ನಕ್ಸಲ್‌ ನಾಯಕ ವಿಕ್ರಂಗೌಡನ ಪತ್ನಿಯು ನಕ್ಸಲ್‌ | ಯಾರು ಗೊತ್ತಾ

Naxal leader Vikram Goudlu had married Naxal leader Savitri while she was in the forest

ನಕ್ಸಲ್‌ ನಾಯಕ ವಿಕ್ರಂಗೌಡನ ಪತ್ನಿಯು ನಕ್ಸಲ್‌ | ಯಾರು ಗೊತ್ತಾ
Naxal leader Vikram Goudlu , Naxal leader Savitri 

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 20, 2024

 

ಶಿವಮೊಗ್ಗ | ಮೊನ್ನೆ ಸಂಜೆ ಪೀತಬೈಲ್‌ನಲ್ಲಿ ಎನ್‌ಕೌಂಟರ್‌ ಆದ ನಕ್ಸಲ್‌ ನಾಯಕ ವಿಕ್ರಂಗೌಡ್ಲು ವೈಯಕ್ತಿಕ ವಿಚಾರದ ಬಗ್ಗೆ ಒಂದಷ್ಟು ಮಾಹಿತಿ ಕುತೂಹಲಕಾರಿಯಾಗಿದೆ. 2021 ರ ನವೆಂಬರ್‌ ತಿಂಗಳಲ್ಲಿ ಕೇರಳದ ವೈನಾಡುವಿನ ಸುಲ್ತಾನ್‌ ಬತ್ತೇರಿ ಬಳಿ ಪೊಲೀಸರು ಬಿ‌ ಜಿ ಕೃಷ್ಣಮೂರ್ತಿಯನ್ನ ಅರೆಸ್ಟ್‌ ಮಾಡಿದ್ದರು. ಅದರ ಬೆನ್ನಲ್ಲೆ ನಕ್ಸಲ್‌ ನಾಯಕಿ ಸಾವಿತ್ರಿಯನ್ನ ಅರೆಸ್ಟ್‌ ಮಾಡಲಾಗಿತ್ತು. ಆವತ್ತು ಅರೆಸ್ಟ್‌ ಆಗಿದ್ದ ಸಾವಿತ್ರಿ ವಿಕ್ರಂಗೌಡನ ಪತ್ನಿ

 

ಕಾಡು ಸೇರಿದ ನಕ್ಸಲರು ಅವರವರಲ್ಲೆ ವಿವಾಹವಾಗಿದ್ದರು ಹೊಸಗದ್ದೆ ಪ್ರಭಾಳನ್ನ ಮದುವೆಯಾಗಿದ್ದ ಬಿಜಿಕೆ ಪೊಲೀಸರಿಗೆ ಸಿಕ್ಕಿಬೀಳುತ್ತಲೇ ಆಕೆ ಶರಣಾಗಿದ್ದಳು. ಆದರೆ ಸಾವಿತ್ರಿ ಅರೆಸ್ಟ್‌ ಆದ ಸಂದರ್ಭದಲ್ಲಿ ವಿಕ್ರಂಗೌಡ ಆಕೆಯ ಜೊತೆಗಿರಲಿಲ್ಲ. ಇದೀಗ ವಿಕ್ರಂಗೌಡ ಎನ್‌ಕೌಂಟರ್‌ ಆಗಿದ್ದಾನೆ. ಕಾಡಿನಲ್ಲಿಯೇ ಸಾವಿತ್ರಿ ಜೊತೆಗೆ ಈತ ಮದುವೆಯಾಗಿದ್ದ ಎನ್ನುತ್ತದೆ ಪೊಲೀಸ್‌ ಗುಪ್ತಚರ ಮೂಲಗಳು. ಇಬ್ಬರದ್ದು ಪ್ರೇಮ ವಿವಾಹ ಎನ್ನಲಾಗುತ್ತದೆಯಾದರೂ ಅದರ ಬಗ್ಗೆ ಮಾಹಿತಿ ಸ್ಪಷ್ಟವಿಲ್ಲ. ಜೊತೆಯಲ್ಲಿ ಇವರಿಬ್ಬರು ಒಂದು ಹಂತದಲ್ಲಿ ಬೇರೆಯಾಗಿದ್ದರು ಎಂದು ಸಹ ಹೇಳಲಾಗುತ್ತದೆ. 

 

SUMMARY | Naxal leader Vikram Goudlu had married Naxal leader Savitri while she was in the forest

 

KEY WORDS | Naxal leader Vikram Goudlu , Naxal leader Savitri