ಕರುಣೆ ತೋರದ ಟ್ರಾಫಿಕ್ ಫೈನ್ | ಹಬ್ಬದ ಕಾಸನ್ನಾದರೂ ಕಿತ್ತುಕೊಳ್ಳದಿರಲಿ | ಶಾಸಕರೇ ಕೇಳಬೇಕು PUBLIC ದೂರು
Traffic Fine Problem In Shivamogga City, Public Complaint
SHIVAMOGGA | MALENADUTODAY NEWS | ಮಲೆನಾಡು ಟುಡೆ Oct 30, 2024
ಶಿವಮೊಗ್ಗದಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಈ ನಡುವೆ ಜನರು ಹಬ್ಬಕ್ಕಾಗಿ ಗಾಂಧಿ ಬಜಾರ್, ನೆಹರೂ ರೋಡ್, ಬಿಹೆಚ್ ರೋಡ್ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಹಬ್ಬದ ಖರೀದಿ ಮಾಡುತ್ತಿದ್ದಾರೆ. ಆದರೆ ನಾಗರಿಕರ ಹಬ್ಬದ ಓಡಾಟದ ಖುಷಿಯನ್ನು ಶಿವಮೊಗ್ಗ ಟ್ರಾಫಿಕ್ ಪೊಲೀಸರು ಕಿತ್ತುಕೊಳ್ಳುತ್ತಿದ್ದಾರೆಯೇ?
ಹೀಗೊಂದು ಆರೋಪ ಸಾರ್ವಜನಿಕರಿಂದ ವ್ಯಕ್ತವಾಗುತ್ತಿದೆ. ಹಬ್ಬದ ಖರ್ಚಿಗೆ ದುಡ್ಡು ಒಟ್ಟು ಮಾಡಿಕೊಂಡಿರುವ ನಾಗರಿಕರು ಟ್ರಾಫಿಕ್ ಪೊಲೀಸರ ಕೈಗೆ ಸಿಕ್ಕು ನಿಯಮ ಉಲ್ಲಂಘನೆಗಾಗಿ ದುಬಾರಿ ದಂಡ ಕಟ್ಟುತ್ತಿದ್ದಾರೆ. ಅತ್ತ ಗಾಂಧಿ ಬಜಾರ್ ಬರುವಾಗ ಅಮೀರ್ ಅಹಮದ್ ಸರ್ಕಲ್ ಬಳಿಯೇ ಹಿಡಿಯುತ್ತಾರೆ. ಚೂರು ಮುಂದೆ ಬಂದರೆ ಶಿವಪ್ಪನಾಯಕ ವೃತ್ತದ ಬಳಿ ಹಿಡಿಯುತ್ತಾರೆ, ನೆಹರು ರೋಡ್‌ಗೆ ಹೋದರೆ ಮಾಲ್ ಬಳಿಯೇ ಅಡ್ಡ ಹಾಕುತ್ತಾರೆ. ಸಾರ್, ಹಬ್ಬದ ಖರೀದಿಗೆ ಓಡಾಡ್ತಿದ್ದಾರೆ, ಪೊಲೀಸರು ಸಾವಿರ ರೂಪಾಯಿ ಫೈನ್ ಹಾಕಿದ್ರು. ಈಗ ಹಬ್ಬ ಹೇಗೆ ಮಾಡುವುದು ಎಂದು ನಿನ್ನೆದಿನ ಸಂಚಾರಿ ಪೊಲೀಸರಿಂದ ದಂಡ ವಿಧಿಸಿಕೊಂಡ ವಾಹನ ಸವಾರರು ಹೇಳಿದ್ದಾರೆ.
ಸಂಚಾರಿ ನಿಯಮ ಪಾಲಿಸಬೇಕು ನಿಜವೆ. ಹಾಗಂತ ಕಾನೂನಿನ ಅಸ್ತ್ರವನ್ನು ಬಲವಂತವಾಗಿ ಪ್ರಯೋಗಿಸುವದು ಜನಸಾಮಾನ್ಯರ ದಿನನಿತ್ಯದ ಬದುಕಿಗೆ ಸಂಚಕಾರ ತರುವುದಿಲ್ಲವೆ. ಕನಿಷ್ಟ ಸಾವಿರ ರೂಪಾಯಿ ಉಳಿಸಿಕೊಂಡು ಹಬ್ಬಕ್ಕೆ ಹೂವು ಹಣ್ಣ ತರಲು ಹೊರಟ ಬಡಮಧ್ಯಮ ವರ್ಗದ ವ್ಯಕ್ತಿಯ ದುಡ್ಡನ್ನು ದಂಡದ ಹೆಸರಲ್ಲಿ ಪಡೆದು ರಸೀದಿ ನೀಡಿದರೆ, ಆತ ದೀಪಾವಳಿ ಆಚರಿಸಲು ಸಾಧ್ಯವಾದೀತೆ ಎಂಬುದು ಪ್ರಶ್ನೆ.
ಅನಾವಶ್ಯಕ ಫೈನ್
ವಿಜಿಬಲ್ ಅಫೆನ್ಸ್ ಇದ್ದಲ್ಲಿ ವಾಹನ ತಡೆದು ಅವುಗಳನ್ನ ತಪಾಸಣೆ ನಡೆಸಬೇಕು ಎಂದು ಪೊಲೀಸ್ ಇಲಾಖೆಯ ಹೆಡ್ ಆಫೀಸ್‌ನಿಂದಲೇ ಈ ಹಿಂದೆ ಆದೇಶ ಬಂದಿತ್ತು. ಆದರೆ ಶಿವಮೊಗ್ಗದಲ್ಲಿ ಇದೆಲ್ಲವೂ ಮೀರಿ ದಂಡ ವಿಧಿಸಲಾಗುತ್ತಿದೆ. ಸೈಡ್ ಮಿರರ್ , ಎಮಿಷನ್ ಟೆಸ್ಟ್‌ಗೂ ಫೈನ್ ಹಾಕಲಾಗುತ್ತಿದೆ. ಒಟ್ಟಾರೆ ಕೈ ಅಡ್ಡಹಾಕಿದ ವಾಹನ ಸವಾರರ ದಂಡ ಕಟ್ಟಲೇ ಬೇಕು ಎಂದು ಸಂಚಾರಿ ಪೊಲೀಸರು ನಿರ್ಧರಿಸಿದಂತಿದೆ. ಅಲ್ಲದೆ ದಿನವಿಡಿ ನಿಂತು ಸಿಕ್ಕಸಿಕ್ಕಲಿ ವಾಹನಗಳನ್ನ ಅಡ್ಡಗಟ್ಟಿ ದಂಡ ವಿಧಿಸುತ್ತಿರುವುದು ಜನರಿಗೆ ಕಿರಿಕಿರಿ ಅಷ್ಟೆ ಅಲ್ಲದೆ ವಾಹನ ಸವಾರರಲ್ಲಿ ಭಯ ಹುಟ್ಟಿಸುತ್ತಿದೆ.
ಶಾಸಕರಿಗೆ ದೂರು
ಎಲ್ಲೂ ಇಲ್ಲದಂತಹ ಸಂಚಾರಿ ನಿಯಮಗಳ ಬಲವಂತಹ ಹೇರಿಕೆ ವಿರುದ್ಧ ಸಂಘಟನೆಗಳು ಈಗಾಗಲೇ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದೆ. ಆದರೆ ಪ್ರಯೋಜನವಾಗಿಲ್ಲ. ಹೀಗಾಗಿ ಈ ವಿಷಯದಲ್ಲಿ ಕನಿಷ್ಟ ಶಾಸಕರ ಎಸ್‌ಎನ್ ಚನ್ನಬಸಪ್ಪರವರು ಮದ್ಯಪ್ರವೇಶ ಮಾಡಬೇಕು ಎಂದು ಒತ್ತಾಯಿಸುತ್ತಿವೆ. ಅಲ್ಲದೆ ಕನಿಷ್ಟ ಪಕ್ಷದ ಹಬ್ಬದ ಸಂದರ್ಭದಲ್ಲಾದರೂ ಹಬ್ಬದ ಕಾಸನ್ನ ಟ್ರಾಫಿಕ್ ನಿಯಮ ಉಲ್ಲಂಘನೆಯ ಕಾರಣಕ್ಕೆ ಕಸಿದುಕೊಳ್ಳದಂತೆ ಪೊಲೀಸ್ ಇಲಾಖೆಗೆ ಸೂಚಿಸಬೇಕು ಎಂದು ಮನವಿ ಮಾಡಲು ಸಂಘಟನೆಗಳು ಮುಂದಾಗಿವೆ. ಈ ನಿಟ್ಟಿನಲ್ಲಿ ಶಾಸಕರು ಗಮನ ಹರಿಸುತ್ತಾರಾ ನೋಡಬೇಕಿದೆ.
SUMMARY | Traffic Fine Problem In Shivamogga City, Public Complaint
KEYWORDS | Traffic Fine Problem In Shivamogga City, Public Complaint