ಶಿವಮೊಗ್ಗ ಅಷ್ಟೆ ಅಲ್ಲದೆ ಚಿಕ್ಕಮಗಳೂರು, ಕೊಡಗು, ಧರ್ಮಸ್ಥಳದಲ್ಲಿಯು ಹಾರಾಡಲಿದೆ ವಿಮಾನ!? ಹೇಗೆ ಗೊತ್ತಾ
Shivamogga airport, airstrips in Chikkamalur, Kodagu , Dharmasthala
SHIVAMOGGA | MALENADUTODAY NEWS | ಮಲೆನಾಡು ಟುಡೆ Dec 26, 2024
ಶಿವಮೊಗ್ಗದ ವಿಮಾನ ನಿಲ್ದಾಣ ಹೆಚ್ಚುಕಮ್ಮಿ ಸಕ್ಸಸ್ ಕಾಣುತ್ತಿರುವ ಬೆನ್ನಲ್ಲೆ ಸರ್ಕಾರ ಚಿಕ್ಕಮಳೂರು ಹಾಗೂ ಕೊಡಗು ಮತ್ತು ಧರ್ಮಸ್ಥಳದಲ್ಲಿ ಏರ್‌ಸ್ಟ್ರಿಪ್ ನಿರ್ಮಿಸಲು ಮುಂದಾಗಿದೆ. ಅಂದರೆ ಕೇವಲ ವಿಮಾನಗಳು ಇಳಿಯಲು ಮತ್ತು ಅಲ್ಲಿಂದ ಹಾರಾಟ ನಡೆಸಲು ಅನುಕೂಲವಾಗುವ ಸ್ಥಳವನ್ನು ನಿರ್ಮಿಸಲು ಮುಂದಾಗಿದೆ. ಇದಕ್ಕಾಗಿ ಚಿಕ್ಕಮಗಳೂರು ಹಾಗೂ ಕೊಡಗಿನಲ್ಲಿ ಜಾಗವನ್ನು ಸಹ ಗುರುತಿಸಲಾಗಿದ್ದು, ಧರ್ಮಸ್ಥಳದಲ್ಲಿ ಇನ್ನಷ್ಟೆ ಜಾಗವನ್ನ ಹುಡುಕಬೇಕಿದೆ. ಈ ಸಂಬಂಧ ಪೂರ್ವ ಸಿದ್ದತಾ ಕೆಲಸಗಳು ನಡೆಯುತ್ತಿವೆ ಎಂದು ರಾಜ್ಯ ಮಟ್ಟದ ಪತ್ರಿಕೆಯೊಂದು ವರದಿ ಮಾಡಿದೆ.
ಒಂದು ರನ್ ವೇ ಹಾಗೂ ಏರ್ ಟ್ರಾಫಿಕ್ ಕಂಟ್ರೋಲ್ ಯುನಿಟ್ ಮಾತ್ರವೇ ಹೊಂದಿರುವ ಏರ್‌ಸ್ಟ್ರಿಪ್ ನಿರ್ಮಾಣಕ್ಕೆ 140 ಏಕೆರೆ ಭೂಮಿಯ ಅಗತ್ಯವಿದೆ ಎನ್ನಲಾಗಿದೆ. ರಾಜ್ಯ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಎಸ್‌ಐಐಡಿಸಿ)ದ ಅಧಿಕಾರಿಗಳ ತಂಡ ಈ ನಿಟ್ಟಿನಲ್ಲಿ ಸ್ಥಳ ಪರಿಶೀಲನೆ ನಡೆಸಿ ವರದಿ ತಯಾರಿಸಲಿದೆ. ಅಂತಿಮವಾಗಿ ಅಂದುಕೊಂಡಂತೆ ನಡೆದರೆ ಚಿಕ್ಕಮಗಳೂರು, ಕೊಡಗು ಹಾಗೂ ಧರ್ಮಸ್ಥಳದಲ್ಲಿಯು ಪ್ಲೈಟ್‌ಗಳು ಸಂಚಾರ ನಡೆಸಲಿದೆ.
SUMMARY | With the airport in Shivamogga proving to be a success, the government is planning to build airstrips in Chikkamalur, Kodagu and Dharmasthala.
KEY WORDS | Shivamogga airport, airstrips in Chikkamalur, Kodagu , Dharmasthala