ನಿದಿಗೆ ಬಳಿ ಭೀಕರ ಘಟನೆ | ಲಾರಿಗೆ ಡಿಕ್ಕಿ ಹೊಡೆದ ಬೈಕ್ ನುಚ್ಚು ನೂರು | ವಿದ್ಯಾನಗರದ ಇಬ್ಬರು ಸಾವು, ಇನ್ನೊಬ್ಬ ಗಂಭೀರ
Shimoga: Two killed as bike collides with lorry near Nidige in Shivamogga
SHIVAMOGGA | MALENADUTODAY NEWS | ಮಲೆನಾಡು ಟುಡೆ Oct 24, 2024
ಶಿವಮೊಗ್ಗ | ನಗರದ ನಿದಿಗೆ ಬಳಿ ನಿನ್ನೆ ರಾತ್ರಿ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಯುವಕರು ಸಾವನ್ನಪ್ಪಿದ್ದು, ಇನ್ನೊಬ್ಬನ ಸ್ಥಿತಿ ಚಿಂತಾಜನಕವಾಗಿದೆ.
ಏನಿದು ಘಟನೆ
ನಿನ್ನೆ ತಡರಾತ್ರಿ ಭದ್ರಾವತಿ ಕಡೆಗೆ ತೆರಳುತ್ತಿದ್ದ ಲಾರಿಗೆ ರಾಂಗ್ ಸೈಡ್‌ನಲ್ಲಿ ಎದುರಿನಿಂದ ಬಂದ ಬೈಕ್ ಡಿಕ್ಕಿಯಾಗಿದೆ. ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿದ್ದಾರೆ. ಇನ್ನೊಬ್ಬನ ಸ್ಥಿತಿ ಗಂಭೀರವಾಗಿದ್ದು ಆತನನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಗೂ ಮೊದಲು ಬೈಕ್‌ನಲ್ಲಿ ತ್ರಿಬ್ಬಲ್ ರೈಡ್ ಬಂದ ಬೈಕ್ ಸವಾರರು ಅತಿವೇಗದಿಂದ ಬಂದು ಮೊದಲು ಬೈಕ್ ಹಾಗೂ ಆನಂತರ ಲಾರಿಗೆ ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಇನ್ನಷ್ಟು ಸ್ಪಷ್ಟತೆ ಸಿಗಬೇಕಾಗಿದೆ.
ಸದ್ಯ ಮೃತರ ಗುರುತು ಪತ್ತೆಯಾಗಿದ್ದು ಬೈಕ್‌ನಲ್ಲಿದ್ದ ಮೂವರು ವಿದ್ಯಾನಗರ ನಿವಾಸಿಗಳಾಗಿದ್ದು ಮೂವರ ಪೈಕಿ ಓರ್ವ ಅಪ್ರಾಪ್ತ. ನಿನ್ನೆ ತಡರಾತ್ರಿ ಒಂದೇ ಬೈಕ್‌ನಲ್ಲಿ ಬರುತ್ತಿದ್ದಾಗ ಘಟನೆ ಸಂಭವಿಸಿದೆ. ಇನ್ನೂ ಘಟನೆ ಭೀಕರತೆ ಎಷ್ಟಿತ್ತು ಎಂದರೆ, ಅಪಘಾತದಲ್ಲಿ ಬೈಕ್ ಪುಡಿಪುಡಿಯಾಗಿದೆ.
ವಿಷಯ ತಿಳಿದು ಸ್ಥಳಕ್ಕೆ ಭೇಟಿಕೊಟ್ಟ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ವಿಚಾರಣೆ ನಡೆಸ್ತಿದ್ದಾರೆ.
SUMMARY |Shimoga: Two killed as bike collides with lorry near Nidige in Shivamogga
KEYWORDS | Shimoga, Two killed as bike collides with lorry ,Nidige in Shivamogga