ಸಾಗರ ತಾಲ್ಲೂಕು ಆನಂದಪುರದಲ್ಲಿ ಭೀಕರ ಅಪಘಾತ |ಬಸ್‌ & ಕಾರು ಡಿಕ್ಕಿ | ಇಬ್ಬರ ಸಾವು

Two people died in a collision, car and  bus collision , Anandpur , Sagar taluk

ಸಾಗರ ತಾಲ್ಲೂಕು ಆನಂದಪುರದಲ್ಲಿ ಭೀಕರ ಅಪಘಾತ |ಬಸ್‌ & ಕಾರು ಡಿಕ್ಕಿ |  ಇಬ್ಬರ ಸಾವು
Two people died in a collision, car and  bus collision , Anandpur , Sagar taluk

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 29, 2024 ‌‌ 

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಆನಂದಪುರ ಸಮೀಪದ ಇವತ್ತು ಬೆಳ್ಳಂ ಬೆಳಗ್ಗೆ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಖಾಸಗಿ ಬಸ್‌ ಹಾಗೂ ಕಾರು ನಡುವಿನ ಡಿಕ್ಕಿಯಲ್ಲಿ ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿದ್ದಾರೆ. ಮೃತರನ್ನ ದೊಡ್ಡಬಳ್ಳಾಪುರದ ಮೂಲದವರು ಎನ್ನಲಾಗಿದ್ದು, ಅಕ್ಷಯ್‌ ಹಾಗೂ ಶರಣ್‌ ಎಂದು ಗುರುತಿಸಲಾಗಿದೆ. ಇವರು ಶಿವಮೊಗ್ಗಕ್ಕೆ ಪ್ರವಾಸಕ್ಕೆಂದು ಬಂದಿದ್ದರು.

ಇಲ್ಲಿನ ಮುರುಗಾಮಠದ ಸಮೀಪ ಇವತ್ತು ಬೆಳಗ್ಗೆ ಈ ಅಪಘಾತ ಸಂಭವಿಸಿದೆ. ಎರಟಿಗಾ ಕಾರು ಧರ್ಮಸ್ಥಳಕ್ಕೆ ಹೋಗುವ ಖಾಸಗಿ ಬಸ್‌ಗೆ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಕಾರಿನ ಮುಂಭಾಗ ಪೂರ್ತಿ ಪುಡಿಪುಡಿಯಾಗಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಇಬ್ಬರು ಸಾವನ್ನಪ್ಪಿದ್ದಾರೆ. ಘಟನೆ ಬೆನ್ನಲ್ಲೆ ಸ್ಥಳಕ್ಕೆ ಆನಂದಪುರ ಪೊಲೀಸ್‌ ಠಾಣೆ ಪೊಲೀಸರು ದೌಡಾಯಿಸಿದ್ದು ಪರಿಶೀಲನೆ ನಡೆಸ್ತಿದ್ದಾರೆ.

SUMMARY | Two people died in a collision between a car and a bus near Anandpur in Sagar taluk

KEY WORDS | Two people died in a collision, car and  bus collision , Anandpur , Sagar taluk