ಶಿವಮೊಗ್ಗ ಯಶವಂತಪುರ ಇಂಟರ್ ಸಿಟಿ ಎಕ್ಸ್‌ಪ್ರೆಸ್ ರೈಲಿಗೆ ಸಂಬಂಧಿಸಿದಂತೆ ಇಲ್ಲೊಂದು ಅಪ್‌ಡೇಟ್
Yesvantpur-Shivamogga Town-Yesvanthpur Daily Intercity Express

SHIVAMOGGA| MALENADUTODAY NEWS | ಮಲೆನಾಡು ಟುಡೆ Mar 12, 2025
ನೈರುತ್ಯ ರೈಲ್ವೆ ತನ್ನ ವ್ಯಾಪ್ತಿಯಲ್ಲಿನ ರೈಲುಗಳ ಸಂಚಾರ ಹಾಗೂ ನಿಲುಗಡೆಯ ವಿಚಾರವಾಗಿ ಕೆಲವೊಂದು ಅಪ್‌ಡೇಟ್ ಮಾಡುತ್ತಲೇ ಇರುತ್ತದೆ. ಇದಕ್ಕೆ ಪೂರಕವಾಗಿ ಇದೀಗ ಶಿವಮೊಗ್ಗ ಟು ಯಶವಂತಪುರ ಇಂಟರ್ ಸಿಟಿ ರೈಲು ಸಂಚಾರದಲ್ಲಿ ಹಾಲಿ ಇರುವ ಅಪ್‌ಡೇಟ್‌ವೊಂದನ್ನು ಇನ್ನಷ್ಟು ದಿನಕ್ಕೆ ಮುಂದುವರಿಸಿದೆ.
ಈ ಸಂಬಂಧ ಡಿಆರ್‌ಎಂ ಬೆಂಗಳೂರು ಟ್ವೀಟ್ ಮಾಡಿದ್ದು, 16579/16580 Yesvantpur-Shivamogga Town-Yesvanthpur Daily Intercity Express ರೈಲು ಚಿಕ್ಕ ಬಾಣಾವರದಲ್ಲಿ ಒಂದು ನಿಮಿಷ ಕಾಲ ನಿಲ್ಲಿಸಲಾಗುತ್ತಿದ್ದು, ಅದನ್ನು ಮುಂದಿನ ಜೂನ್ ತಿಂಗಳ 15 ರವರೆಗೂ ಮುಂದುವರಿಸಲಾಗಿದೆ. ಈ ತಾತ್ಕಾಲಿಕ ನಿಲುಗಡೆಯ ಗಡುವ ಇದೇ ಮಾರ್ಚ್ 16 ಕ್ಕೆ ಅಂತ್ಯವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಆದೇಶವನ್ನು ಮಂದಿನ ಜೂನ್ 15 ವರೆಗೂ ವಿಸ್ತರಿಸಲಾಗಿದೆ.
The provision of one-minute temporary stoppage of Train Nos. 16579/16580 Yesvantpur-Shivamogga Town-Yesvanthpur Daily Intercity Express at Chikbanavar station will be continued for another three months, effective from March 16 to June 15, 2025.