ಶಿವಮೊಗ್ಗ ಎಸ್‌ಪಿ ಮನೆ ಮುಂದೆ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದ ಇನ್ನೋವಾ!?
The accident took place between two cars in front of the official residence of Shivamogga SP Mithun Kumar last evening.
SHIVAMOGGA | MALENADUTODAY NEWS | ಮಲೆನಾಡು ಟುಡೆ Nov 10, 2024
ಶಿವಮೊಗ್ಗ ಎಸ್‌ಪಿ ಮಿಥುನ್ ಕುಮಾರ್ ರವರ ಅಧಿಕೃತ ನಿವಾಸದ ಎದುರು ನಿನ್ನೆದಿನ ಸಂಜೆ ಎರಡು ಕಾರುಗಳ ನಡುವೆ ಅಪಘಾತವಾಗಿದೆ. ಸುಮಾರು 7 ಗಂಟೆಯ ಹೊತ್ತಿಗೆ ಬಸ್ ನಿಲ್ದಾಣದ ಕಡೆಯಿಂದ ಬಂದ ಇನ್ನೋವಾ ಕಾರು, ಸಾಗರ ರಸ್ತೆಯಲ್ಲಿ ನಿಂತಿದ್ದ ಕಾರಿಗೆ ಬಲವಾಗಿ ಡಿಕ್ಕಿ ಹೊಡದಿದೆ.
ಇದೇ ವೇಳೆ ಎಸ್‌ಪಿ ಮಿಥುನ್ ಕುಮಾರ್ ಶಿಕಾರಿಪುರದಲ್ಲಿ ನಡೆದ ಘಟನೆಯೊಂದರ ಸಂಬಂಧ ಸ್ಥಳ ಪರಿಶೀಲನೆಗಾಗಿ ತೆರಳುತ್ತಿದ್ದರು. ನಡೆದ ಘಟನೆಯನ್ನ ಗಮನಿಸಿದ ಅವರು, ಅಲ್ಲಿದ್ದ ಸಿಬ್ಬಂದಿಯ ಬಳಿ ನಡೆದ ಘಟನೆಯ ಮಾಹಿತಿ ಪಡೆದು, ಟ್ರಾಫಿಕ್ ಕ್ಲಿಯರ್ ಮಾಡಲು ಸೂಚಿಸಿ ಪ್ರಕರಣ ದಾಖಲಿಸಲು ಸೂಚಿಸಿದರು.
ಇನ್ನೂ ಇನ್ನೋವಾ ಕಾರು ಚಾಲಕ ಕುಡಿದ ಮತ್ತಿನಲ್ಲಿ ಇನ್ನೊಂದು ಕಾರಿಗೆ ಡಿಕ್ಕಿ ಹೊಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಅಡ್ಡಾದಿಡ್ಡಿಯಾಗಿ ಆತ ಕಾರು ಚಲಾಯಿಸಿದನ್ನ ಅದೇ ವೇಳೆ ಅಲ್ಲಿಯೇ ಸಂಚರಿಸುತ್ತಿದ್ದ ವಾಹನ ಚಾಲಕರು ಗಮನಿಸಿದ್ದಾರೆ.
ಘಟನೆಯಲ್ಲಿ ಕಾರು ನುಜ್ಜುಗುಜ್ಜಾಗಿದ್ದು, ಟ್ರಾಫಿಕ್ ಪೊಲೀಸರು ವಾಹನಗಳನ್ನ ತೆರವುಗೊಳಿಸಿ ಪ್ರಕರಣದ ಪರಿಶೀಲನೆ ನಡೆಸ್ತಿದ್ದಾರೆ. ಅಲ್ಲದೆ ಇನ್ನೋವಾ ಕಾರು ಚಾಲಕನನ್ನ ವಶಕ್ಕೆ ಪಡೆದಿದ್ದಾರೆ.
SUMMARY | The accident took place between two cars in front of the official residence of Shivamogga SP Mithun Kumar last evening.
KEYWORDS | accident took place between two cars, in front of the official residence of Shivamogga SP Mithun Kumar .