ಎಫ್‌ ಐ ಆರ್‌ ನಲ್ಲಿ ಏನಿದೆ ? | ದೂರಿನಲ್ಲಿ ಟ್ವಿಸ್ಟ್‌ ಕೊಟ್ಟ ಮಹಿಳಾ ಗಣಿ ಅಧಿಕಾರಿ?

It is suspected that there was political pressure behind Jyoti's complaint to the police that an anonymous person had called her.

ಎಫ್‌ ಐ ಆರ್‌ ನಲ್ಲಿ ಏನಿದೆ ? | ದೂರಿನಲ್ಲಿ ಟ್ವಿಸ್ಟ್‌ ಕೊಟ್ಟ ಮಹಿಳಾ ಗಣಿ ಅಧಿಕಾರಿ?

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Feb 11, 2025

ಶಿವಮೊಗ್ಗ | ಶಿವಮೊಗ್ಗದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮಹಿಳಾ ಅಧಿಕಾರಿಗೆ ಶಾಸಕನ ಪುತ್ರರೊಬ್ಬರು ಬೆದರಿಕೆ ಕರೆ ಮಾಡಿದ ಘಟನೆ ಬೇರೆಯದ್ದೆ ಟ್ವಿಸ್ಟ್ ಪಡೆದುಕೊಂಡಿದೆ. ಪ್ರಕರಣದ ಸಂಬಂಧ ಶಾಸಕರೊಬ್ಬರ ಪುತ್ರನ ಹೆಸರು ನಮೂದಿಸಿ  ಅಧಿಕಾರಿ ಜ್ಯೋತಿ ದೂರು ನೀಡುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ ಜ್ಯೋತಿ ಅನಾಮಧೆಯ ವ್ಯಕ್ತಿ ಕರೆ ಮಾಡಿದ್ದಾರೆಂದು ಪೊಲೀಸರಿಗೆ ನೀಡಿರುವ ದೂರಿನ ಹಿಂದೆ ರಾಜಕೀಯ ಒತ್ತಡವಿತ್ತಾ ಎಂಬ ಅನುಮಾನ ಮೂಡತೊಡಗಿದೆ.

ಭದ್ರಾವತಿ ಗ್ರಾಮಾಂತರ ಭಾಗದ ಭದ್ರಾ ನದಿ ಒಡಲಿನಿಂದ ಅಕ್ರಮವಾಗಿ ಮರಳು ತೆಗೆಯುತ್ತಿರುವ ಸ್ಥಳಕ್ಕೆ ಗಣಿ ಅಧಿಕಾರಿ ಜ್ಯೋತಿ ಮತ್ತು ಪ್ರೀಯಾ ಅಧಿಕಾರಿಗಳು ಮೊನ್ನೆ ರಾತ್ರಿ ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಮರಳು ದಂಧೆಕೋರರು ಶಾಸಕರ ಪುತ್ರನಿಗೆ ಫೋನ್ ಮಾಡಿ ಜ್ಯೋತಿಯವರಿಗೆ ನೀಡಿದ್ದಾರೆ. ಆಗ ಅವರು  ಜ್ಯೋತಿಯವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಘಟನೆ ಬಗ್ಗೆ ಆಘಾತಗೊಂಡಿದ್ದ ಜ್ಯೋತಿ ಇಂದು ಭದ್ರಾವತಿಯ ಓಲ್ಡ್ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ ದೂರಿನಲ್ಲಿ ಅನಾಮದೇಯ ವ್ಯಕ್ತಿ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಹೇಳಿದ್ದಾರೆ.

ಕೇಸ್‌ ದಾಖಲಾದ ಬಳಿಕ ಮಾತನಾಡಿದ ಅಧಿಕಾರಿ ಜ್ಯೋತಿ ಅಂದು ರಾತ್ರಿ ರೇಡ್‌ ನಡೆದಾಗ ನಮ್ಮ ಮೇಲೆ ದಾಳಿ ಮಾಡುವ ಸನ್ನಿವೇಶ ಎದುರಾಗಿತ್ತು. ಕೆಲವರು ನಮ್ಮನ್ನು ನಿಂದಿಸಿದರು, ಆ ನಂತರ ಫೋನ್‌ ಕಾಲ್‌ನಲ್ಲಿ ಬೆದರಿಸಿದರು. ಈ ವಿಚಾರವಾಗಿ ದೂರು ನೀಡಿದ್ದೇನೆ. ಮೊಬೈಲ್‌ ಕಾಲ್‌ನಲ್ಲಿ ಇರುವ ಸ್ವರ ಯಾರದ್ದು ಎಂಬುದು ಗೊತ್ತಿಲ್ಲ. ಈ ಬಗ್ಗೆ ಪೊಲೀಸರು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದೇನೆ ಎಂದು ತಿಳಿಸಿದ್ದಾರೆ.

ಮಹಿಳಾ ಅಧಿಕಾರಿಯಾಗಿರುವ ಜ್ಯೋತಿಗೆ ರಾಜಕೀಯ ಒತ್ತಡ ಹೇರಲಾಗಿದೆಯಾ ಎಂಬ ಅನುಮಾನ ಮೂಡತೊಡಗಿದೆ. ರಾಜಕೀಯ ವ್ಯವಸ್ಥೆಯನ್ನು ಎದುರು ಹಾಕಿಕೊಂಡು ಕರ್ತವ್ಯ ನಿರ್ವಹಿಸುವುದು ಕಷ್ಟಸಾಧ್ಯ ಎಂಬುದಕ್ಕೆ ಜ್ಯೋತಿ ನೀಡಿರುವ ನೀರಸಮಯ ದೂರು ಸಾಕ್ಷಿಯಾಗಿದೆ.ಆದರೆ ದೂರಿನಲ್ಲಿ ಅನಾಮಧೆಯ ವ್ಯಕ್ತಿ ಕರೆ ಮಾಡಿದ್ದಾನೆ ಅವನ ದ್ವನಿ ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜ್ಯೋತಿ ನೀಡಿರುವ ದೂರು ಪೊಲೀಸ್ ಜವಬ್ದಾರಿಯನ್ನು ಹೆಚ್ಚಿಸಿದೆ.

SUMMARY | It is suspected that there was political pressure behind Jyoti's complaint to the police that an anonymous person had called her.

KEYWORDS | suspected, Jyotis, complaint,  bhdravati,