ಮಹಿಳೆ ಸಾವು ವಾರಸುದಾರರ ಪತ್ತೆಗೆ ಮನವಿ ಸೇರಿದಂತೆ ಟಾಪ್ 3 ಚಟ್‌ಪಟ್ ಸುದ್ದಿ
The body of a woman, aged between 30 and 35 years, who died in her sleep in front of Bhumika Agency on the side of Ranganatha Street in Anandpur village on March 6, has been kept in the mortuary of The Meggan Hospital.

SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 12, 2025
ಮಾ.06 ರಂದು ಆನಂದಪುರ ಗ್ರಾಮದ ರಂಗನಾಥ ಬೀದಿ ಪಕ್ಕದಲ್ಲಿರುವ ಭೂಮಿಕಾ ಏಜೆನ್ಸಿ ಎದುರು ಮಲಗಿದ್ದಲ್ಲೆ ಮರಣ ಹೊಂದಿದ್ದ ಸುಮಾರು 30 ರಿಂದ 35 ವಯಸ್ಸಿನ ಮಹಿಳೆಯ ಶವವನ್ನು ಮೆಗ್ಗಾನ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.
ಮೃತ ಮಹಿಳೆಯು ಸುಮಾರು 152 ಸೆ.ಮೀ.ಎತ್ತರ, ಕಪ್ಪು ಮೈ ಬಣ್ಣ, ತೆಳುವಾದ ಮೈಕಟ್ಟು, ದುಂಡು ಮುಖ, ತಲೆಯಲ್ಲಿ ಕಪ್ಪು ಗುಂಗುರು ಕೂದಲು ಇದ್ದು, ಬಲಗೈ ಮಧ್ಯದಲ್ಲಿ ಮುರುಗೇಶ್ ಎಂದು ಕನ್ನಡದಲ್ಲಿ ಹಚ್ಚೆ ಹಾಕಿದ ಗುರುತು ಇರುತ್ತದೆ. ಮೈ ಮೇಲೆ ಬಿಳಿ ಬಣ್ಣದ ಕೆಂಪು ಹೂವಿನ ವಿನ್ಯಾಸವಿರುವ ಚೂಡಿದಾರ್ ಧರಿಸಿದ್ದಾರೆ.
ಈ ಮೃತ ಮಹಿಳೆಯ ವಾರಸುದಾರರು ಯಾರಾದರೂ ಇದ್ದಲ್ಲಿ ಆನಂದಪುರ ಪೊಲೀಸ್ ಠಾಣೆ ದೂ.ಸಂ.: 08183-298100 / 9480803363, ಶಿವಮೊಗ್ಗ ಎಸ್.ಪಿ.ಕಚೇರಿ ದೂ.ಸಂ.: 08182-261400, ಸಾಗರ ವೃತ್ತ ನಿರೀಕ್ಷಕರ ದೂ.ಸಂ.: 9480803336 ಗಳನ್ನು ಸಂಪರ್ಕಿಸು ವಂತೆ ಪೊಲೀಸ್ ಪ್ರಕಟಣೆ ತಿಳಿಸಿದ್ದಾರೆ.
ಸುದ್ದಿ :02 18 ಮತ್ತು 21 ರವರೆಗೆ ಕರ್ನಾಟಕ ಉಪಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರರವರ ಜಿಲ್ಲಾ ಭೇಟಿ
ಕರ್ನಾಟಕ ಉಪಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರ ಅವರು ಮಾ. 18 ರಿಂದ 21 ರವರೆಗೆ ಶಿವಮೊಗ್ಗ ನಗರಕ್ಕೆ ಭೇಟಿ ನೀಡಿ, ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸುವರು ಅಲ್ಲದೇ ಇದೇ ಅವಧಿಯಲ್ಲಿ ವಿವಿಧ ಸಭೆ-ಸಮಾರಂಭ, ತರಬೇತಿ ಕಾರ್ಯಾಗಾರಗಳು, ಸಮಾಲೋಚನಾ ಸಭೆಗಳಲ್ಲಿ ಭಾಗವಹಿಸುವರು.
ಮಾ.18ರಂದು ಸಂಜೆ 7.40ಕ್ಕೆ ಶಿವಮೊಗ್ಗಕ್ಕೆ ಆಗಮಿಸಿ ವಾಸ್ತವ್ಯ ಮಾಡುವರು. ಮಾ.19ರಂದು ಬೆಳಿಗ್ಗೆ 10.00 ರಿಂದ ಸಂಜೆ 5.00 ರವರೆಗೆ ನಗರದ ಕುವೆಂಪು ರಂಗಮಂದಿರದಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸುವರು. ಜಿಲ್ಲೆಯಲ್ಲಿ ಯಾವುದೇ ಸಾರ್ವಜನಿಕರಿಗೆ ಸರ್ಕಾರಿ ಅಧಿಕಾರಿ/ನೌಕರರಿಂದ ಕಾನೂನು ರೀತ್ಯಾ ಆಗಬೇಕಾದ ಕೆಲಸದಲ್ಲಿ ವಿಳಂಬನೆಯಾಗಿದ್ದಲ್ಲಿ, ಅದರಿಂದ ತೊಂದರೆಗೊಳಗಾದ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಅರ್ಜಿ ನಮೂನೆ 1 ಮತ್ತು 2 ರಲ್ಲಿ ಲಿಖಿತವಾಗಿ ದಾಖಲೆ, ಸಾಕ್ಷ್ಯಾಧಾರಗಳೊಂದಿಗೆ ಸಲ್ಲಿಸಬಹುದಾಗಿದೆ.
ಸುದ್ದಿ :03 ವಸಂತಕುಮಾರ್ ನಾಯ್ಕ್ ಗೆ ಪಿಎಚ್ ಡಿ
ಶಿವಮೊಗ್ಗ ತಾಲೂಕಿನ ನಾರಾಯಣಪುರ ಗ್ರಾಮದ ಕೃಷ್ಣನಾಯ್ಕ ಮತ್ತು ಕಮಲಾಬಾಯಿ ಪುತ್ರ ವಸಂತಕುಮಾರನಾಯ್ಕ.ಎನ್.ಕೆ ಅವರಿಗೆ ಕುವೆಂಪು ವಿಶ್ವವಿದ್ಯಾಲಯ ಪಿಎಚ್.ಡಿ. ಪದವಿ ನೀಡಿದೆ. ಪ್ರಾಧ್ಯಾಪಕರಾದ ಜಿ.ಕೃಷ್ಣಮೂರ್ತಿ ರವರ ಮಾರ್ಗದರ್ಶನ ದಲ್ಲಿ ಸಿಂಥೆಸಿಸ್ ಕ್ಯಾರಕ್ಟರ್ ರೈಸೇಶನ್ ಅಂಡ್ ಬೈಯೋಲಾಜಿಕಲ್ ಇವ್ಯಾಲ್ಯೂಯೇಷನ್ ಆಫ್ ಟ್ರಾನ್ಸ್ ಸಿಷನ್ ಮೆಟಲ್ ಕಾಂಪ್ಲೆಕ್ಸ್ ಸ್ ಕಂಟೈನಿಂಗ್ ನಾವೆಲ್ ಹೆಟೀರೋ ಸೈಕಲ್ಸ್ ಕುರಿತು ಜನವರಿ-18- 2025 ರಂದು ಮಂಡಿಸಿದ ಪ್ರೌಢ ಮಾಹ ಪ್ರಬಂಧವನ್ನು ಕುವೆಂಪು ವಿಶ್ವವಿದ್ಯಾಲಯದ ಔದ್ಯೋಗಿಕ ರಸಯನಶಾಸ್ತ್ರ ವಿಭಾಗ ದಿಂದ ಮಾನ್ಯ ಮಾಡಿದೆ.
SUMMARY | The body of a woman, aged between 30 and 35 years, who died in her sleep in front of Bhumika Agency on the side of Ranganatha Street in Anandpur village on March 6, has been kept in the mortuary of The Meggan Hospital.
KEYWORDS | woman, died, shivamogga, chatpat news,