ಎಲ್ಲಾ ಬಿಟ್ಟು ಮನೆ ಮುಂದಿದ್ದ ತುಳಸಿ ಕಟ್ಟೆ ಕದ್ದ ಕಳ್ಳ | ಏನಿದು ಬೆಂಗಳೂರು ಕೇಸ್
Tulsi plant theft case
SHIVAMOGGA | MALENADUTODAY NEWS | ಮಲೆನಾಡು ಟುಡೆ Dec 10, 2024
ಮನೆಯಲ್ಲಿನ ಚಿನ್ನ ಹಣ ಇತ್ಯಾದಿ ಬೆಲೆಬಾಳುವ ಸಾಮಗ್ರಿಗಳನ್ನ ಕಳುವು ಮಾಡುವುದು ಎಲ್ಲೆಡೆ ನೋಡುವ ಕೇಳುವ ಸಂಗತಿ. ಆದರೆ ಬೆಂಗಳೂರಿನ ರಾಜಾಜಿನಗರದಲ್ಲಿನ ಮನೆಯೊಂದರ ತುಳಸಿ ಕಟ್ಟೆಯನ್ನು ಕದಿಯಲಾಗಿದೆ. ಅಲ್ಲದೆ ಈ ದೃಶ್ಯ ಸಿಸಿ ಕ್ಯಾಮರಾದಲ್ಲಿಯು ಸೆರೆಯಾಗಿದ್ದು, ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಇಲ್ಲಿನ ರವಿರಾಜ್ ಕೋಟೆಶ್ವರ್ ಎಂಬವರ ಮನೆಯ ಕಾಂಪೌಂಡ್‌ನಲ್ಲಿದ್ದ ತುಳಸಿಕಟ್ಟೆಯನ್ನು ನಿನ್ನೆ ದಿನ ಬೆಳಗಿನ ಜಾವ ವ್ಯಕ್ತಿಯೊಬ್ಬ ಕದ್ದೊಯ್ದಿದ್ದಾನೆ. ಆತ ಕದ್ದೊಯ್ಯುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆತ ಅದನ್ನ ಯಾಕಾಗಿ ಕಳವು ಮಾಡಿದ್ದಾನೆ ಎಂಬುದು ಸ್ಪಷ್ಟವಾಗಿಲ್ಲ. ಆದರೇ ವಿಷಯ ಚರ್ಚೆಗಂತೂ ಗ್ರಾಸವಾಗಿದೆ. ಈ ಸಂಬಂಧ ಮಾಗಡಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.
SUMMARY | Tulsi plant theft case
KEY WORDS | Tulsi plant theft case