holehonnuru | ದೇವಸ್ಥಾನದ ವಿಗ್ರಹದ ಕೆಲಸ ಮಾಡುತ್ತಿದ್ದಾಗ ಯುವಕನಿಗೆ ಶಾಕ್‌ | ಸಾವು

Youth dies of electric shock in Holehonnur‌ | ಹೊಳೆಹೊನ್ನೂರು ಸಮೀಪದ ಹಳೆ ಜಂಬರಗಟ್ಟ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಮಲೆನಾಡು ಟುಡೆ ಶಿವಮೊಗ್ಗ ಡಿಜಿಟಲ್‌ ನ್ಯೂಸ್‌ ಮೀಡಿಯಾ

holehonnuru |  ದೇವಸ್ಥಾನದ ವಿಗ್ರಹದ ಕೆಲಸ ಮಾಡುತ್ತಿದ್ದಾಗ ಯುವಕನಿಗೆ ಶಾಕ್‌ | ಸಾವು
Holehonnur , ಹಳೆ ಜಂಬರಗಟ್ಟ , ಹೊಳೆಹೊನ್ನೂರು

SHIVAMOGGA | MALENADUTODAY NEWS | Aug 22, 2024 ಮಲೆನಾಡು ಟುಡೆ  

ಕರೆಂಟ್‌ ಶಾಕ್‌ನಿಂದಾಗಿ ಯುವಕನೊಬ್ಬ ಸಾವನ್ನಪ್ಪಿದ ಘಟನೆ ಶಿವಮೊಗ್ಗದ ಹೊಳೆಹೊನ್ನೂರು ನಲ್ಲಿ ಸಂಭವಿಸಿದೆ. 

ಇಲ್ಲಿನ ಹಳೆ ಜಂಬರಗಟ್ಟ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ  ಎಚ್.ಎನ್.ಶರತ್ (26) ಮೃತಪಟ್ಟ ಯುವಕ 



ಜಂಬರಗಟ್ಟದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ದ್ವಾರ ಬಾಗಿಲು ಕಾಮಗಾರಿ ನಡೆಯುತ್ತಿದೆ. ಅಲ್ಲಿ ವಿಗ್ರಹದ ಕೆಲಸವನ್ನ ಶರತ್‌ ಮಾಡುತ್ತಿದ್ದರು, ಈ ವೇಳೆ ಅವರಿಗೆ ವಿದ್ಯುತ್ ತಂತಿ ತಗುಲಿದೆ. 

 ಶಿವಮೊಗ್ಗದ ಮೆಗ್ಗಾನ್ 

ಪರಿಣಾಮ ತೀವ್ರ ಅಸ್ವಸ್ಥರಾಗಿದ್ದ ಶರತ್ ರನ್ನ ಸ್ಥಳೀಯವಾಗಿ ಚಿಕಿತ್ಸೆ ಕೊಡಿಸಿ ಬಳಿಕ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಅಲ್ಲಿ ಅವರಿಗೆ  ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಕೂಲಿ ಮಾಡಿಕೊಂಡಿದ್ದ ಶರತ್‌ ರ ಸಾವಿನಿಂದ ಅವರ ಕುಟುಂಬದ ಆಧಾರ ಸ್ತಂಭವೇ ಉರುಳಿದಂತಾಗಿದೆ 



  ಇನ್ನಷ್ಟು ಸುದ್ದಿಗಳು