ಲಾರಿಗೆ ಕಾರು ಡಿಕ್ಕಿ | ಹೈದರಾಬಾದ್‌ಗೆ ಹೋಗುತ್ತಿದ್ದ ಶಿಕಾರಿಪುರದ ನಿವಾಸಿ ಸಾವು

A resident of Shikaripura died in an accident in Holalkere, Chitradurga

ಲಾರಿಗೆ ಕಾರು ಡಿಕ್ಕಿ | ಹೈದರಾಬಾದ್‌ಗೆ ಹೋಗುತ್ತಿದ್ದ ಶಿಕಾರಿಪುರದ ನಿವಾಸಿ ಸಾವು
Holalkere, Chitradurga

SHIVAMOGGA | MALENADUTODAY NEWS | Jul 14, 2024   

ಚಿತ್ರದುರ್ಗದ ಹೊಳಲ್ಕೆರೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಶಿಕಾರಿಪುರದ ನಿವಾಸಿಯೊಬ್ಬರು ಸಾವನ್ನಪ್ಪಿದ್ದಾರೆ. ಹೊಳಲ್ಕೆರೆ ತಾಲ್ಲೂಕಿನ ಟಿ.ನುಲೇನೂರು ಸಮೀಪ ಈ ಘಟನೆ ನಡೆದಿದೆ.  ರಾಷ್ಟ್ರೀಯ ಹೆದ್ದಾರಿ–13ರಲ್ಲಿ ಇನ್ನೋವಾ ಕಾರು ಲಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ಎಂ.ನಸ್ರುಲ್ಲಾ (45) ಎಂಬವರು ಸಾವನ್ನಪ್ಪಿದ್ದಾರೆ. 

ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಸ್ರುಲ್ಲಾ ಚಿಕಿತ್ಸೆಗಾಗಿ  ಶಿವಮೊಗ್ಗದಿಂದ ಹೈದರಾಬಾದ್‌ಗೆ ತೆರಳುತ್ತಿದ್ದರು. ಈ ವೇಳೆ ಇವರಿದ್ದ ಕಾರು ಲಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು ಆರು ಮಂದಿ ಗಾಯಗೊಂಡಿದ್ದಾರೆ. 



A resident of Shikaripura died in an accident in Holalkere, Chitradurga. The incident occurred near T. Nulenoor in Holalkere taluk when an Innova car collided with a lorry on National Highway 13