BREAKING NEWS | ಪತಿಯಿಂದಲೇ ಪತ್ನಿಯ ಹತ್ಯೆ | ನಡೆದಿದ್ದೇನು?
Woman murdered , Shikaripura town police station limits
SHIVAMOGGA | MALENADUTODAY NEWS | ಮಲೆನಾಡು ಟುಡೆ Dec 11, 2024
ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ಶಿಕಾರಿಪುರ ಟೌನ್‌ನಲ್ಲಿ ಮಹಿಳೆಯೊಬ್ಬಳನ್ನ ಕೊಲೆ ಮಾಡಲಾಗಿದೆ. ಶಿಕಾರಿಪುರ ಟೌನ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಘಟನೆಯಲ್ಲಿ ಪತಿಯೇ ಪತ್ನಿಯನ್ನ ಕೊಲೆಮಾಡಿದ್ದಾನೆ ಎನ್ನಲಾಗಿದೆ.
ಶಿಕಾರಿಪುರ ಪಟ್ಟಣದ ರಾಘವೇಂದ್ರ ಬಡಾವಣೆಯಲ್ಲಿ ಘಟನೆ ನಡೆದಿದ್ದು, ಮೃತ ಮಹಿಳೆಯನ್ನ ರೇಣುಕಾ(40) ಎಂದು ಗುರುತಿಸಲಾಗಿದೆ.
ಈ ಸಂಬಂಧ ಎಸ್‌ಪಿ ಮಿಥುನ್ ಕುಮಾರ್ ವಾಟ್ಸಾಪ್ ಮಾಧ್ಯಮದ ಮೂಲಕ ಮಾಹಿತಿ ರವಾನೆ ಮಾಡಿದ್ದು, ಶಿಕಾರಿಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಒಂದು ಕೊಲೆ ನಡೆದಿದೆ. 45 ವರ್ಷದ ನಾಗರಾಜ್ ಎಂಬಾತ ತನ್ನ ಪತ್ನಿಯನ್ನ ಕೊಲೆ ಮಾಡಿದ್ದಾನೆ. ಆತನನ್ನ ಬಂಧಿಸಲಾಗಿದ್ದು ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ. ವೈವಾಹಿಕ ಸಮಸ್ಯೆ ಹಿನ್ನೆಲೆಯಲ್ಲಿ ಆತ ಈ ಕೃತ್ಯವೆಸಗಿರುವುದಾಗಿ ತಿಳಿಸಿದ್ದಾರೆ.
SUMMARY | Woman murdered in Shikaripura town police station limits
KEY WORDS | Woman murdered , Shikaripura town police station limits