ಸಾಗರದಲ್ಲಿ ಡಿಸೆಂಬರ್ 6 ಕ್ಕೆ ಅಡಕೆ ಬೆಳಗಾರರ ಶಕ್ತಿಪ್ರದರ್ಶನ ! ವಿವರ ಹೀಗಿದೆ
On December 6, a convention of arecanut growers will be held in Sagar taluk
SHIVAMOGGA | MALENADUTODAY NEWS | ಮಲೆನಾಡು ಟುಡೆ Nov 21, 2024
ಅಡಿಕೆ ಬೆಳೆಗಾರರ ಸಮಸ್ಯೆಗಳನ್ನ ಅಧಿಕಾರ ವ್ಯವಸ್ಥೆಗೆ ಮುಟ್ಟಿಸುವ ಸಲುವಾಗಿ ಇದೇ ಡಿಸೆಂಬರ್ 6 ರಂದು ಸಾಗರದಲ್ಲಿ ಅಡಿಕೆ ಬೆಳಗಾರರ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ಸಂಬಂಧ ಹಿರಿಯ ಸಹಕಾರಿ ಎಚ್.ಎಸ್. ಮಂಜಪ್ಪ ಹೊಸಬಾಳೆ ಮಾಹಿತಿ ನೀಡಿದ್ದಾರೆ.
ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದಿಂದ ನಡೆದ ಅಡಕೆ ಬೆಳೆಗಾರರ ಸಮಾವೇಶದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು ದೇಶದಲ್ಲಿ ಅಡಕೆ ಪೂಜ್ಯ ಮತ್ತು ಔಷಧೀಯ ವಸ್ತುವಾಗಿ ಬಳಕೆಯಲ್ಲಿದೆ. ಈ ವಿಚಾರವನ್ನು ಸುಪ್ರೀಂಕೋರ್ಟ್‌ಗೆ ಮನವರಿಕೆ ಮಾಡಿಕೊಡಬೇಕಿದೆ. ಇದು ನಮ್ಮ ಆದ್ಯತೆಯಾಗಲಿದೆ ಎಂದಿದ್ದಾರೆ.
ಅಡಕೆಯೊಂದಿಗೆ ತಂಬಾಕು, ಇತರ ರಾಸಾಯನಿಕ ಬೆರೆಸಿದರೆ ಆರೋಗ್ಯಕ್ಕೆ ಹಾನಿ ಕರವಾಗಿರುತ್ತದೆ. ಬರೀ ಅಡಕೆ ಸೇವನೆ ಹಾನಿಕಾರಕವಲ್ಲ. ಇದು ಹಲವು ಸಂಶೋಧನೆಗಳಲ್ಲಿ ಋಜುವಾತಾಗಿದೆ.ಆದರೆ ಸಿಗರೇಟು ಕಂಪನಿಗಳ ಲಾಭಿಯಿಂದಾಗಿ ಅಡಕೆ ನಿಷೇದದ ಕುತಂತ್ರ ನಡೆಯುತ್ತಿದೆ ಎಂದು ಅವರು ಆಪಾದಿಸಿದರು.
ಈ ನಿಟ್ಟಿನಲ್ಲಿ ಡಿಸೆಂಬರ್ ಆರರಂದು ನಡೆಯಲಿರುವ ಅಡಿಕೆ ಸಮಾಔಏಶದಲ್ಲಿ ಅಡಿಕೆ ಬೆಳೆಗಾರರ ಶಕ್ತಿಪ್ರದರ್ಶನ ಮಾಡಬೇಕಿದೆ ಎಂದ ಅವರು, ಸಮಾವೇಶದಲ್ಲಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸಂಸದ ರಾಘವೇಂದ್ರ, ಶಾಸಕ ಆರಗ ಜ್ಞಾನೇಂದ್ರ, ಮಾಜಿ ಸಚಿವ ಹರತಾಳು ಹಾಲಪ್ಪ ಸೇರಿದಂತೆ ಹಲವು ಗಣ್ಯರು ಪಾಳ್ಗೊಳ್ಳಿದ್ದಾರೆ ಅಂತಾ ಮಾಹಿತಿ ನೀಡಿದರು.
SUMMARY | On December 6, a convention of arecanut growers will be held in Sagar taluk.
KEY WORDS | arecanut growers convention , Sagar taluk