ಬೊಮ್ಮನಕಟ್ಟೆಯಲ್ಲಿ ಅನುಮಾಸ್ಪದ ವ್ಯಕ್ತಿಗಳಿಂದ ಆಟೋ ಸವಾರಿ | ಹಿಡಿದ ಪೊಲೀಸರಿಗೆ ಕಾದಿತ್ತು ಅಚ್ಚರಿ | ಮೂವರು ಅರೆಸ್ಟ್‌

ವಿನೋಬನಗರ ಪೊಲೀಸರಿಂದ ಆಟೋದಲ್ಲಿದ್ದ ಮೂವರು ಅರೆಸ್ಟ್‌ Vinobanagar police arrest three in auto

ಬೊಮ್ಮನಕಟ್ಟೆಯಲ್ಲಿ ಅನುಮಾಸ್ಪದ ವ್ಯಕ್ತಿಗಳಿಂದ ಆಟೋ ಸವಾರಿ | ಹಿಡಿದ ಪೊಲೀಸರಿಗೆ ಕಾದಿತ್ತು ಅಚ್ಚರಿ | ಮೂವರು ಅರೆಸ್ಟ್‌
Vinobanagar police arrest three in auto

SHIVAMOGGA | MALENADUTODAY NEWS |  Jul 31, 2024

ವಾಹನ ತಪಾಸಣೆ ವೇಳೆ ಆಟೋವೊಂದರಲ್ಲಿ ಲಾಂಗ್‌ ಪತ್ತೆಯಾದ ಹಿನ್ನೆಲೆಯಲ್ಲಿ ಮಾರಕಾಸ್ತ್ರ ಕಾಯಿದೆಯಡಿಯಲ್ಲಿ ಮೂವರನ್ನ ವಿನೋಬನಗರ ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. 

ಏನಿದು ಪ್ರಕರಣ 

ಶಿವಮೊಗ್ಗದ ಬೊಮ್ಮನಕಟ್ಟೆಯ ಬಳಿಯಲ್ಲಿ ವಿನೋಬನಗರ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಅಲ್ಲಿಗೆ ಆಟೋವೊಂದು ಬಂದಿದೆ. 

ನಿಮ್ಮ ವಾಟ್ಸಾಪ್‌ನಲ್ಲಿ ನೋಡಿ, ಜಸ್ಟ್‌ ಒಂದು ಫಾಲೋ ಕೊಡಿ

ಪೊಲೀಸರನ್ನ ನೋಡುತ್ತಲೇ ಆಟೋದಲ್ಲಿದ್ದವರು ಪರಾರಿಯಾಗಲು ಯತ್ನಿಸಿದ್ದಾರೆ ಎಂದು ಹೇಳಲಾಗಿದೆ. ಈ ವೇಳೆ ಅವರನ್ನ ಪೊಲೀಸರು ಹಿಡಿದಿದ್ದಾರೆ. 

ಅಲ್ಲದೆ ಅವರ ವರ್ತನೆ ಅನುಮಾಸ್ಪದವಾಗಿ ಕಂಡು ಬಂದ ಹಿನ್ನೆಲೆಯಲ್ಲಿ ಆಟೋವನ್ನ ತಪಾಸಣೆ ಮಾಡಿದ್ದಾರೆ.

ವಿನೋಬನಗರ ಪೊಲೀಸ್‌ ಸ್ಟೇಷನ್‌ 

ಬಾಲರಾಜ್‌ ಅರಸ್‌ ರಸ್ತೆ ಮೇಲೆ ಉರುಳಿದ ದೊಡ್ಡ ಮರ | ಏನಾಯ್ತು?

ಈ ವೇಳೆ ಆಟೋದ ಸೀಟಿನ ಅಡಿಯಲ್ಲಿ ಎರಡು ಅಡಿ ಉದ್ದದ ಲಾಂಗ್‌ವೊಂದು ಪತ್ತೆಯಾಗಿದೆ. ಅದನ್ನ ಜಪ್ತು ಮಾಡಿದ ಪೊಲೀಸರು ಶಮಂತ, ರವಿ, ಹಾಗೂ ಅಕ್ಬರ್‌ ಎಂಬಾತನನ್ನ ವಶಕ್ಕೆ ಪಡೆದು ಕೇಸ್‌ ದಾಖಲಿಸಿದ್ದಾರೆ.