ಶಿಕಾರಿಪುರದಲ್ಲಿ ಶಿಕಾರಿ ಬಾಡು ಹಂಚಿಕೊಳ್ಳುವಾಗ ಶಾಕ್ | ದಾವಣಗೆರೆ ಜಿಲ್ಲೆ ನ್ಯಾಮತಿಯ ಇಬ್ಬರು ಅರೆಸ್ಟ್! ಏನಿದು?
Wild boar hunting, Shikaripura taluk, Shivamogga district, Gangahonasara forest area near Harogoppa, two arrested, Davanagere district, Nyamathi taluk, Hale Joga
SHIVAMOGGA | MALENADUTODAY NEWS | ಮಲೆನಾಡು ಟುಡೆ Jan 4, 2025
ಕಾಡು ಹಂದಿಯನ್ನು ಬೇಟೆಯಾಡಿದ ಅಪರಾಧ ಸಂಬಂಧ ಇಬ್ಬರನ್ನ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕುನಲ್ಲಿ ಬಂಧಿಸಲಾಗಿದೆ. ಶಿಕಾರಿಪುರ ತಾಲ್ಲೂಕಿನ ಹಾರೋಗೊಪ್ಪ ಬಳಿಯ ಗಂಗಹೊನಸರ ಅರಣ್ಯ ಪ್ರದೇಶದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅರಣ್ಯಾಧಿಕಾರಿಗಳು ದಾವಣಗೆರೆ ಜಿಲ್ಲೆ ನ್ಯಾಮತಿ ತಾಲ್ಲೂಕಿನ ಹಳೇಜೋಗದ ಲೋಕೇಶ್ ಹಾಗೂ ಮೈಲಾರಿಯನ್ನ ಬಂಧಿಸಿದ್ದಾರೆ.
ಬೇಟೆಯಾಡಿದ ಕಾಡು ಹಂದಿಯ ಮಾಂಸವನ್ನು ಪಾಲು ಮಾಡಿಕೊಳ್ಳುವಾಗ ಅರಣ್ಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇನ್ನೂ ಈ ಕಾರ್ಯಾಚರಣೆಯ ಸಂದರ್ಭದಲ್ಲಿ ಕೆಲವರು ಪರಾರಿಯಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಸಾಗರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ. ಮೋಹನಕುಮಾರ್, ಶಿಕಾರಿಪುರ ವಲಯ ಅರಣ್ಯಧಿಕಾರಿ ರೇವಣಸಿದ್ಧಯ್ಯ ಬಿ ಹಿರೇಮಠ್, ಉಪ ವಲಯ ಅರಣ್ಯಾಧಿಕಾರಿಗಳಾದ ಹರೀಶ್ ಅಜ್ಜಪ್ಪನವರ, ಕುಮಾರನಾಯ್ಕ್, ದೊಡ್ಡಮಧುಸೂಧನ್, ಕೊಟ್ರೇಶ್, ಗಸ್ತು ವನಪಾಲಕರಾದ ಶೇಖಪ್ಪ, ಶಿವಪ್ಪ ರಾಥೋಡ್, ಸಿಬ್ಬಂದಿಗಳಾದ ರಿಯಾಜ್ ಅಹ್ಮದ್, ಸುನಿಲ್, ಬೊಮ್ಮ, ರಾಮು ಪಾಲ್ಗೊಂಡಿದ್ದರು
SUMMARY | Wild boar hunting, Shikaripura taluk, Shivamogga district, Gangahonasara forest area near Harogoppa, two arrested, Davanagere district, Nyamathi taluk, Hale Joga
KEY WORDS | Wild boar hunting, Shikaripura taluk, Shivamogga district, Gangahonasara forest area near Harogoppa, two arrested, Davanagere district, Nyamathi taluk, Hale Joga