ವಂದೇ ಭಾರತ್ ಟ್ರೈನ್ ವಿಳಂಬವಾಗುತ್ತಾ? ಸಂಸದರು ಹೇಳಿದ್ದೇನು? | ನಾಲ್ಕು ಅಭಿವೃದ್ಧಿ ಕಾಮಗಾರಿ ಬಗ್ಗೆ BYR ನಾಲ್ಕು ಮಾತು
MP BY Raghavendra, Shivamogga-Tumkur four-lane road , Kotegangur Railway Coaching Center, Vande Bharat Train, Harihar-Shimoga Railway Line, Shikaripura-Ranebennur Train Line,
SHIVAMOGGA | MALENADUTODAY NEWS | ಮಲೆನಾಡು ಟುಡೆ Dec 26, 2024
ಸಾಗರ ತಾಲ್ಲೂಕು ಕಳಸವಳ್ಳಿ- ಸಿಗಂದೂರು ಸೇತುವೆ ಕಾಮಗಾರಿ ಅಂತಿಮಘಟ್ಟ ತಲುಪಿದೆ. ಅದರ ವಿಡಿಯೋಗಳು ವೈರಲ್ ಆಗುತ್ತಿದೆ. ಇದರ ನಡುವೆ ಶಿವಮೊಗ್ಗ ಚತುಷ್ಪಥ ಕಾಮಗಾರಿ ಏನಾಗಿದೆ ಎನ್ನುವುದನ್ನ ಗಮನಿಸುವುದಾದರೆ, ಈ ಬಗ್ಗೆ ಮಾತನಾಡಿರುವ ಸಂಸದ ಬಿ.ವೈ.ರಾಘವೇಂದ್ರ ಶಿವಮೊಗ್ಗ-ತುಮಕೂರು ಚತುಷ್ಪಥ ಹೆದ್ದಾರಿ ಕಾಮಗಾರಿ ಭೂಸ್ವಾಧಿನ ಪ್ರಕ್ರಿಯೆಯಿಂದ ಸ್ವಲ್ಪ ವಿಳಂಬವಾಗಿ ಸಾಗುತ್ತಿದೆ ಎಂದು ಮಾಹಿತಿ ನೀಡಿದರು. ಚತುಷ್ಪಥ ಕಾಮಗಾರಿ ಮುಕ್ತಾಯವಾದರೆ ಬೆಂಗಳೂರು ಪ್ರಯಾಣ ಇನ್ನಷ್ಟು ಸುಲಭವಾಗಲಿದೆ ಎಂದು ಮಾಹಿತಿ ನೀಡಿದರು.
ವಂದೇ ಭಾರತ್ ರೈಲು
ಶಿವಮೊಗ್ಗ ಸಮೀಪದ ಕೋಟೆಗಂಗೂರು ರೈಲ್ವೆ ಕೋಚಿಂಗ್ ಸೆಂಟರ್ ಕಾಮಗಾರಿ ಮುಕ್ತಾಯವಾಗಬೇಕಿದೆ. ಇದಾದರೆ ಶಿವಮೊಗ್ಗಕ್ಕೆ ಒಂದೇ ಭಾರತ್ ರೈಲು ಶಿವಮೊಗ್ಗಕ್ಕೆ ಬರಲಿದೆ ಎನ್ನುವ ಮೂಲಕ ಸಂಸದರ ಕೋಚಿಂಗ್ ಸೆಂಟರ್ ಮುಕ್ತಾಯದ ಬಳಿಕವಷ್ಟೆ ವಂದೇ ಭಾರತ್ ಟ್ರೈನ್ ಶಿವಮೊಗ್ಗಕ್ಕೆ ಬರಲಿದೆ ಎನ್ನುವ ಸುಳಿವು ನೀಡಿದರು.
ಇನ್ನೂ ಇದೇ ವೇಳೆ ಹರಿಹರ ಮತ್ತು ಶಿವಮೊಗ್ಗ ನಡುವಿನ ರೈಲ್ವೆ ಮಾರ್ಗ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. 2500 ಕೋಟಿ ರು. ಯೋಜನೆಯ ಈ ಕಾಮಗಾರಿ ಚುರುಕಿಂದ ನಡೆಯುತ್ತಿದೆ. ಶಿಕಾರಿಪುರ ಮತ್ತು ರಾಣೆ ಬೆನ್ನೂರು ನಡುವೆ ಭೂ ಸ್ವಾಧೀನ ಪ್ರಕ್ರಿಯೆಗಳು ಆಗಬೇಕಿದೆ. ದೇಶದ ಎರಡನೇಯ ಅತಿ ಉದ್ದದ ಸೇತುವೆ ಸಿಗಂದೂರು ಸೇತುವೆ ಉದ್ಘಾಟನೆ 2025 ಏಪ್ರಿಲ್, ಮೇ ಹೊತ್ತಿಗೆ ನಡೆಯಲಿದೆ ಎಂದು ತಿಳಿಸಿದ್ದಾರೆ.
SUMMARY | MP BY Raghavendra explained about the Shivamogga-Tumkur four-lane road and Kotegangur Railway Coaching Center, Vande Bharat Train, Harihar-Shimoga Railway Line, Shikaripura-Ranebennur Train Line,
KEY WORDS | MP BY Raghavendra, Shivamogga-Tumkur four-lane road , Kotegangur Railway Coaching Center, Vande Bharat Train, Harihar-Shimoga Railway Line, Shikaripura-Ranebennur Train Line,