ಹೇರ್‌ ಡ್ರೈಯರ್‌ ಬ್ಲಾಸ್ಟ್‌ ಕೇಸ್‌ನಲ್ಲಿ ಲವ್‌ & ಅಪೇರ್‌ ಟ್ವಿಸ್ಟ್‌ | ಪೊಲೀಸರಿಗೆ ಶಾಕ್

Twist, hair dryer blast case ,in Bagalkote Ilakkal 

ಹೇರ್‌ ಡ್ರೈಯರ್‌ ಬ್ಲಾಸ್ಟ್‌ ಕೇಸ್‌ನಲ್ಲಿ ಲವ್‌ & ಅಪೇರ್‌ ಟ್ವಿಸ್ಟ್‌ | ಪೊಲೀಸರಿಗೆ ಶಾಕ್
Twist, hair dryer blast case ,in Bagalkote Ilakkal 

SHIVAMOGGA | MALENADUTODAY NEWS | ಮಲೆನಾಡು ಟುಡೆ Nov 23, 2024 ‌ 

ಪಾರ್ಸಲ್‌ನಲ್ಲಿ  ಬಂದಿದ್ದ ಹೇರ್‌ ಡ್ರೈಯರ್‌ ಸ್ಫೋಟಗೊಂಡ ಪ್ರಕರಣ ಲವ್‌ & ಅಫೇರ್‌ ಆಗಿ ಟ್ವಿಸ್ಟ್‌ ಪಡೆದುಕೊಂಡು ತೀವ್ರ ಕತೂಹಲ ಮೂಡಿಸಿದೆ. ಬಾಗಲಕೋಟೆಯ ಇಳಕಲ್‌ ನಲ್ಲಿ ನಡೆದ ಘಟನೆ ಇದು. ಇಲ್ಲಿನ ನಿವಾಸಿಯೊಬ್ಬರ ಅಡ್ರೆಸ್‌ಗೆ ಹೇರ್‌ ಡ್ರೈಯರ್‌ ಕೊರಿಯರ್‌ ಬಂದಿತ್ತು. ಆದರೆ ವಿಳಾಸದಲ್ಲಿದ್ದ ಮಹಿಳೆ ಅದನ್ನು ರಿಸೀವ್‌ ಮಾಡಿಕೊಂಡಿರಲಿಲ್ಲ. ಬದಲಾಗಿ ನೆರೆಮನೆಯ ನಿವಾಸಿ ರಿಸೀವ್‌ ಮಾಡಿಕೊಂಡಿದ್ದರು. ಕುತೂಹಲಕ್ಕೆ ಅದನ್ನ ಓಪನ್‌ ಮಾಡಿ, ಕರೆಂಟ್‌ ಕನೆಕ್ಷನ್‌ ಕೊಟ್ಟು ಆನ್‌ ಮಾಡಿದಾಗ ಹೇರ್‌ ಡ್ರೈಯರ್‌ ಸ್ಫೋಟಗೊಂಡಿತ್ತು. ಪರಿಣಾಮ ಮಹಿಳೆಯೊಬ್ಬರ ಅಂಗೈ ಬಸ್ಟ್‌ ಆಗಿತ್ತು. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ ಹೇರ್‌ ಡ್ರೈಯರ್ ಸ್ಫೋಟ ಮಹಿಳೆಯ ಎರಡು ಕೈ ಬೆರಳುಗಳು ಛಿದ್ರ

ವಿಚಾರ ಅಂದರೆ ಹೇರ್‌ ಡ್ರೈಯರ್‌ ಸ್ಫೋಟ ಪ್ರಕರಣ ಇಲ್ಲಿನ ಪೊಲೀಸರಿಗೆ ಸಂಶಯ ಮೂಡಿಸಿದೆ. ಏನಿದು ಹೇಗಿದು? ಹಾಗೆ ಸ್ಫೋಟಗೊಳ್ಳಲು ಸಾದ್ಯವಿಲ್ಲವಲ್ಲ ಎಂದು ಪೊಲೀಸರು ತನಿಖೆಗೆ ಇಳಿದಾಗ. ಇಡೀ ಪ್ರಕರಣ ಬೇರೆಯದ್ದೇ ಸ್ಟ್ಯಾಂಡ್‌ ತೆಗೆದುಕೊಂಡಿದೆ. ವಿಳಾಸಕ್ಕೆ ಬಂದಿದ್ದ ಪಾರ್ಸಲ್‌ನ ಮೂಲವನ್ನು ಹುಡುಕಿಹೊರಟ ಪೊಲೀಸರಿಗೆ ದ್ವೇಷದ ಸಂಚು ಕಾಣಿಸಿದೆ. ಮೊದಲು ಪಾರ್ಸಲ್‌ ಕಳುಹಿಸಿದ ವ್ಯಕ್ತಿಯನ್ನ ಹುಡುಕಿದ ಪೊಲೀಸರು ಆತನನ್ನ ಕರೆತಂದು ಸ್ಟೇಷನ್‌ನಲ್ಲಿ ವಿಚಾರಿಸಿದ್ದಾರೆ. ಈ ವೇಳೆ ಆತ ನಡೆದಿದ್ದನ್ನ ಬಾಯ್ಬಿಟ್ಟಿದ್ದಾನೆ. 

ಅಂದಹಾಗೆ ಪಾರ್ಸಲ್‌ ಕಳುಹಿಸಿದವನು ಸಿದ್ದಪ್ಪ ಎಂಬಾತ. ಈತನಿಗೆ ಬಸಮ್ಮ ಎಂಬಾಕೆ ಜೊತೆ ಪ್ರೀತಿ ಹುಟ್ಟಿತ್ತು. ಆಕೆ ಮೃತ ಯೋಧರೊಬ್ಬರ ಪತ್ನಿಯಾಗಿದ್ದರು. ಇವರಿಬ್ಬರ ಪ್ರೀತಿ ಪಕ್ಕದ ಮನೆ ಶಶಿಕಲಾರಿಗೆ ಸರಿ ಕಂಡಿರಲಿಲ್ಲ. ಆಕೆ ಬಸಮ್ಮಗೆ ಬುದ್ದಿ ಮಾತು ಹೇಳಿದ್ದರು. ಆನಂತರ ಬಸಮ್ಮ ಸಿದ್ದಪ್ಪನ ಸಹವಾಸ ಬಿಟ್ಟಿದ್ದಳಂತೆ. ಇದರಿಂದ ಸಿಟ್ಟಾದದ ಸಿದ್ದಪ್ಪ  ತನ್ನ ಪ್ರೀತಿಗೆ ಶಶಿಕಲಾನೇ ಅಡ್ಡಿ ಎಂದು ನಿರ್ಣಯಿಸಿ ಆಕೆಯನ್ನ ಮುಗಿಸುವ ಸ್ಕೆಚ್‌ ಹಾಕಿದ್ದ

ಗ್ರಾನೈಟ್‌ ಕೆಲಸ ಮಾಡುತ್ತಿದ್ದ ಸಿದ್ದಪ್ಪ, ಗ್ರಾನೈಟ್‌ ಸ್ಫೋಟಿಸುವ ಡಿಟೋನೇಟರ್‌ವೊಂದನ್ನ ಸಂಗ್ರಹಿಸಿ ಹೇರ್‌ ಡ್ರೈಯರ್‌ನಲ್ಲಿ ಅದನ್ನ ಫಿಕ್ಸ್‌ ಮಾಡಿ ಶಶಿಕಲಾರ ಹೆಸರಿಗೆ ಕೊರಿಯರ್‌ ಪಾರ್ಸಲ್‌ ಮಾಡಿದ್ದ. ಆದ. ಆದರೆ ಶಶಿಕಲಾ ತಾನು ಊರಲ್ಲಿಲ್ಲ. ಹೋಗಿ ಕೊರಿಯರ್‌ ಕಲೆಕ್ಟ್‌ ಮಾಡ್ಕೊ ಎಂದು ಬಸಮ್ಮರಿಗೆ ತಿಳಿಸಿದ್ದಳು. ಅದರಂತೆ ಕೊರಿಯರ್‌ ಪಡೆದುಕೊಂಡು ಬಸಮ್ಮ ಅದನ್ನ ಟೆಸ್ಟ್‌ ಮಾಡಲು ಹೋದಾಗ ಅದು ಸ್ಫೋಟಗೊಂಡಿದೆ. ಇದಿಷ್ಟು ನಡೆದ ಘಟನೆ ಎಂದು ಎಸ್‌ಪಿ ಅಮರನಾಥ ರೆಡ್ಡಿ ತಿಳಿಸಿದ್ದಾರೆ. ತಾನು ಮಾಡಿದ್ದು ತನಗೇ ಗೋವಿಂದ ಎಂಬ ಆಡುಮಾತಿನ ಗಾದೆ ಇದೆ. ಈ ಘಟನೆಯು ಹೆಚ್ಚುಕಮ್ಮಿ ಹೀಗೆ ಆಗಿದೆ. ಮಾಡ್ಬಾರದ್ದನ್ನ ಮಾಡಲು ಹೋದವನಿಗೆ ಆಗಬಾರದ್ದು ಆಗಿದೆ. 

SUMMARY|  Twist in hair dryer blast case in Bagalkot's Ilakkal 



KEY WORDS |  Twist, hair dryer blast case ,in Bagalkote Ilakkal