ತೀರ್ಥಹಳ್ಳಿ: ಪೈನಾನ್ಸ್​ ಕಿರುಕುಳ! ವ್ಯಕ್ತಿ ಸಾವು! ಶಿಕಾರಿಪುರ ರೈತ ಆತ್ಮಹತ್ಯೆ! ಕಾರು, ಬೈಕ್ ಡಿಕ್ಕಿ ಇಬ್ಬರ ಸಾವು!

ajjimane ganesh

ಡಿಸೆಂಬರ್,02, 2025 : ಮಲೆನಾಡು ಟುಡೆ ಸುದ್ದಿ : ಎರಡು ಕಡೆಗಳಲ್ಲಿ ರಸ್ತೆ ಅಪಘಾತ, ಸಾಲಬಾಧೆಗೆ ರೈತ ಬಲಿ, ಇವತ್ತಿನ ಬೆಳಗ್ಗಿನ ಸಂಕ್ಷಿಪ್ತ ಸುದ್ದಿಗಳು ವಿವರ ಹೀಗಿದೆ. ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಗಳ ವ್ಯಾಪ್ತಿಯಲ್ಲಿ ನಿನ್ನೆ ದಿನ ಸೋಮವಾರದಂದು ಎರಡು ಕಡೆಗಳಲ್ಲಿ ರಸ್ತ ಅಪಘಾತ (Accidents in Malenadu)ಸಂಭವಿಸಿದೆ. 

ಕೃಷ್ಣಮೃಗಗಳ ಮೇಲೆ ನಿಗಾ, 3 ದಿಕ್ಕುಗಳಿಗೂ ಶಿವಮೊಗ್ಗದಿಂದ ರೈಲು ಸಂಪರ್ಕ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್​ನಲ್ಲಿ

ಖಾಸಗಿ ಬಸ್‌ಗೆ ಬೈಕ್ ಡಿಕ್ಕಿ: ಗಾರ್ಮೆಂಟ್ಸ್ ಉದ್ಯೋಗಿ ಸಾವು/ Accidents in Malenadu

ಶಿಕಾರಿಪುರ ಪಟ್ಟಣದ ಹೊರವಲಯದಲ್ಲಿರುವ ಶಿವಮೊಗ್ಗ ರಸ್ತೆಯಲ್ಲಿ ಸೋಮವಾರ ಸಂಜೆ ನಡೆದ ಅಪಘಾತದಲ್ಲಿ ಬೈಕ್‌ಗೆ ಖಾಸಗಿ ಶಾಲಾ ಬಸ್ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಪಟ್ಟಣದ ಆಶ್ರಯ ಬಡಾವಣೆ ನಿವಾಸಿ ವಿನಾಯಕ (36) ಮೃತ ದುರ್ದೈವಿ. ಶಾಹಿ ಗಾರ್ಮೆಂಟ್ಸ್ ಉದ್ಯೋಗಿಯಾಗಿದ್ದ ವಿನಾಯಕರವು ಬೈಕ್​ ತೆರಳುತ್ತಿದ್ದರು. ಈ  ವೇಳೆ ಹಿಂದಿನಿಂದ ಬಂದು ಶಾಲಾ ಬಸ್‌ಗೆ ಡಿಕ್ಕಿ ಹೊಡೆದಿದ್ದಾರೆ. ಈ ಘಟನೆಯಲ್ಲಿ ಬೈಕ್ ಸವಾರ ಸ್ತಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇನ್ನೂ ಬೈಕ್‌ನ ಹಿಂಬದಿ ಸವಾರ ಮೋಹನ್ ಅವರು ಗಾಯಗೊಂಡಿದ್ದು, ಅವರನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಈ ಕುರಿತು ಶಿಕಾರಿಪುರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಲೆನಾಡಲ್ಲಿ ಅಡಿಕೆ ದರ ಏರಿಳಿತ: ಶಿವಮೊಗ್ಗ, ಸಾಗರ ಸೇರಿದಂತೆ ಹಲವು APMC ಅಡಕೆ ರೇಟ್‌ಗಳು ಇಲ್ಲಿವೆ

ಸಾಲದ ಹೊರೆ ತಾಳಲಾರದೆ ರೈತ ಆತ್ಮಹತ್ಯೆ

ಶಿಕಾರಿಪುರ ತಾಲ್ಲೂಕಿನ ಹಿರೇಕೊರಲಹಳ್ಳಿ ಗ್ರಾಮದ 70 ವರ್ಷದ ವೃದ್ಧ ರೈತ ಪೀಕ್ಲಾ ನಾಯ್ಕ ಸಾಲದ ಬಾಧೆ ತಾಳಲಾರದೆ ಸೋಮವಾರ ಅಂಜನಾಪುರ ಜಲಾಶಯದ ಹಿನ್ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲ ತೀರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಕುಟುಂಬ ಸದಸ್ಯರ ನಡುವೆ ನಡೆದ ಗಲಾಟೆಯಿಂದ ಬೇಸತ್ತ ಇವರು ಜಮೀನಿನ ಬಳಿಯಿದ್ದ ಅಂಜನಾಪುರ ಜಲಾಶಯದ ಹಿನ್ನೀರಿಗೆ ಹಾರಿದ್ದಾರೆ. ಪೀಕ್ಲಾ ನಾಯ್ಕ ಹಾರೇಗೊಪ್ಪ ಗ್ರಾಮೀಣ ಬ್ಯಾಂಕ್‌ನಲ್ಲಿ 3 ಲಕ್ಷ ರೂಪಾಯಿ ಹಾಗೂ ಫೈನಾನ್ಸ್ ಮತ್ತು ಹಲವೆಡೆ ಕೈಸಾಲ ಮಾಡಿಕೊಂಡಿದ್ದರು ಈ ಸಂಬಂಧ ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Accidents in Malenadu
Accidents in Malenadu

ಶಿವಮೊಗ್ಗ, ಚನ್ನಗಿರಿ, ದಾವಣಗೆರೆ, ಶಿರಸಿ! ಎಷ್ಟಿದೆ ಅಡಕೆ ರೇಟು? ಮಾರ್ಕೆಟ್​ನಲ್ಲಿ ಏನಾಗ್ತಿದೆ?

ಚನ್ನಗಿರಿ: ಕಾರ್ ಡಿಕ್ಕಿ ಬೈಕ್ ಸವಾರ ಸಾವು

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಮಾದಾಪುರ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 369 ರಲ್ಲಿ ಸೋಮವಾರ ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದ ಕಾರಣ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ತಾಲ್ಲೂಕಿನ ಕೊರಟಿಕೆರೆ ಗ್ರಾಮದ ರಾಜಪ್ಪ (65) ಮೃತಪಟ್ಟವರು. ಚನ್ನಗಿರಿಯಿಂದ ಕೊರಟಿಕೆರೆ ಗ್ರಾಮಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ವೇಗವಾಗಿ ಬಂದ ಕಾರು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ 

ಚಿಟ್ ಫಂಡ್ ಕಿರುಕುಳ, ಮನನೊಂದು ವ್ಯಕ್ತಿ ಆತ್ಮಹತ್ಯೆ

ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರು ಸಮೀಪದ ಹೊಸಕೇರಿ ನಿವಾಸಿ ನಾಗರಾಜ (52) ಅವರು ಡೆತ್ ನೋಟ್ ಬರೆದಿಟ್ಟು ಭಾನುವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಚಿಟ್ ಫಂಡ್ ವ್ಯವಹಾರವೊಂದಕ್ಕೆ ಸಂಬಂಧಿಸಿದಂತೆ ತನ್ನ ಮನೆಯ ದಾಖಲೆ ಪತ್ರಗಳನ್ನು ಸಂಬಂಧಿಕರೊಬ್ಬರಿಗೆ ಕೊಟ್ಟು ಜಾಮೀನಿಗೆ ಸಹಿ ಮಾಡಿದ್ದರು. ಈ ಕಾರಣದಿಂದ ಚಿಟ್ ಫಂಡ್‌ನವರು ನಾಗರಾಜ ಅವರಿಗೆ ಕಿರುಕುಳ ನೀಡುತ್ತಿದ್ದರು. ಇದರಿಂದ ಮನನೊಂದು ಅವರು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ. ಈ ಕುರಿತು ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Accidents in Malenadu
Accidents in Malenadu

ತೀರ್ಥಹಳ್ಳಿ: ನೇಣು ಬಿಗಿದ ಸ್ಥಿತಿಯಲ್ಲಿ ಬಿಬಿಎ ವಿದ್ಯಾರ್ಥಿನಿ ಪತ್ತೆ! ಸಿಗದ ಸಾವಿನ ಕಾರಣ?

Shivamogga news live, Shimoga news kannada live, ಶಿವಮೊಗ್ಗ ನ್ಯೂಸ್ today, Shimoga news kannada epaper today, ಶಿವಮೊಗ್ಗ ನ್ಯೂಸ್ yesterday, Malenadu news live, ಮಲೆನಾಡು ಸುದ್ದಿ, ಶಿವಮೊಗ್ಗ ಜಿಲ್ಲಾ ವಾರ್ತೆ, 

Accidents in Malenadu ಮಲೆನಾಡಿನಲ್ಲಿ ಒಂದೇ ದಿನ ನಾಲ್ಕು ದುರಂತ ಡಿಸೆಂಬರ್‌ 2, 2025 Accidents and Suicides in Malenadu: Four Tragedies in a Single Day (Shikaripura, Channagiri) – Dec 2, 2025Accidents in Malenadu ಮಲೆನಾಡಿನಲ್ಲಿ ಒಂದೇ ದಿನ ನಾಲ್ಕು ದುರಂತ ಡಿಸೆಂಬರ್‌ 2, 2025 Accidents and Suicides in Malenadu: Four Tragedies in a Single Day (Shikaripura, Channagiri) – Dec 2, 2025
Share This Article