ಸೊರಬದಲ್ಲಿ ಬೋರ್‌ವೆಲ್ ಲಾರಿ ಡಿಕ್ಕಿ | ಸಾಗರ ತಾಲ್ಲೂಕುನಲ್ಲಿ ಓದುತ್ತಿದ್ದ ವಿದ್ಯಾರ್ಥಿ ಸಾವು
Shimoga student studying in Sagar taluk was killed in an accident in Soraba taluk of the district. The accident took place between a borewell lorry and a bike
SHIVAMOGGA | MALENADUTODAY NEWS | ಮಲೆನಾಡು ಟುಡೆ Nov 22, 2024
ಶಿವಮೊಗ್ಗ | ಜಿಲ್ಲೆ ಸೊರಬ ತಾಲ್ಲೂಕು ನಲ್ಲಿ ಸಂಭವಿಸಿದ ಅಪಘಾತದಲ್ಲಿ ಸಾಗರ ತಾಲ್ಲೂಕುನಲ್ಲಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬರು ಸಾವನ್ನಪ್ಪಿದ್ದಾರೆ.
ಬೋರ್ ವೆಲ್ ಲಾರಿ ಮತ್ತು ಬೈಕ್ ನಡುವೆ ಈ ಅಪಘಾತ ಸಂಭವಿಸಿದೆ.
ಸೊರಬ ತಾಲ್ಲೂಕು ಉದ್ರಿಯಲ್ಲಿ ಘಟನೆ ನಡೆದಿದೆ. ಸೊರಬದಿಂದ ಬರುತ್ತಿದ್ದ ಬೋರ್‌ವೆಲ್ ಲಾರಿ, ಸೊರಬ ಕಡೆಗೆ ಹೋಗುತ್ತಿದ್ದ ಬೈಕ್ ನಡುವೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಸಾಗರ ತಾಲ್ಲೂಕು ಉಳ್ಳೂರಿನಲ್ಲಿರುವ ಕಾನೂನು ಕಾಲೇಜು ಒಂದರಲ್ಲಿ ವಿದ್ಯಾರ್ಥಿಯಾಗಿರುವ 21 ವರ್ಷದ ದರ್ಶನ್ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದಾನೆ. ಘಟನೆ ಬೆನ್ನಲೆ ಆತನನ್ನ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ಯಲಾಯ್ತಾದರೂ ಮಾರ್ಗಮಧ್ಯೆಯೇ ಆತ ಸಾವನ್ನಪ್ಪಿದ್ದಾನೆ. ಈ ಸಂಬಂಧ ಸೊರಬ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
SUMMARY| Shimoga student studying in Sagar taluk was killed in an accident in Soraba taluk of the district. The accident took place between a borewell lorry and a bike.
KEY WORDS | Shimoga student , Sagar taluk ,Soraba taluk , borewell lorry and a bike.