾಕ್‌ ಸೇರಿ ಮುರಗೋಡು, ಸುಣ್ಣ,  ನುಗ್ಗೆ ಬಂಧನ |
Shivamogga Rural Police , arecanut theft case

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 18, 2024

ಶಿವಮೊಗ್ಗ ಗ್ರಾಮಾಂತರ ಪೊಲೀಸ್‌ ಠಾಣೆ ಪೊಲೀಸರು ಒಂದುವರೆ ಲಕ್ಷ ಮೌಲ್ಯದ ಅಡಿಕೆ ಕಳವು ಪ್ರಕರಣವನ್ನು ಭೇದಿಸಿ ಐವರು ಆರೋಪಿಗಳನ್ನ ಅರೆಸ್ಟ್‌ ಮಾಡಿದ್ದಾರೆ. ಅಲ್ಲದೆ ಆರೋಪಿತರ ವಿಚಾರಣೆ ವೇಳೆ  ಈ ಹಿಂದೆ ನಡೆಸಿದ್ದ ಕಳ್ಳತನ ಪ್ರಕರಣಗಳು ಬಯಲಿಗೆ ಬಂದಿದೆ. 

ಶಿವಮೊಗ್ಗ ಗ್ರಾಮಾಂತರ ಪೊಲೀಸ್‌ ಠಾಣೆ

ಇಲ್ಲಿನ ಹಾಡೋನಹಳ್ಳಿ ನಿವಾಸಿಯೊಬ್ಬರು ತಮ್ಮ ಗೋಡೌನ್ ನಲ್ಲಿ  ಒಣ ಅಡಿಕೆಯನ್ನು ಶೇಖರಿಸಿ ಇಟ್ಟಿದ್ದರು.  ದಿನಾಂಕಃ 05-11-2024  ರಂದು ಕಳ್ಳರು ಈ ಗೋಡೌನ್‌ನಲ್ಲಿದ್ದ ಅಂದಾಜು ಮೌಲ್ಯ 1,50,000/-  ರೂಗಳ 04  ಕ್ವಿಂಟಾಲ್ ತೂಕದ ಒಣ ಅಡಿಕೆಯನ್ನು ಕಳ್ಳತನ ಮಾಡಿದ್ದರು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು. ಇದೀಗ ಪ್ರಕರಣದ ಆರೋಪಿಗಳನ್ನ ಬಂಧಿಸಿದ್ದಾರೆ  

ಆರೋಪಿಗಳು

1) ಅನಿಲ್ ಆರ್ @ ಜಾಕ್, 26  ವರ್ಷ, ಬೊಮ್ಮನಕಟ್ಟೆ, ಶಿವಮೊಗ್ಗ,

2) ಲೋಕೇಶ್ @ ವಿಜಯ್,  27  ವರ್ಷ, ವಿಠಲಾಪುರ ಭದ್ರಾವತಿ, 

3) ಮನೋಜ @ ಮುರಗೋಡು @ ಗರುಡ, 20 ವರ್ಷ, ಬಸವನಗುಡಿ ಶಿವಮೊಗ್ಗ, 

4) ನವೀನ್ ಪಿ @ ನುಗ್ಗೆ, 23  ವರ್ಷ, ಹಾಡೋನಹಳ್ಳಿ ಶಿವಮೊಗ್ಗ 

5) ಚಂದು ಎಸ್ @ ಸುಣ್ಣ @ ಡ್ಯೂಕ್ ಚಂದು, 20  ವರ್ಷ, ಮಡಿಕೆ ಚೀಲೂರು

ಈ ಆರೋಪಿತರಿಂದ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 2024ನೇ ಸಾಲಿನಲ್ಲಿ ವರದಿಯಾಗಿದ್ದ ಒಟ್ಟು 03  ಅಡಿಕೆ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದ, ಅಂದಾಜು ಮೌಲ್ಯ 7,35,000/-  ರೂಗಳ, 15  ಕ್ವಿಂಟಾಲ್ 08  ಕೆಜಿ ತೂಕದ ಒಣ ಅಡಿಕೆ ಮತ್ತು ಕೃತ್ಯಕ್ಕೆ ಉಪಯೋಗಿಸಿದ ಅಂದಾಜು ಮೌಲ್ಯ 1,40,000 /- ರೂಗಳ 2 ದ್ವಿಚಕ್ರವಾಹನಗಳು ಹಾಗೂ  ಅಂದಾಜು ಮೌಲ್ಯ 1,50,000/- ರೂಗಳ 1 ಪ್ಯಾಸೇಜರ್ ಆಟೋ ಸೇರಿ ಒಟ್ಟು 10,25,000/- ರೂಗಳ ಮಾಲನ್ನು ಅಮಾನತ್ತು ಪಿಡಿಸಿಕೊಂಡಿದ್ದಾರೆ. 

SUMMARY | Shivamogga Rural Police have cracked a arecanut theft case worth Rs 1.5 lakh and arrested five accused. During the interrogation of the accused, cases of theft in the past came to light. 

KEY WORDS | Shivamogga Rural Police , arecanut theft case