ಕಾಡಿನಲ್ಲಿ ಗಂಧ ಕಡಿಯಲು ಹೋದವರಿಗೆ ಶಾಕ್‌ | ಮಾಲು , ಮುಚ್ಚು , ಬೈಕ್‌ ಸಮೇತ ಇಬ್ಬರು ಅರೆಸ್ಟ್‌ !

Two accused arrested for cutting down sandalwood trees in Hosanagar

ಕಾಡಿನಲ್ಲಿ ಗಂಧ ಕಡಿಯಲು ಹೋದವರಿಗೆ ಶಾಕ್‌ | ಮಾಲು , ಮುಚ್ಚು , ಬೈಕ್‌ ಸಮೇತ ಇಬ್ಬರು ಅರೆಸ್ಟ್‌ !
Two accused arrested, sandalwood trees ,Hosanagar

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 17, 2025 ‌‌ 

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಅರಣ್ಯಾಧಿಕಾರಿಗಳು ಶ್ರೀಗಂಧದ ಮರ ಕಡಿದವರನ್ನು ಮಾಲು ಸಮೇತ ಬಂಧಿಸಿದ್ದಾರೆ. ಈ ಬಗ್ಗೆ ವರದಿ ಇಲ್ಲಿದೆ 

ಕಳೆದ 15/02/2025 ರಂದು ಹೊಸನಗರ ಅರ‍ಣ್ಯ ವಲಯದ ಸಿಬ್ಬಂದಿಗೆ ಶ್ರೀಗಂಧ ಕಡಿಯುತ್ತಿರುವ ಬಗ್ಗೆ ವರ್ತಮಾನ ಬಂದಿದೆ. ಈ ಹಿನ್ನೆಲೆಯಲ್ಲಿ ಹೊಸನಗರ ತಾಲ್ಲೂರು ಕೆರೆಹಳ್ಳಿ ಹೋಬಳಿ, ಹೊಸಳ್ಳಿ ಗ್ರಾಮದ ಬಳಿ ಸಿಗುವ ಅರಣ್ಯದಲ್ಲಿ ರೇಡ್‌ ನಡೆಸಿದ್ದಾರೆ. ಈ ವೇಳೆ 31 ವರ್ಷದ ದಿನೇಶ್‌,  32 ವರ್ಷದ ರಾಘವೇಂದ್ರ ಎಂಬವರು ಮಾಲು ಸಮೇತ ಸಿಕ್ಕಿಬಿದ್ದಿದ್ದಾರೆ. ಇವರಿಂದ 18 ಕೆಜಿ ಶ್ರೀಗಂಧ ಹಾಗೂ 03 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ. 

ಈ ರೇಡ್‌ನಲ್ಲಿ ಅನಿಲ್ ಕುಮಾರ್ ಎಸ್. ವಲಯ ಅರಣ್ಯಾಧಿಕಾರಿಗಳು, ಹೊಸನಗರ ವಲಯ, ಹೊಸನಗರ, ಮಂಜುನಾಥ ಕೆ. ಎನ್. ಉಪ ವಲಯ ಅರಣ್ಯಾಧಿಕಾರಿ, ಹರತಾಳು ಶಾಖೆ, ಹೊಸನಗರ ವಲಯ. ಪುಟ್ಟಸ್ವಾಮಿ ಕೆ. ವಿ ಗಸ್ತು ಅರಣ್ಯ ಪಾಲಕ ಭರತ್ ಕುಮಾರ್ ಗಸ್ತು ಅರಣ್ಯ ಪಾಲಕ,  ಸುರೇಶ್ ಐ ಗಸ್ತು ಅರಣ್ಯ ಪಾಲಕ , ರಾಜು ಎನ್ ಗಸ್ತು ಅರಣ್ಯ ಪಾಲಕ, ಪ್ರಶಾಂತ ಹ ಗಸ್ತು. ಅರಣ್ಯ ಪಾಲಕ ಹಾಗೂ ಮಹೇಶ್ ವಾಹನ ಚಾಲಕರು ಇನ್ನಿತರರು ಪಾಲ್ಗೊಂಡಿದ್ದರು.

 

SUMMARY |  Two accused arrested for cutting down sandalwood trees in Hosanagar

KEY WORDS | Two accused arrested, sandalwood trees ,Hosanagar