ಕಾಡು ಬಿಟ್ಟು ಬಂದವರು ಕೋವಿ ಎಲ್ಲಿ ಬಿಟ್ಟರು! NIA, ಪೊಲೀಸರಿಗೆ ಟೆನ್ಶನ್ ನೀಡಿದ ವೆಪನ್ಸ್ ಡಂಪ್‌ಯಾರ್ಡ್!
Naxal Latha Mundagaru team surrenders before CM Siddaramaiah update Where are the weapons
SHIVAMOGGA | MALENADUTODAY NEWS | ಮಲೆನಾಡು ಟುಡೆ Jan 10, 2025
naxals surrender in karnataka | ಸದ್ಯ ಶರಣಾಗಿರುವ ನಕ್ಸಲ್ ಲತಾ ಮುಂಡಗಾರು & ಟೀಂ ತಮ್ಮ ಶಸ್ತ್ರಾಸ್ತ್ರಗಳನ್ನ ಎಲ್ಲಿಟ್ಟಿದ್ದಾರೆ. ಅದನ್ನವರು ಏಕೆ ಸೆರೆಂಡರ್ ಮಾಡಿಸಿಲ್ಲ. ಸದ್ಯ ಈ ವಿಚಾರ ಕುತೂಹಲಕ್ಕೆ ಕಾರಣವಾಗಿದೆ. ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯರ #cm siddaramaiah on naxal surrender, ಮುಂದೆ ಶರಣಾದ ನಕ್ಸಲರನ್ನ ಮೊದಲ ದಿನ ಸಾಂತ್ವನ ಕೇಂದ್ರ ಹಾಗೂ ತಾಂತ್ರಿಕ ಕೇಂದ್ರದಲ್ಲಿರಿಸಲಾಗಿತ್ತು. ಮರುದಿನ ಅವರನ್ನು ಎನ್‌ಐಎ ವಿಶೇಷ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದೆ. ಸದ್ಯ ಕೋರ್ಟ್ ಅವರನ್ನು ಜನವರಿ 30 ವರೆಗೂ ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರಿಸಿದೆ. ಇವರ ವಿರುದ್ಧ ಯುಎಪಿಎ ಕಾಯ್ದೆಯಡಿ ಕೇಸ್ ಇರುವ ಕಾರಣಕ್ಕೆ ಪ್ರಕರಣವನ್ನು ಎನ್‌ಐಎ ಟೇಕಾಪ್ ಮಾಡಿಕೊಂಡು ತನಿಖೆ ನಡೆಸಲಿದೆ. ಇನ್ನೂ ಚಿಕ್ಕಮಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿರುವ ಪ್ರಕರಣ ಸಂಬಂಧ ಬಾಡಿವಾರಂಟ್ ಮೇಲೆ ಆರೋಪಿಗಳನ್ನ ವಶಕ್ಕೆ ಪಡೆದು ಆಯಾ ಜಿಲ್ಲೆಯ ಪೊಲೀಸರು ತನಿಖೆ ನಡೆಸಲಿದ್ದಾರೆ.
ಇದರ ನಡುವೆ ಲತಾ ಸೇರಿದಂತೆ ಆರು ನಕ್ಸಲರು ಶರಣಾಗುವ ಸಂದರ್ಭದಲ್ಲಿ ಯಾವುದೇ ಶಸ್ತ್ರಾಸ್ತ್ರಗಳನ್ನು ಸರ್ಕಾರ ಅಥವಾ ಪೊಲೀಸ್ ಮುಂದೆ ಇಡಲಿಲ್ಲ. ಸಮವಸ್ತ್ರವನ್ನ ಮಾತ್ರ ಸೆರೆಂಡರ್ ಮಾಡಿದ್ದರು. ಇನ್ನೂ ಕಾಡಿನಿಂದ ಹೊರಬಂದ ನಕ್ಸಲರು ಎಂಬ ವಿಡಿಯೋದಲ್ಲಿಯು ನಕ್ಸಲರ ಬಳಿ ಯಾವುದೇ ಶಸ್ತ್ರಗಳಿರಲಿಲ್ಲ. ಈ ನಿಟ್ಟಿನಲ್ಲಿ ಕಾಡಿನಲ್ಲಿ ನಡೆದ ಮಾತುಕತೆಯ ಫೋಟೋಗಳಲ್ಲಿಯೂ ನಕ್ಸಲರ ಶಸ್ತ್ರಾಸ್ತ್ರಗಳು ಕಂಡು ಬಂದಿಲ್ಲ. ಹೀಗಾಗಿ ಅವರ ಶಸ್ತ್ರಾಸ್ತ್ರಗಳು ಎಲ್ಲಿಗೆ ಹೋದವು ಎಂಬುದು ಇದೀಗ ಕುತೂಹಲ ಮೂಡಿಸಿದೆ.
ಪತ್ರಿಕೆಯೊಂದರ ವರದಿ ಪ್ರಕಾರ, ಕೊಪ್ಪ ತಾಲ್ಲೂಕು ಮೇಗೂರು ಕಾಡಿನಿಂದ ಶರಣಾದ ನಕ್ಸಲರು ಹೊರಬಂದಿದ್ದರು. ಹಾಗಾದರೆ ಶಸ್ತ್ರಾಸ್ತ್ರಗಳನನ್ನು ಅದೆ ಕಾಡಿನಲ್ಲಿಯೇ ಬಿಟ್ಟು ಬಂದಿದ್ದಾರಾ ಎಂಬ ಕುತೂಹಲ ಮೂಡಿಸಿದೆ. ವಿಕ್ರಂಗೌಡನ ಎನ್‌ಕೌಂಟರ್ ವೇಳೆ ಅವರ ಬಳಿ ಆಟೋಮೆಟಿಕ್ ಗನ್ ಇತ್ತು ಎಂದು ಪೊಲೀಸರು ಹೇಳಿದ್ದರು. ಹಾಗಾದರೆ, ಸದ್ಯ ಶರಣಾದ ನಕ್ಸಲರ ಬಳಿಯಲ್ಲಿ ಬಂದೂಕು ಸೇರಿದಂತೆ ವಿವಿಧ ಶಸ್ತ್ರಾಸ್ತ್ರಗಳು ಇರುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಗೃಹಸಚಿವ ಡಾ.ಜಿ ಪರಮೇಶ್ವರ್ ಶರಣಾದ ನಕ್ಸಲರು ಶಸ್ತ್ರಾಸ್ತ್ರ ಬಿಟ್ಟು ಬಂದಿದ್ದಾರೆ, ಎಲ್ಲಿ ಎಸೆದಿದ್ದಾರೆ ಎಂಬುದರ ತನಿಖೆಯನ್ನ ಪೊಲೀಸರು ನಡೆಸುವರು ಎಂದಿದ್ದಾರೆ. ಇನ್ನೊಂದೆಡೆ ಆರೋಪಿಗಳನ್ನು ಬಾಡಿ ವಾರಂಟ್ ಮೇಲೆ ಪಡೆದು ಚಿಕ್ಕಮಗಳೂರು ಪೊಲೀಸರು ಈ ನಿಟ್ಟಿನಲ್ಲಿ ಶಸ್ತ್ರಾಸ್ತ್ರಗಳ ಡಂಪ್ ಯಾರ್ಡ್ ಹುಡುಕಾಡುವ ಸಾಧ್ಯತೆ ಇದೆ.
SUMMARY | Naxal Latha Mundagaru team surrenders before CM Siddaramaiah. Where are the weapons of the Naxals?
KEY WORDS | Naxal Latha Mundagaru team surrenders before CM Siddaramaiah, Where are the weapons of the Naxals, cm siddaramaiah on naxal surrender,naxal surrender in karnataka,naxals surrender in karnataka,6 naxals surrenders,naxal surrender news,naxals surrender,karnataka news,karnataka naxal surrender,naxal surrender,karnataka naxals surrender,naxals in karnataka,naxal surrender updates,naxalites in karnataka,karnataka latest news,maoists agree to surrender,surrender of naxals,6 naxals surrender,naxals agree to surrender,6 naxals surrender today in karnataka