ಶಿವಮೊಗ್ಗ AIRPORT ನಿಂದ ಮುಂಬೈ, ಶಿರಡಿ, ಅಹಮದಾಬಾದ್‌ಗೆ ಪ್ಲೈಟ್?
MP BY Raghavendra appealed to the central government, allow flights from Shivamogga Airport ,Mumbai, Shirdi, Ahmedabad, inDigo Airlines, spice Jet Airlines, Star Airlines, Shivamogga to Chennai, Hyderabad, Bangalore, Tirupati, Goa flights
SHIVAMOGGA | MALENADUTODAY NEWS | ಮಲೆನಾಡು ಟುಡೆ Dec 27, 2024
ಶಿವಮೊಗ್ಗ ವಿಮಾನ ನಿಲ್ದಾಣದಿಂದ ಮುಂಬೈ, ಶಿರಡಿ, ಅಹಮದಾಬಾದ್ ನಗರಗಳಿಗೆ ವಿಮಾನಗಳ ಹಾರಾಟಕ್ಕೆ ಅವಕಾಶ ನೀಡುವಂತೆ ಸಂಸದ ಬಿವೈ ರಾಘವೇಂದ್ರ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ವಿಮಾನಯಾನ ನಾಗರಿಕ ಸಚಿವರಿಗೆ ಸಲ್ಲಿಸಿರುವ ಮನವಿಯಲ್ಲಿ ಸಂಸದ ಬಿವೈ ರಾಘವೇಂದ್ರ ಶಿವಮೊಗ್ಗದಲ್ಲಿ ಇಂಡಿಗೋ ಏರ್‌ಲೈನ್ಸ್, ಸ್ಪೈಸ್ ಜೆಟ್ ಏರ್‌ಲೈನ್ಸ್ ಮತ್ತು ಸ್ಟಾರ್ ಏರ್‌ಲೈನ್ಸ್ ಸಂಸ್ಥೆಗಳು ಶಿವಮೊಗ್ಗದಿಂದ ಚೆನ್ನೈ, ಹೈದ್ರಾಬಾದ್, ಬೆಂಗಳೂರು, ತಿರುಪತಿ, ಗೋವಾ, ನಗರಗಳಿಗೆ ಪ್ರತಿನಿತ್ಯ ವಿಮಾನಯಾನ ಸೇವೆ ನೀಡುತ್ತಿವೆ. ಇದಕ್ಕೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ಸಹ ವ್ಯಕ್ತವಾಗಿದೆ.
ಈ ನಿಟ್ಟಿನಲ್ಲಿ ಇನ್ನಷ್ಟು ಪ್ರದೇಶಗಳಿಗೆ ವಿಮಾನಯಾನ ಸೌಕರ್ಯ ಕಲ್ಪಿಸುವಂತೆ ಜಿಲ್ಲೆಯ ನಾಗರೀಕರು ಮತ್ತು ಶಿವಮೊಗ್ಗ ಅಕ್ಕ-ಪಕ್ಕದ ಜಿಲ್ಲೆಯ ನಾಗರಿಕರಿಂದ ಬೇಡಿಕೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಮುಂಬೈ-ಶಿವಮೊಗ್ಗ-ಮುಂಬೈ, ಶಿರಡಿ-ಶಿವಮೊಗ್ಗ-ಶಿರಡಿ ಮತ್ತು ಬೆಂಗಳೂರು-ಶಿವಮೊಗ-ಮುಂಬೈ- ಅಹಮದಾಬಾದ್ ಮಾರ್ಗಗಳಲ್ಲಿ ವಿಮಾನ ಸಂಚಾರ ಆರಂಭಿಸುವಂತೆ ಮನವಿ ಮಾಡಿದ್ದಾರೆ.
SUMMARY |MP BY Raghavendra has appealed to the central government to allow flights from Shivamogga Airport to Mumbai, Shirdi, and Ahmedabad.
KEY WORDS | MP BY Raghavendra appealed to the central government, allow flights from Shivamogga Airport ,Mumbai, Shirdi, Ahmedabad, inDigo Airlines, spice Jet Airlines, Star Airlines, Shivamogga to Chennai, Hyderabad, Bangalore, Tirupati, Goa flights