ರಾಜ್ಯಾಧ್ಯಕ್ಷರ ಬದಲಾವಣೆ ಕುರಿತು ಕಮಾರ್ ಬಂಗಾರಪ್ಪರವರ ಹೇಳಿಕೆಗೆ ಸಂಸದರ ಪ್ರತಿಕ್ರಿಯೆ ಏನು
Former minister Kumar Bangarappa has said that the , post may change in January next year.

SHIVAMOGGA | MALENADUTODAY NEWS | ಮಲೆನಾಡು ಟುಡೆ | Dec 16, 2024
ಮುಂದಿನ ವರ್ಷದ ಜನವರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬದಲಾಗಬಹುದು ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿದ್ದಾರೆ. ಈ ಬಗ್ಗೆ ಸಂಸದ ಬಿವೈ ರಾಘವೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಶರಾವತಿ ಸಂತ್ರಸ್ತರ ವಿಚಾರವಾಗಿ ಶಿವಮೊಗ್ಗದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾತನಾಡುತ್ತಿದ್ದ ಅವರು, ಕುಮಾರ್ ಬಂಗಾರಪ್ಪನವರ ಹೇಳಿಕೆ ಬಗ್ಗೆಯು ಪ್ರತಿಕ್ರಿಯಿಸಿದರು.
ಜನವರಿಯಲ್ಲಿ ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆಯಾಗುತ್ತೆ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿದ್ದಾರೆ. ಅವರು ಹೇಳಿದ್ದು ತಪ್ಪಿಲ್ಲ, ಆದಾಗ್ಯು ಎಲ್ಲಾ ವಿಚಾರಗಳಿಗೆ ಬಿಜೆಪಿಯ ಹೈಕಮಾಂಡ್ ಉತ್ತರಕೊಡುತ್ತದೆ ಎಂದರು. ನಮ್ಮ ಪಕ್ಷ ಎಲ್ಲಾರನ್ನು ಒಗ್ಗಟ್ಟಾಗಿ ಕರೆದುಕೊಂಡು ಹೋಗುತ್ತಿದೆ. ಬಿವೈ ವಿಜಯೇಂದ್ರರವರು ಅಧ್ಯಕ್ಷರಾದ ನಂತರ ಕೇವಲ ಮೂರು ತಿಂಗಳ ಅವಧಿಯಲ್ಲಿಯೇ ಲೋಕಸಭಾ ಚುನಾವಣೆ ನಡೆಯಿತು. ಆಗಿನಿಂದ ಈಗಿನವರೆಗೆ ಒಬ್ಬ ದಕ್ಷ ನಾಯಕನಾಗಿ ಇಡೀ ಸಂಘಟನೆಯನ್ನು ರಾಜ್ಯದಲ್ಲಿ ಉತ್ತಮ ರೀತಿಯಲ್ಲಿ ತೆಗೆದುಕೊಂಡು ಹೋಗುತ್ತಿದ್ದಾರೆ.
ಇದರ ನಡುವೆ ನನಗನಿಸಿರುವುದು ಏನೆಂದರೆ ಎಂಪಿ, ಎಂಎಲ್ ಎ ಚುನಾವಣೆಗಳೆಲ್ಲಾ ಮುಗಿದು ಹೋಯಿತು. ಇನ್ನೂ ನಮ್ಮ ಚುನಾವಣೆ ಬರೋಕೆ 4 ವರ್ಷ ಸಮಯವಿದೆ. ಆದರೆ ಮುಂದೆ ಜಿಲ್ಲಾಪಂಚಾಯಿತಿ ಚುನಾವಣೆ ನಡೆಯಬಹುದು. ಆ ಚುನಾವಣೆಯಲ್ಲಿ ನಮ್ಮ ಕಾರ್ಯಕರ್ತರು ಭಾಗವಹಿಸುತ್ತಾರೆ. ಇದು ಕಾರ್ಯಕರ್ತರ ಚುಣಾವಣೆ ಆಗಿರುತ್ತದೆ. ಇಂತಹ ಚುನಾವಣೆಗಳು ನಡೆಯುವ ಸಮಯದಲ್ಲಿ ಆಕಾಂಕ್ಷಿಗಳ ಮನಸಲ್ಲಿ ಏನೇ ಇದ್ದರೂ ಅದನ್ನು ಬಗೆಹರಿಸಿಕೊಳ್ಳಲು ನಾಲ್ಕು ಗೋಡೆಗಳಿವೆ, ಹಾಗೆಯೇ ಹಿರಿಯ ನಾಯಕರುಗಳಿದ್ದಾರೆ ಅಲ್ಲಿ ಬಗೆಹರಿಸಿಕೊಳ್ಳಬೇಕು. ಮುಂದಿನ ಚುನಾವಣೆ ಸಂದರ್ಭದಲ್ಲಿ ಕಾರ್ಯಕರ್ತರಿಗೆ ವಿಶ್ವಾಸ ತುಂಬುವ ಕಾರ್ಯವಾಗಬೇಕು ಹಾಗೆಯೇ ಅಲ್ಲಿ ವಿಶ್ವಾಸ ಪೂರಕವಾದ ವಾತಾವರಣವನ್ನು ನಿರ್ಮಾಣ ಮಾಡಬೇಕಾಗರುವುದು ನಮ್ಮಂತ ನಾಯಕರ ಕರ್ತವ್ಯ ಆ ದಿಕ್ಕಿನಲ್ಲಿ ಎಲ್ಲಾ ಆಕಾಂಕ್ಷಿಗಳು ಕೈ ಜೋಡಿಸಬೇಕು ಎಂದರು.
SUMMARY| Former minister Kumar Bangarappa has said that the , post may change in January next year.
KEYWORDS| Kumar Bangarappa, by raghavendra, bjp,