ಜೀವಕ್ಕಿಲ್ಲ ಗ್ಯಾರಂಟಿ | ದೀಪಾವಳಿ ಹಬ್ಬದ ಖರೀದಿ ಮುಗಿಸಿ ಬರುತ್ತಿದ್ದ ಆಟೋದಲ್ಲಿದ್ದವರಿಗೆ ಯಮನಾದ ಕಾರು | ಸಾಗರದಲ್ಲಿ ನಡೆದಿದ್ದೇನು?
Two persons were killed in a road accident near Thyagarathi in Sagar taluk of Shivamogga district yesterday
SHIVAMOGGA | MALENADUTODAY NEWS | ಮಲೆನಾಡು ಟುಡೆ Nov 2, 2024
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ತ್ಯಾಗರ್ತಿ ಬಳಿ ನಿನ್ನೆ ಭೀಕರ ಅಪಘಾತ ಸಂಭವಿಸಿದ್ದು ಇಬ್ಬರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.
ಸಾಗರ ತಾಲೂಕು ತ್ಯಾಗರ್ತಿ ರಸ್ತೆಯ ರೈಲ್ವೆ ಗೇಟ್ ಬಳಿ ಘಟನೆ ಸಂಭವಿಸಿದೆ. ಇಲ್ಲಿನ ಬೊಮ್ಮತ್ತಿ ಹತ್ತಿರ ಆಟೋ ಮತ್ತು ಕಾರಿನ ನಡುವೆ ಡಿಕ್ಕಿಯಾಗಿದೆ. ಪರಿಣಾಮ ಆಟೋದಲ್ಲಿದ್ದವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆಟೋ ಚಾಲಕ ರಾಘವೇಂದ್ರ ಹಾಗೂ ಮಾಲತಿ ಎಂಬವರು ಘಟನೆಯಲ್ಲಿ ಜೀವ ಕಳೆದುಕೊಂಡಿದ್ದಾರೆ.
ಇನ್ನೂ ಕೃತಿಕಾ , ಸಾನ್ವಿಕ ಹಾಗೂ ರಾಮಪ್ಪ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಆ ಬಳಿಕ ದೊಡ್ಡಾಸ್ಪತ್ರೆಗೆ ಅಡ್ಮಿಟ್ ಮಾಡಲಾಗಿದೆ. ಇವರೆಲ್ಲರು ಕಾರೆಹೊಂಡದವರು ಎನ್ನಲಾಗಿದೆ.
ದೀಪಾವಳಿ ಹಬ್ಬಕ್ಕೆ ಸಾಮಗ್ರಿಗಳನ್ನ ಖರೀದಿ ಮಾಡಿ ಕಾರೆಹೊಂಡದ ರಾಮಪ್ಪ ತಮ್ಮ ಕುಟುಂಬದೊಂದಿಗೆ ನೆರೆಯ ಊರಿನವರಾದ ದೊಡ್ಡಬೈಲು ರಾಘವೇಂದ್ರರವರ ಆಟೋ ಹಿಡಿದು ಊರಿಗೆ ವಾಪಸ್ ಆಗುತ್ತಿದ್ದರು. ಆಗ ಬೊಮ್ಮತ್ತಿ ಕಡೆಯಿಂದ ಬರುತ್ತಿದ್ದ ಕಾರು ಆಟೋಗೆ ಡಿಕ್ಕಿಯಾಗಿದೆ. ಪರಸ್ಪರ ಮುಖಾಮುಖಿ ಡಿಕ್ಕಿ ಸಂಭವಿಸಿದ ಹಿನ್ನೆಲೆಯಲ್ಲಿ ಆಟೋ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
SUMMARY | Shimoga: Two persons were killed in a road accident near Thyagarathi in Sagar taluk of Shivamogga district yesterday.
KEYWORDS | Shimoga, Two persons were killed in a road accident ,Thyagarathi Sagar taluk of Shivamogga district