ಟಿಟಿ ಬಾಡಿಗೆಗೆ ಹೋದ ಡ್ರೈವರ್ ಕಿಡ್ನ್ಯಾಪ್ | ಶಿವಮೊಗ್ಗದಲ್ಲಿ ಮತ್ತೊಂದು ರೆಂಟ್ ಕ್ರೈಮ್ !
A tempo traveler driver was assaulted and kidnapped by a group of passengers in Shivamogga.

SHIVAMOGGA | MALENADUTODAY NEWS | Jul 14, 2024
ಈ ಹಿಂದೆ ಕಾರೊಂದನ್ನ ಬಾಡಿಗೆ ಪಡೆದು ಡ್ರೈವರ್‌ನ್ನ ಕಿಡ್ನ್ಯಾಪ್ ಮಾಡಿ ಹಲ್ಲೆ ಮಾಡಿದ ಪ್ರಕರಣವೊಂದರ ಬಗ್ಗೆ ಮಲೆನಾಡು ಟುಡೆಯ ವರದಿಯಲ್ಲಿ ಓದಿದ್ದೀರಿ. ಇದೀಗ ಅಂತಹುದ್ದೆ ಒಂದು ಘಟನೆ ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವಿನೋಬನಗರ ಪೊಲೀಸ್ ಠಾಣೆ
ಪ್ರಕರಣದ ವಿವರ ನೋಡುವುದಾದರೆ, ಟೆಂಪೋ ಟ್ರಾವೆಲರ್ ಒಂದನ್ನು ಬಾಡಿಗೆಗೆ ಪಡೆದು, ಅದರಲ್ಲಿ ಪ್ರಯಾಣಿಸಿದ ಪ್ರಯಾಣಿಕರು ಚಾಲಕನ ಮೇಲೆ ಹಲ್ಲೆ ನಡೆಸಿ ವಾಹನದೊಳಗಿನ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ಜಖಂಗೊಳಿಸಿದ್ದಾರೆ. ಬೊಮ್ಮನಕಟ್ಟೆ ಬಸ್ ನಿಲ್ದಾಣದಿಂದ ಪ್ರಯಾಣಿಕರನ್ನ ಹತ್ತಿಸಿಕೊಂಡಿದ್ದ ಚಾಲಕನಿಗೆ ಬಸವನ ಗಂಗೂರು ಬಳಿ ಆಘಾತ ಎದುರಾಗಿತ್ತು. ಅಲ್ಲಿ ಟಿಟಿ ಹತ್ತಿದ ಯುವಕರ ಗುಂಪು ಚಾಲಕನ ಮೇಲೆ ಏಕಾಯೇಕಿ ಹಲ್ಲೆ ಮಾಡಿ ಆತನನ್ನ ಕಿಡ್ನ್ಯಾಪ್ ಮಾಡಿದೆ. ಆ ಬಳಿಕ ಕುಂಸಿಯ ಬಳಿ ವಾಹನ ನಿಲ್ಲಿಸಿ ಗುಂಪು ಮದ್ಯಪಾನ ಮಾಡಲು ಆರಂಭಿಸಿದೆ. ಈ ವೇಳೆ ಅವರಿಂದ ತಪ್ಪಿಸಿಕೊಂಡು ಬಂದ ಚಾಲಕ, ವಾಹನದ ಮಾಲೀಕನಿಗೆ ವಿಷಯ ತಿಳಿಸಿದ್ದಾರೆ. ಹಲ್ಲೆಗೆ ಕಾರಣ ತಿಳಿದುಬಂದಿಲ್ಲ. ಆದರೆ ಶಿವಮೊಗ್ಗದಲ್ಲಿ ಇಂತಹ ವರ್ತನೆ ತೋರುವ ಪ್ರವೃತ್ತಿ ಹೆಚ್ಚಾಗುತ್ತಿದೆ.
A tempo traveler driver was assaulted and kidnapped by a group of passengers in Shivamogga.