ನಕ್ಸಲ್ ನಾಯಕ ವಿಕ್ರಂಗೌಡ ಯಾರು? ಕತೂಹಲದ ವಿಷಯ ಏನು ಗೊತ್ತಾ?
Who is Naxal leader Vikram Gowda
SHIVAMOGGA | MALENADUTODAY NEWS | ಮಲೆನಾಡು ಟುಡೆ Nov 20, 2024
ಉಡುಪಿ ಜಿಲ್ಲೆ ಹೆಬ್ರಿ ತಾಲ್ಲೂಕು ಕಬ್ಬಿನಾಲೆಯಿಂದ ಸುಮಾರು 8 ಕಿಲೋಮೀಟರ್ ದೂರದಲ್ಲಿರುವ ಪೀತಬೈಲಿನಲ್ಲಿರುವ ಒಂಟಿ ಮನೆಯ ಅಂಗಳದಲ್ಲಿ ANF ನಿಂದ ಎನ್‌ಕೌಂಟರ್ ಆದ ವಿಕ್ರಂಗೌಡ ಯಾರು?
ಸದ್ಯ ಈ ಬಗ್ಗೆ ಸಾಕಷ್ಟು ವಿಸ್ತೃತ ಚರ್ಚೆಯಾಗುತ್ತಿದೆ. ಹಲವು ರೀತಿಯ ಮಾಹಿತಿಗಳು ಹೊರಕ್ಕೆ ಬರುತ್ತಿದೆ. ಮೇಲಾಗಿ ಎನ್‌ಕೌಂಟರ್ ಪ್ರಕರಣದ ಬಗ್ಗೆಯೇ ಹಲವು ಭಿನ್ನ ಅಭಿಪ್ರಾಯ ವ್ಯಕ್ತವಾಗುತ್ತಿದ್ದು, ಮೃತನ ದೇಹ ಹಾಗೂ ಘಟನಾ ಸ್ಥಳವನ್ನೇ ಮುಕ್ತವಾಗಿಸದೇ ಮುಚ್ಚಿಟ್ಟ ನಿಗೂಢ ನಡೆಯ ಬಗ್ಗೆ ತೀವ್ರ ಸಂಶಯವನ್ನು ಹಲವು ಗಣ್ಯರು ವ್ಯಕ್ತಪಡಿಸುತ್ತಿದ್ದಾರೆ.
ಈ ನಡುವೆ ವಿಕ್ರಂಗೌಡ ಯಾರು ಎಂಬುದನ್ನು ಗಮನಿಸುವುದಾದರೆ, ಈತ ಕುದುರೆ ಮುಖ ರಾಷ್ಟ್ರೀಯ ಉದ್ಯಾನವನ ಯೋಜನೆ ಜಾರಿಯಾದ ಹೊತ್ತಿನಲ್ಲಿ ನಕ್ಸಲ್ ಮೂಮೆಂಟ್‌ಗೆ ಸೇರಿದವನು. ಈತನ ಮೇಲೆ ಪೊಲೀಸ್ ಇಲಾಖೆ ಹೇಳುವಂತೆ 61 ಕ್ಕೂ ಹೆಚ್ಚು ಪ್ರಕರಣಗಳಿವೆ. ಆದರೆ ಸ್ಥಳೀಯವಾಗಿ ಈತನ ಬಗ್ಗೆ ಪೊಲೀಸರ ಅಭಿಪ್ರಾಯಕ್ಕಿಂತಲೂ ಬೇರೆಯದ್ದೆ ಅಭಿಪ್ರಾಯವಿದೆ.
ಮಲೆಕುಡಿಯನಾದ ಈತ ಕೂಡ್ಲು ಪಾಲ್ಸ್‌ನ ನಿವಾಸಿ. ಇಲ್ಲಿನ ದಟ್ಟ ಕಾಡು ಅದರ ದಾರಿ ವಿಕ್ರಂಗೌಡನಿಗೆ ಪರಿಚಿತವಾಗಿತ್ತು. ಆದರೆ ಕಾಡಿನಲ್ಲಿ ನಾಡಿನಾಡಳಿತದ ಸಂಕಷ್ಟ ಈತನಿಗೆ ಸಹ್ಯವಾಗಲಿಲ್ಲ. ಬಡ ಆದಿವಾಸಿಕುಟಂಬದಲ್ಲಿ ಜನಿಸಿದ ಈತನಿಗೆ ತಮ್ಮ ತಂಗಿ ಇದ್ದಾರೆ. ಸೀತಾನದಿ ಶಾಲೆಯಲ್ಲಿ ನಾಲ್ಕನೇ ಕ್ಲಾಸ್‌ವರೆಗೂ ಓದಿದ ಆನಂತರ ಹೆಬ್ರಿಯ ಹೋಟೆಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ.
ಬಳಿಕ ಪಶ್ಚಿಮ ಘಟ್ಟದಲ್ಲಿ ಕುದುರೆ ಮಖ ರಾಷ್ಟ್ರೀಯ ಉಧ್ಯಾನ ಎಂಬ ಯೋಜನೆ ಜಾರಿಯಾಯ್ತು. ಅದರಿಂದ ವಿಕ್ರಂ ಗೌಡನ ಕುಟುಂಬವೂ ಸೇರಿದಂತೆ ಹಲವು ಕಾಡಿನಲ್ಲಿದ್ದ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದವು. ಆನಂತರದ ದಿನಗಳಲ್ಲಿ ವಿಕ್ರಂಗೌಡ ನಕ್ಸಲ್ ಸಂಘಟನೆ ಸೇರಿ ಕಾಡು ಪಾಲಾಗಿ ತಲೆಮರೆಸಿಕೊಂಡು ಓಡಾಡಲು ಆರಂಭಿಸಿದ.
ಸುಮಾರು 20 ವರುಷಗಳಿಂದ ನಕ್ಸಲ್ ಚಟುವಟಿಕೆಯಲ್ಲಿ ಇರುವ ವಿಕ್ರಂಗೌಡ, ಬಿಜಿ ಕೃಷ್ಣಮೂರ್ತಿಯ ನಂತರದ ನಾಯಕನಾಗಿದ್ದ. ಕಬಿನಿ ದಳ ಹೆಸರಿನ ಟೀಂ ಲೀಡ್ ಮಾಡುತ್ತಿದ್ದ ವಿಕ್ರಂಗೌಡ ಅಲಿಯಾಸ್ ಶ್ರೀಕಾಂತ್ ನನ್ನ ನಕ್ಸಲ್ ಪ್ಯಾಕೇಜ್‌ನಡಿಯಲ್ಲಿ ಶರಣಾಗತಿಗೆ ಒಳಪಡಿಸುವ ಪ್ರಯತ್ನಗಳು ನಡೆದಿದ್ದವು. ಅದರ ನಡುವೆ ಆತನನ್ನ ಹೊಡೆದುರುಳಿಸಲಾಗಿದೆ. ಈ ಆಪರೇಷನ್ ಕುತೂಹಲ , ಅಚ್ಚರಿ, ಸಂಶಯ ಹಾಗೂ ಹೊಸ ಹೊಸ ಆಯಾಮಗಳನ್ನ ತೆರೆದಿಡುತ್ತಿದೆ.
SUMMARY | Who is Naxal leader Vikram Gowda? Details about him
KEY WORDS | Who is Naxal leader Vikram Gowda? Details about him