ಶಿವಮೊಗ್ಗದ ಚಿನ್ನದ ವ್ಯಾಪಾರಿಗೂ ವಂಚಿಸಿದ ವರ್ತೂರು ಪ್ರಕಾಶ್ ಆಪ್ತೆ ಎನ್ನಲಾದ ಶ್ವೇತಾಗೌಡ ?
Shweta Gowda, Varthur Prakash Case, Shweta Gowda fraud to Shimoga businessman
SHIVAMOGGA | MALENADUTODAY NEWS | ಮಲೆನಾಡು ಟುಡೆ Dec 26, 2024
ಚಿನ್ನದ ಅಂಗಡಿಯವರಿಗೆ ಯಾಮಾರಿಸಿ ವಂಚಿಸಿದ ಪ್ರಕರಣದಲ್ಲಿ ಬಂಧನವಾಗಿರುವ ವರ್ತೂರು ಪ್ರಕಾಶ್ ಆಪ್ತೆ ಎನ್ನಲಾದ ಶ್ವೇತಾಗೌಡ ಶಿವಮೊಗ್ಗದ ಚಿನ್ನದ ವ್ಯಾಪಾರಿಗೂ ವಂಚಿಸಿದ ಸಂಬಂಧ ಇನ್ನೊಂದು ಪ್ರಕರಣ ದಾಖಲಾಗಿದೆ. ಬೆಂಗಳೂರು ಕರ್ಮಶಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಶಿವಮೊಗ್ಗ ನಗರದ ಚಿನ್ನದ ವ್ಯಾಪಾರಿಯೊಬ್ಬರಿಗೆ ಶ್ವೇತಾ ಗೌಡ 287 ಗ್ರಾಮ್ ಚಿನ್ನ ಪಡೆದು ವಂಚಿಸಿದ್ದಾರೆ ಎಂಬುದು ಆರೋಪ. ಆಕೆಯ ಬಂಧನ ಬೆನ್ನಲ್ಲೆ ಶಿವಮೊಗ್ಗದ ವ್ಯಾಪಾರಿಯೊಬ್ಬರು ಈ ಸಂಬಂಧ ದೂರು ನೀಡಿದ್ದಾರೆ ಎನ್ನಲಾಗಿದೆ. ಬೆಂಗಳೂರಿನ ನಗರ್ತ ಪೇಟೆಯಲ್ಲಿ ಶ್ವೇತಾಗೌಡ ಶಿವಮೊಗ್ಗದ ವ್ಯಾಪಾರಿಯೊಬ್ಬರನ್ನು ಪರಿಚಯ ಮಾಡಿಕೊಂಡು ಅವರಿಗೆ ಚಿನ್ನದಾಭರಣಗಳನ್ನು ಸೇಲ್ ಮಾಡಿಕೊಡುವ ಆಶ್ವಾಸನೆ ಕೊಟ್ಟು 287 ಗ್ರಾಮ್ ಚಿನ್ನ ಪಡೆದು ಯಾಮಾರಿಸಿದ್ದಾಗಿ ಆರೋಪಿಸಲಾಗಿದೆ. ಈ ಸಂಬಂಧ ಇದೀಗ ಪ್ರಕರಣವೊಂದಲ್ಲಿ ಆಕೆಯನ್ನ ಬಂಧಿಸಿದ ಬೆನ್ನಲ್ಲೆ ಶಿವಮೊಗ್ಗದ ವ್ಯಾಪಾರಿಯು ದೂರು ದಾಖಲಿಸಿದ್ದಾರೆ.
ಗೌರಿ ಗಣೇಶ ಸಿನಿಮಾದ ರೀತಿಯಲ್ಲಿ ವಂಚನೆ
ಹಿಂದೆ ಕನ್ನಡದಲ್ಲಿ ತೆರೆಕಂಡಿದ್ದ ಗೌರಿಗಣೇಶ ಸಿನಿಮಾದ ರೀತಿಯಲ್ಲಿ ಮಹಿಳೆಯು ವಂಚಿಸಿರುವ ಆರೋಪವೊಂದು ಕೇಳಿಬಂದಿದೆ. ಆಕೆಯು ಸಿನಿಮಾದಲ್ಲಿದ್ದಂತೆ ತನ್ನ ಜೊತೆಗೆ ಸಂಬಂಧ ಹೊಂದಿದ್ದವರಿಗೆ ತಮ್ಮಿಂದ ಮಗುವಾಗಿರುವುದಾಗಿ ಹೇಳಿ ಪ್ರತಿ ತಿಂಗಳು ಹಣಪಡೆಯುತ್ತಿದ್ದಳು ಎಂಬ ಆರೋಪವೊಂದರ ಬಗ್ಗೆ ರಾಜ್ಯದ ಮಾದ್ಯಮವೊಂದು ವರದಿ ಮಾಡಿದೆ.
SUMMARY | Shweta Gowda, Varthur Prakash Case, Shweta Gowda fraud to Shimoga businessman too
KEY WORDS |Shweta Gowda, Varthur Prakash Case, Shweta Gowda fraud to Shimoga businessman