ಫೆಬ್ರವರಿ 18 ರಂದು ಉಡುತಡಿ ನಾಟಕ ಪ್ರದರ್ಶನ, ಕೃತಿ ಬಿಡುಗಡೆ
Ganesh R. Kenchana's play Uduthadi drama exhibition and book release programme will be held on Feb. 18 at 6 pm at Kuvempu Rangamandira.

SHIVAMOGGA | MALENADUTODAY NEWS | ಮಲೆನಾಡು ಟುಡೆ | Feb 17, 2025
ಶಿವಮೊಗ್ಗ | ಮಲೆನಾಡು ಕಲಾ ತಂಡ ಶಿವಮೊಗ್ಗ, ಎಂ.ಕೆ. ರೇಣುಕಪ್ಪಗೌಡ ಪ್ರತಿಷ್ಠಾನ ,ಮಸರೂರು ಇವರ ಸಂಯುಕ್ತಾಶ್ರಯದಲ್ಲಿ ನಾಟಕ ಅಕಾಡೆಮಿ ಸದಸ್ಯ ಗಣೇಶ್ ಆರ್. ಕೆಂಚನಾಳ ರಚನೆಯ ಉಡುತಡಿ ನಾಟಕ ಪ್ರದರ್ಶನ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮ ಫೆಬ್ರವರಿ18ರಂದು ಸಂಜೆ 6ಕ್ಕೆ ಕುವೆಂಪು ರಂಗಮಂದಿರದಲ್ಲಿ ನಡೆಯಲಿದೆ. ಈ ಕುರಿತು ಗಣೇಶ್ ಕೆಂಚನಾಳ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಶಿವಮೊಗ್ಗ ಬೆಕ್ಕಿನಕಲ್ಮಠ, ಆನಂದಪುರಂನ ಶ್ರೀ ಮನ್ಮಹಾರಾಜ ನಿರಂಜನ ಜಗದ್ಗುರು ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸಲಿದ್ದಾರೆ. ಉಡುತಡಿ ಪಸ್ತಕವನ್ನು ವಿಧಾನ ಪರಿಷತ್‌ನ ಮಾಜಿ ಶಾಸಕರಾದ ಎಸ್ ರುದ್ರೇಗೌಡರು ಬಿಡುಗಡೆ ಮಾಡಲಿದ್ದಾರೆ ಎಂದರು.
ನಂತರ ಉಡುತಡಿ ಎಂಬ ನಾಟಕ ಕಾರ್ಯಕ್ರಮವಿದ್ದು,ಈ ನಾಟಕವನ್ನು ಮಂಜುಳಾ ಬದಾಮಿ, ವೈಡಿ, ಬದಾಮಿ, ಸಾಣೇಹಳ್ಳಿಯವರು ನಿರ್ದೇಶಿಸಿದ್ದಾರೆ. 12ನೇ ಶತಮಾನದ ಶಿವಶರಣೆ ಅಕ್ಕಮಹಾದೇವಿಯವರ ಜೀವನ ಅಸಾಮಾನ್ಯವಾದ, ವೈಶಿಷ್ಟ್ಯತೆಯಿಂದ, ವೈಚಾರಿಕವಾದ, ಅನುಭಾವ ಪೂರ್ಣವಾದ ನಡೆ-ನುಡಿಗಳೊಂದಾದ ಪರಿಯಲ್ಲಿರುವುದು ಕಂಡುಬರುತ್ತದೆ.
ಶರಣ ಚಳುವಳಿಯಲ್ಲಿ ಎತ್ತರದ ಚೇತನವಾಗಿ ಮೂಡಿ ಬಂದ ವ್ಯಕ್ತಿತ್ವ ಆಕೆಯದು. ಅವರ ಇಡೀ ಜೀವನ ಕಥನ, ಐತಿಹ್ಯ, ವಿಸ್ಮಯ, ಪ್ರಭಾವಗಳಿಂದ ತುಂಬಿದೆ. ಸ್ವತಃ ಅಕ್ಕಮಹಾದೇವಿಯವರೇ ರಚಿಸುವ ವಚನಗಳೂ, ಅವರ ವ್ಯಕ್ತಿತ್ವವನ್ನು ಕಟ್ಟಿ ಕೊಡುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ನಾಡಿನ ಹಲವೆಡೆ ಯಶಸ್ವೀ ಪ್ರದರ್ಶನ ಕಂಡ ಈ ನಾಟಕ, ಅಕ್ಕನ ವ್ಯಕ್ತಿತ್ವವನ್ನು ಭಿನ್ನ ಆಯಾಮದಲ್ಲಿ ಕಟ್ಟಿಕೊಡುವುದರ ಮೂಲಕ ಹೊಸ ಚಿಂತನೆಗೆ ನಮ್ಮನ್ನು ಹಚ್ಚುತ್ತಾ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತದೆ ಎಂದರು. ಈ ನಾಟಕಕ್ಕೆ ಒಬ್ಬರಿಗೆ 99 ರೂ. ಪ್ರವೇಶ ಧನವಿದ್ದು, ನಾಟಕ ವೀಕ್ಷಿಸಲು ಬಂದವರಿಗೆ ಬಿಡುಗಡೆಯಾಗುವ ಕೃತಿಯನ್ನು ಉಚಿತವಾಗಿ ನೀಡಲಾಗುವುದು ಎಂದರು.
SUMMARY | Ganesh R. Kenchana's play Uduthadi drama exhibition and book release programme will be held on Feb. 18 at 6 pm at Kuvempu Rangamandira.
KEYWORDS | Ganesh, Uduthadi drama, book release programme, Kuvempu Rangamandira,