ಸಂಕ್ರಾಂತಿಗೆ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಿಂದ ಗುಡ್ ನ್ಯೂಸ್ | ಪ್ರವಾಸಿಗರ ವಿಶೇಷ ಸೂಚನೆ
Tyavarekoppa Tiger and Lion Sanctuary, Tyavarekoppa remains open on Sankranti day
![ಸಂಕ್ರಾಂತಿಗೆ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಿಂದ ಗುಡ್ ನ್ಯೂಸ್ | ಪ್ರವಾಸಿಗರ ವಿಶೇಷ ಸೂಚನೆ](https://malenadutoday.com/uploads/images/202412/image_870x_676140a6dc05a.webp)
SHIVAMOGGA | MALENADUTODAY NEWS | ಮಲೆನಾಡು ಟುಡೆ Jan 10, 2025
ತ್ಯಾವರೆಕೊಪ್ಪ ವನ್ಯದಾಮ ಬರುವ ಮಂಗಳವಾರವೂ ತೆರೆದಿರಲಿದೆ. ಸಂಕ್ರಾಂತಿಯ ಸಂಬಂಧ ವನ್ಯದಾಮ ತನ್ನ ರಜೆಯ ದಿನವೂ ಓಪನ್ ಇರಲಿದೆ. ಈ ಬಗ್ಗೆ ಪ್ರಕಟಣೆಯನ್ನು ಸಹ ನೀಡಿದೆ. ಪ್ರಕಟಣೆಯ ವಿವರ ಹೀಗಿದೆ.
ಹುಲಿ-ಸಿಂಹಧಾಮ, ತ್ಯಾವರೆಕೊಪ್ಪದಲ್ಲಿ ಸಾಮಾನ್ಯವಾಗಿ ಮಂಗಳವಾರದಂದು ವಾರದ ರಜೆಯಾಗಿರುತ್ತದೆ. ಆದರೆ ಸಂಕ್ರಾಂತಿ ಹಬ್ಬದ ಹಿನ್ನೆಲೆ ದಿನಾಂಕ: 14-01-2025 ರ ಮಂಗಳವಾರ ಸಹ ಮೃಗಾಲಯ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ.
ಸಾರ್ವಜನಿಕರು ಮೃಗಾಲಯ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಕಾರಣ ಪ್ರವಾಸಿಗರಿಗೆ ಪ್ರಕೃತಿ ಶಿಕ್ಷಣ ನೀಡುವ ಸಲುವಾಗಿ ಹುಲಿ-ಸಿಂಹಧಾಮದಲ್ಲಿ ಜ.14 ರ ಮಂಗಳವಾರವೂ ಸಹ ತೆರೆದಿರುತ್ತದೆ. ಪ್ರವಾಸಿಗರು ಇದರ ಸದುಪಯೋಗ ಪಡೆಯಬೇಕೆಂದು ಹುಲಿ-ಸಿಂಹಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕಾರ್ಯ ನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.
SUMMARY | Tyavarekoppa Tiger and Lion Sanctuary, Tyavarekoppa remains open on Sankranti day
KEY WORDS | Tyavarekoppa Tiger and Lion Sanctuary, Tyavarekoppa remains open on Sankranti day