ಶಿವಮೊಗ್ಗದ ಯುವಕನಿಗೆ ಉಡುಪಿ ಕೋರ್ಟ್‌ನಲ್ಲಿ 20 ವರ್ಷ ಶಿಕ್ಷೆ | ನಡೆದಿದ್ದೇನು ಗೊತ್ತಾ?

A Udupi court has sentenced a resident of Shivamogga district to 20 years in jail in a POCSO case. Udupi Additional District POCSO Special Court issued the order today.

ಶಿವಮೊಗ್ಗದ ಯುವಕನಿಗೆ ಉಡುಪಿ ಕೋರ್ಟ್‌ನಲ್ಲಿ 20 ವರ್ಷ ಶಿಕ್ಷೆ | ನಡೆದಿದ್ದೇನು ಗೊತ್ತಾ?
Udupi court has sentenced , Shivamogga district , 20 years in jail in a POCSO case, Udupi Additional District POCSO Special Court ,

SHIVAMOGGA | MALENADUTODAY NEWS | ಮಲೆನಾಡು ಟುಡೆ Oct 27, 2024  

ಪೋಕ್ಸೋ ಪ್ರಕರಣವೊಂದರಲ್ಲಿ ಉಡುಪಿ ಕೋರ್ಟ್‌ ಶಿವಮೊಗ್ಗ ಜಿಲ್ಲೆಯ ನಿವಾಸಿಯೊಬ್ಬರಿಗೆ 20 ವರುಷ ಶಿಕ್ಷೆ ವಿಧಿಸಿದೆ. ಉಡುಪಿ ಹೆಚ್ಚುವರಿ ಜಿಲ್ಲಾ ಪೋಕ್ಸೊ ವಿಶೇಷ ನ್ಯಾಯಾಲಯವು ಇಂದು ಆದೇಶ ನೀಡಿದೆ.

ಏನಿದು ಪ್ರಕರಣ 

(ಪ್ರಕರಣದಲ್ಲಿ ವೈಯಕ್ತಿಕ ಮಾಹಿತಿ ಗೌಪ್ಯವಾಗಿದೆ) ಉಡುಪಿ ಹೆಚ್ಚುವರಿ ಜಿಲ್ಲಾ ಪೋಕ್ಸೊ ವಿಶೇಷ ನ್ಯಾಯಾಲಯದ ಮುಂದೆ ಬಂದ ಪ್ರಕರಣದ ವಿವರ ಹೀಗಿದೆ.

ಶಿವಮೊಗ್ಗ ಜಿಲ್ಲೆಯ ಊರೊಂದರ ನಿವಾಸಿಯಾದ 27 ವರ್ಷದ ಯುವಕ ಉಡುಪಿ ಜಿಲ್ಲೆ ತಾಲ್ಲೂಕು ಒಂದರ ಗ್ರಾಮಕ್ಕೆ ಮದುವೆ ಕಾರ್ಯಕ್ರಮಗೊಂದಕ್ಕೆ ತೆರಳಿದ್ದ. ಮದುವೆ ಮುಗಿದ ಬಳಿಕವೂ ಶಿವಮೊಗ್ಗ ಜಿಲ್ಲೆಯಲ್ಲಿರುವ ತನ್ನೂರಿಗೆ ವಾಪಸ್‌ ಆಗದ ಯುವಕ ಆ ಮನೆಯಲ್ಲಿದ್ದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದೆ ಬೆದರಿಕೆ ಹಾಕಿದ್ದ. ಆ ಬಳಿಕ ಶಿವಮೊಗ್ಗ ಜಿಲ್ಲೆಗೆ ವಾಪಸ್‌ ಆಗಿದ್ದ. ಈ ನಡುವೆ ಬಾಲಕಿ ಗರ್ಭಿಣಿಯಾಗಿದ್ದಾಳೆ. ಇದರಿಂದ ವಿಚಾರ ಗೊತ್ತಾಗಿ ಪ್ರಕರಣ ದಾಖಲಾಗಿತ್ತು. ಪೊಲೀಸರು ವಿಚಾರಣೆ ನಡೆಸಿ ಕೋರ್ಟ್‌ಗೆ ಚಾರ್ಜ್‌ ಶೀಟ್‌ ಸಲ್ಲಿಸಿದ್ದರು. 

ಸದ್ಯ ಕೋರ್ಟ್‌ ಸಂತ್ರಸ್ತೆಯ ಸಾಕ್ಷ್ಯ ಹಾಗೂ ಡಿಎನ್‌ಎ ವರದಿ ಹಾಗೂ ಪೂರಕ ಸಾಕ್ಷ್ಯಗಳನ್ನ ಆಧರಿಸಿ ಆರೋಪಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ 21 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದೆ.

ದಂಡ ಮೊತ್ತದಲ್ಲಿ 15 ಸಾವಿರ ರೂಪಾಯಿ ನೊಂದ ಬಾಲಕಿಗೆ ಮತ್ತು 6 ಸಾವಿರ ರೂಪಾಯಿ ಸರಕಾರಕ್ಕೆ ಪಾವತಿಸುವಂತೆ ಮತ್ತು ಸರಕಾರದಿಂದ ನೊಂದ ಬಾಲಕಿಗೆ 2ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಆದೇಶ ನೀಡಿದೆ. 

SUMMARY |A Udupi court has sentenced a resident of Shivamogga district to 20 years in jail in a POCSO case. Udupi Additional District POCSO Special Court issued the order today.

KEYWORDS |  Udupi court has sentenced , Shivamogga district , 20 years in jail in a POCSO case, Udupi Additional District POCSO Special Court ,