ರೋಡಿನ ಸೈಡ್‌ಗೆ ಬಂದು ಜನರಿಗೆ ಕಾಡಾನೆಗಳ ಶಾಕ್
Wild elephants are frequently seen in tammadihalli, Koodi, Thammadihalli and Chowdikatte areas.
SHIVAMOGGA | MALENADUTODAY NEWS | ಮಲೆನಾಡು ಟುಡೆ Nov 22, 2024
ಮಲೆನಾಡಿನಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದೆ. ತಮ್ಮಡಿಹಳ್ಳಿ ಆಡಿನಕೊಟ್ಟಿಗೆ ತೋಟಕ್ಕೆ ನುಗ್ಗಿ ಅಡಕೆ ಗಿಡಗಳು ಸೇರಿ ಇತರ ಬೆಳೆಗಳ ನಾಶ ಮಾಡಿದ ಕಾಡಾನೆಗಳು ಇವತ್ತು ಲಯನ್ ಸಫಾರಿ ಸಮೀಪದ ಬೆನವಳ್ಳಿಯಲ್ಲಿ ಕಾಣಿಸಿಕೊಂಡಿವೆ. ಕಾಡಾನೆಗಳು ದಿಬ್ಬ ಹತ್ತುತ್ತಿರುವ ದೃಶ್ಯ ಹಾಗೂ ಹೊಲದಲ್ಲಿ ಓಡಾಡುತ್ತಿರುವ ದೃಶ್ಯಗಳು ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿವೆ. ಅಲ್ಲದೆ ಈ ದೃಶ್ಯದಲ್ಲಿ ಜನರು ಕೂಗುತ್ತಾ ಅರಚುತ್ತಾ ಆನೆಗಳನ್ನ ಮುಂದೆ ದಾಟಿಸ್ತಿರುವ ಸನ್ನಿವೇಶಗಳಿವೆ.
ಶಿವಮೊಗ್ಗ ತಾಲೂಕಿನ ಪುರದಾಳು, ಮಲೇಶಂಕರ ಭಾಗದಲ್ಲಿ ಕಾಡಾನೆ ಹಾವಳಿ ವಿಪರೀತವಾಗಿದೆ. ಆಡಿನ ಕೊಟ್ಟಿಗೆ, ಕೂಡಿ, ತಮ್ಮಡಿಹಳ್ಳಿ ಹಾಗೂ ಚೌಡಿಕಟ್ಟೆ ಭಾಗದಲ್ಲಿ ಪದೇಪದೇ ಕಾಡಾನೆಗಳು ಕಾಣಿಸಿಕೊಳ್ಳುತ್ತಿವೆ. ಕತ್ತಲಾಗುವುದನ್ನೆ ಕಾದ ಹಾಗೆ ಸಂಜೆಗತ್ತಲಲ್ಲಿ ಹೊಲ-ಗದ್ದೆ ತೋಟಗಳಿಗೆ ನುಗ್ಗುವ ಕಾಡಾನೆಗಳು ಮೆಟ್ಟಿ, ತುಳಿದು, ತಿಂದು ಬೆಳೆ ನಾಶ ಮಾಡುತ್ತಿವೆ. ಕಾಡಾನೆಗಳ ಉಪಟಳ ತೀವ್ರವಾದರೂ ಶಿವಮೊಗ್ಗದ ಅರಣ್ಯ ಇಲಾಖೆ ಯಾವೊಂದು ಪ್ರತಿಕ್ರಿಯೆ ನೀಡಲು ಮುಂದಾಗುತ್ತಿಲ್ಲ
SUMMARY| Wild elephants are frequently seen in tammadihalli, Koodi, Thammadihalli and Chowdikatte areas.
KEY WORDS | Wild elephants ,adinakottige, tammadihalli Koodi, Thammadihalli, Chowdikatte areas,