ತುಂಗಾ ಡ್ಯಾಂನಿಂದ 60 ಸಾವಿರಕ್ಕೂ ಅಧಿಕ ಕ್ಯೂಸೆಕ್ಸ್ ನೀರು ಬಿಡುಗಡೆ | ತುಂಗಾ ನದಿಯಲ್ಲಿ ಪ್ರವಾಹದ ಮುನ್ಸೂಚನೆ
Tunga River is experiencing flooding

SHIVAMOGGA | MALENADUTODAY NEWS | Jul 16, 2024 ಮಲೆನಾಡು ಟುಡೆ
ಶಿವಮೊಗ್ಗದಲ್ಲಿ ಅಬ್ಬರದ ಮಳೆಯಾಗುತ್ತಿದ್ದು ಅಂಗನವಾಡಿ ಶಾಲೆ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಎಲ್ಲದಕ್ಕಿಂತಲೂ ಹೆಚ್ಚಾಗಿ ತುಂಗೆಯಲ್ಲಿ ಪ್ರವಾಹದ ಸನ್ನಿವೇಶ ನಿರ್ಮಾಣವಾಗಿದೆ. ಏಕೆಂದರೆ ಗಾಜನೂರು ಜಲಾಶಯ ಈಗಾಗಲೇ ಭರ್ತಿಯಾಗಿದ್ದು ನದಿಗೆ ಭರಪೂರ ನೀರು ಹರಿದು ಬರುತ್ತಿದೆ.
ಇದೀಗ ನಿನ್ನೆಯ ಮಳೆಯಿಂದಾಗಿ ಜಲಾಶಯದ ಒಳಹರಿವು ದೊಡ್ಡಮಟ್ಟದಲ್ಲಿ ಹೆಚ್ಚಾಗಿದೆ. ಪರಿಣಾಮವಾಗಿ ಅಷ್ಟೆ ಪ್ರಮಾಣದ ನೀರನ್ನ ನದಿಗೆ ಬೀಡಲಾಗುತ್ತಿದೆ.
ಇವತ್ತು ಬೆಳಗ್ಗೆಯ ಮಾಹಿತಿ ಪ್ರಕಾರ ನದಿಗೆ 61757 ಕ್ಯೂಸೆಕ್ ನೀರು ನಿರಂತರವಾಗಿ ಹರಿದ ಬರುತ್ತಿದೆ. ಇದರಿಂದಾಗಿ ಗಾಜನೂರಿನಿಂದ ಈಚೆಗೆ ಪ್ರವಾಹ ಸನ್ನಿವೇಶ ಎದುರಾಗಿದೆ.
ಅದರಲ್ಲಿಯು ಶಿವಮೊಗ್ಗದ ಸಿಟಿ ಭಾಗದಲ್ಲಿ ಇವತ್ತು ತುಂಗಾನದಿ ಉಗ್ರ ಸ್ವರೂಪಿಯಾಗಿ ಹರಿಯುತ್ತಿದೆ. ಜಲರಾಶಿಯ ಜನ ಸಮೂಹದ ನಡುವೆ ಗಂಭೀರವಾಗಿ ಹರಿಯುತ್ತಿದೆ. ಇದನ್ನ ನೋಡಲು ನದಿ ದಂಡೆಗಳಲ್ಲಿ ಜನ ಜಮಾಯಿಸುತ್ತಿದ್ದಾರೆ.
ಶಿವಮೊಗ್ಗ : ತುಂಗಾ ಜಲಾಶಯ
ಒಳ ಹರಿವು : 61757 ಕ್ಯೂಸೆಕ್
ಹೊರ ಹರಿವು : 61757 ಕ್ಯೂಸೆಕ್
ಗರಿಷ್ಟ ಮಟ್ಟ : 588.24 ಮೀ
ಇಂದಿನ ಮಟ್ಟ 588.24 ಮೀ
ಒಟ್ಟು : 3.24 tmc
ಇಂದು : 3.24 TMC
Heavy rainfall in Shivamogga has led to the closure of schools and colleges. The Tunga River is experiencing flooding due to the Gajanooru reservoir reaching full capacity.