ಸಿಂಪಲ್‌ ಟೆಕ್ನಿಕ್‌ನಲ್ಲಿ ಪೊಲೀಸರು ಕೇಸ್‌ ಹೇಗೆ ಬಗೆಹರಿಸ್ತಾರೆ ಗೊತ್ತಾ! ಇಲ್ಲಿದೆ ಉದಾಹರಣೆ

Woman who lost her bag in an autorickshaw, Davanagere District Police, Davanagere Command Centre, Davanagere Jagalur

ಸಿಂಪಲ್‌ ಟೆಕ್ನಿಕ್‌ನಲ್ಲಿ ಪೊಲೀಸರು ಕೇಸ್‌ ಹೇಗೆ ಬಗೆಹರಿಸ್ತಾರೆ ಗೊತ್ತಾ! ಇಲ್ಲಿದೆ ಉದಾಹರಣೆ
Woman who lost her bag in an autorickshaw, Davanagere District Police, Davanagere Command Centre, Davanagere Jagalur

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 24, 2024 ‌ 

ಆಟೋದಲ್ಲಿ ಮಹಿಳೆಯೊಬ್ಬರು ಬಿಟ್ಟು ಹೋಗಿದ್ದ ಒಂದುವರೆ ಲಕ್ಷ ಮೌಲ್ಯದ ಚಿನ್ನ,ದುಡ್ಡು ಮೊಬೈಲ್‌ ಇದ್ದ ಬ್ಯಾಗ್‌ನ್ನ ದಾವಣಗೆರೆ ಪೊಲೀಸರು ಟೆಕ್ನಾಲಿಜಿಯ ಸಹಾಯದಿಂದ ವಾಪಸ್‌ ಕೊಡಿಸಿದ್ದಾರೆ. ಸಾಮಾನ್ಯವಾಗಿ ಆಟೋದಲ್ಲಿ ಏನಾದರು ಬಿಟ್ಟು ಹೋದರೆ ಅದರ ಚಾಲಕ ವಸ್ತುವನ್ನ ವಾಪಸ್‌ ತಂದುಕೊಂಡು ಮಾನವೀಯತೆ ಮೆರೆಯುವ ಸುದ್ದಿಯನ್ನ ಓದುತ್ತಿರುತ್ತೇವೆ. ಆದರೆ ಈ ಸುದ್ದಿ ಚೂರು ಭಿನ್ನವಾಗಿದೆ. ಇಲ್ಲಿ ದಾವಣಗೆರೆ ಪೊಲೀಸರೇ ಮಹಿಳೆಯ ಚಿನ್ನದುಡ್ಡು ಮೊಬೈಲ್‌ನ್ನ ಹುಡುಕಿ ತಂದುಕೊಟ್ಟಿದ್ದಾರೆ. 

ಜಗಳೂರು ತಾಲೂಕಿನ ಸಿದ್ದಯ್ಯನ ಕೋಡ ನಿವಾಸಿ ಮಹಿಳೆಯೊಬ್ಬರು ಕಳೆದ ನವೆಂಬರ್‌ 20 ರಂದು ದಾವಣಗೆರೆಗೆ ಬಂದಿದ್ದರು. ಬಳಿಕ ಆಟೋದಲ್ಲಿ ಪ್ರಯಾಣಿಸಿದ್ದರು. ಆದರೆ ಆಟೋದಿಂದ ಇಳಿಯುವಾಗ ತಮ್ಮ ಬ್ಯಾಗ್‌ ಕಳೆದುಕೊಂಡಿದ್ದರು. ಆನಂತರ ಈ ಕುರಿತು ಬಸವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. 

ಈ ಸಂಬಂಧ ತನಿಖೆ ಆರಂಭಿಸಿದ ಪೊಲೀಸರು ದಾವಣಗೆರೆ ಪೊಲೀಸ್ ಕಮಾಂಡ್ ಸೆಂಟರ್ ಸಿಬ್ಬಂದಿಯ ಸಹಾಯ ಪಡೆದು ಟೆಕ್ನಾಲಿಜಿ ಮೂಲಕ ಆಟೋವನ್ನು ಟ್ರೇಸ್‌ ಮಾಡಿದ್ದಾರೆ. ಆ ಬಳಿಕ ಆಟೋ ನಂಬರ್‌ ಟ್ರೇಸ್‌ ಮಾಡಿ ಆತನ ವಿಳಾಸ ಪಡೆದು, ಚಾಲಕನ ಮನೆ ಎದುರು ಹೋಗಿ ನಿಂತು ಬ್ಯಾಗ್‌ ಕೊಡು ಎಂದಿದ್ದಾರೆ. ಆತನಿಂದ ಮಹಿಳೆಯ ಬ್ಯಾಗ್‌ ಪಡೆದು ಪೊಲೀಸ್‌ ಠಾಣೆಯಲ್ಲಿ ಮಹಿಳೆಗೆ ಆಕೆಯ ವಸ್ತುಗಳನ್ನ ಹಸ್ತಾಂತರಿಸಿದ್ದಾರೆ. 

 

SUMMARY |  Woman who lost her bag in an autorickshaw, Davanagere District Police, Davanagere Command Centre, Davanagere Jagalur

KEY WORDS  | Woman who lost her bag in an autorickshaw, Davanagere District Police, Davanagere Command Centre, Davanagere Jagalur