ಟಾಟಾ ಏಸ್ ಪಲ್ಟಿ: ವ್ಯಕ್ತಿಗೆ ಗಂಭೀರ ಗಾಯ

prathapa thirthahalli
Prathapa thirthahalli - content producer

ಟಾಟಾ ಏಸ್ ಪಲ್ಟಿ: ಗಂಭೀರ ಗಾಯ

ಟಾಟಾ ಏಸ್ ವಾಹನವೊಂದು ಪಲ್ಟಿಯಾಗಿ ಅದರಲ್ಲಿದ್ದವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಸಿರುಮಕ್ಕಿ ಲಾಂಚ್ ಸಮೀಪ ನಡೆದಿದೆ.

ಗಾಡಿಯನ್ನು ಚಾಲಕ ವೇಗವಾಗಿ ಚಲಾಯಿಸುತ್ತಿದ್ದ ವೇಳೆ ದನಗಳು ಅಡ್ಡ ಬಂದಿವೆ. ಇದರಿಂದ ಚಾಲಕ ದಿಢೀರ್‌ ಬ್ರೇಕ್‌ ಹಾಕಿದ ಪರಿಣಾಮ ನಿಯಂತ್ರಣ ತಪ್ಪಿದ ವಾಹನ ಪಲ್ಟಿಯಾಗಿದೆ. ಅದರಲ್ಲಿದ್ದ ರಾಮಚಂದ್ರ ಎಂಬುವವರಿಗೆ ಗಂಭೀರ ಗಾಯವಾಗಿದ್ದು ಅವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಘಟನೆ ಸಂಬಂಧ ಟಾಟಾ ಏಸ್‌ ವಾಹನದ ಚಾಲಕನ ವಿರುದ್ಧ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article