ಅಕ್ರಮ ಲೇವಾದೇವಿ ಚಟುವಟಿಕೆ ಮನೆ ಮೇಲೆ ದಾಳಿ ಸೇರಿದಂತೆ ಟಾಪ್‌ 5 ಚಟ್‌ ಪಟ್‌ ಸುದ್ದಿ

The police conducted raids within the limits of all police stations in the city. A huge amount of property was seized during the raid.

ಅಕ್ರಮ ಲೇವಾದೇವಿ ಚಟುವಟಿಕೆ ಮನೆ ಮೇಲೆ ದಾಳಿ ಸೇರಿದಂತೆ ಟಾಪ್‌ 5 ಚಟ್‌ ಪಟ್‌ ಸುದ್ದಿ
Top 5 Chutpat News Including Illegal Money Laundering Activities House Raid

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Feb 13, 2025

ಹೆಚ್ಚಿನ ಬಡ್ಡಿ ದರ, ಮೀಟರ್ ಬಡ್ಡಿ ವಿಧಿಸುವುದು, ದುಬಾರಿ ಕಾರುಗಳು ಮತ್ತು ಬೈಕ್ ಗಳನ್ನು ಅಡಮಾನವಾಗಿಟ್ಟುಕೊಂಡು ಅಕ್ರಮ ಲೇವಾದೇವಿ ಚಟುವಟಿಕೆಗಳಲ್ಲಿ ತೊಡಗಿರುವ ವ್ಯಕ್ತಿಗಳ ಮನೆ ಮೇಲೆ ಶಿವಮೊಗ್ಗ ನಗರದ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಅಪಾರ ಪ್ರಮಾಣದ ಆಸ್ತಿಯನ್ನು ವಶಪಡಿಸಿಕೊಂಡಿದ್ದಾರೆ. 

ದಾಳಿ ವೇಳೆ ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಲು ವಿಫಲವಾದ ಸಾಲಗಾರರಿಗೆ   ಲೇವಾದೇವಿದಾರರು ಕಿರುಕುಳ ನೀಡುತ್ತಿರುವುದು ಕಂಡುಬಂದಿದೆ. ಈ ಹಿನ್ನಲೆ ಮಂಗಳವಾರ ಎಸ್ಪಿ ಮಿಥುನ್ ಕುಮಾರ್ ಅವರ ಆದೇಶದ ಮೇರೆಗೆ ದಾಳಿ ನಡೆಸಲಾಯಿತು. ಆ ಸಂದರ್ಭದಲ್ಲಿ ಮಹತ್ವದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ.

ಎಎಸ್ಪಿ ಗೆ ಮನವಿ ಸಲ್ಲಿಸಿದ ಪ್ರಣವಾನಂದ ಸ್ವಾಮೀಜಿ

ಮರುಳು ಅಕ್ರಮ ಗಣಿಗಾರಿಕೆ ವೇಳೆ ಗಣಿ ಅಧಿಕಾರಿಗೆ  ಅವಾಚ್ಯ ಶಬ್ದದಿಂದ ನಿಂಧಿಸಿದ ಹಿನ್ನಲೆ ಮಹಿಳಾ ಅಧಿಕಾರಿಗೆ ರಕ್ಷಣೆ ನೀಡಿ ಆರೋಪಿಗಳನ್ನ ಬಂಧಿಸಿ ಸೂಕ್ತ ತನಿಖೆ ನಡೆಸಬೇಕೆಂದು ಆಗ್ರಹಿಸಿ ಈಡಿಗ ಮಠದ ಸ್ವಾಮೀಜಿ ಪ್ರಣವಾನಂದ ಸ್ವಾಮೀಜಿ ಎಎಎಸ್ಪಿ ಅನಿಲ್ ಕುಮಾರ್ ಭೂಮರಡ್ಡಿಗೆ ಮನವಿ ಸಲ್ಲಿಸಿದರು‌. 

ಬೇಕರಿ ಉತ್ಪನ್ನಗಳ ಕುರಿತು ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಾಗಾರ

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವು ಶಿವಮೊಗ್ಗ ಕೃಷಿ ಮಹಾವಿದ್ಯಾಲಯ ಆವರಣದ ಬೇಕರಿ ಘಟಕದಲ್ಲಿ ಫೆ 20 ರಿಂದ ಮಾರ್ಚ್‌ 21 ರವರೆಗೆ  ವಿವಿಧ ಬೇಕರಿ ಉತ್ಪನ್ನಗಳ ತಯಾರಿಕೆ ಕುರಿತು ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಾಗಾರವನ್ನು ಆಯೋಜಿಸಿದೆ.

ತರಬೇತಿಯಲ್ಲಿ ಬೇಕರಿ ಉತ್ಪನ್ನಗಳಾದ ಬೆಣ್ಣೆ ಬಿಸ್ಕತ್, ಕೋಕೋನಟ್ ಕುಕಿಸ್, ಕೋಕೋನಟ್ ಬಿಸ್ಕತ್, ಮಸಾಲ ಬಿಸ್ಕತ್, ಮೆಲ್ಟಿಂಗ್ ಮೊಮೆಂಟ್ ಬಿಸ್ಕತ್, ಪೀನಟ್ ಕುಕಿಸ್, ವೆನಿಲಾ ಬಟನ್, ಬನಾನಾ ಕೇಕ್, ಕೋಕೊನಟ್ ಕ್ಯಾಸಲ್ಸ, ಫ್ರೂಟ್ ಕೇಕ್, ಸ್ಪಾಂಜ್ ಕೇಕ್, ಆರೆಂಜ್ ಕೇಕ್, ಬ್ಲಾಕ್ ಫಾರೆಸ್ಟ್ ಕೇಕ್, ಸ್ವಿಸ್ ರೋಲ್, ಜೆಲ್ ಕೇಕ್, ಬಟರ್ ಐಸಿಂಗ್, ಮಸಾಲಾ ಡೋನಟ್, ಮಿಲ್ಕ್ ಬ್ರೆಡ್, ಬ್ರೌನಬ್ರೆಡ್, ಫಿಜ್ಜಾ, ಪಪ್ ಪೇಸ್ಟ್ರೀ, ಡ್ಯಾನಿಷ್ ಪೇಸ್ಟ್ರೀ, ದಿಲ್ ಪಸಂದ್, ಬಾಂಬೆ ಕಾರ ಹಾಗೂ ಇತರೆ ಉತ್ಪನ್ನಗಳ ತಯಾರಿಕೆಯ ಬಗ್ಗೆ ತರಬೇತಿ ನೀಡಲಾಗುವುದು.

ಈ ತರಬೇತಿಯಲ್ಲಿ ಭಾಗವಹಿಸಲು ಇಚ್ಚಿಸುವವರು ದಿ:19/02/2025 ರೊಳಗಾಗಿ ಡಾ. ಜಯಶ್ರೀ ಎಸ್.-9449187763, ಜಯಶಂಕರ-9686555897 ಇವರುಗಳನ್ನು ದೂರವಾಣಿ ಮೂಲಕ ಅಥವಾ ಖುದ್ದಾಗಿ ಸಂಪರ್ಕಿಸಿ ಹೆಸರನ್ನು ನೊಂದಾಯಿಸಿಕೊಳ್ಳುವುದು. ತರಬೇತಿ ಶುಲ್ಕ ರೂ. 4500/- ಆಗಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ದೇವಿಯ ಮಾಂಗಲ್ಯ ಸರ ಕದ್ದು ಸಿಕ್ಕಿಬಿದ್ದ

ಸಾಗರ ಟೌನ್ ನ ನಗರೇಶ್ವರ  ದೇವಸ್ಥಾನದ ದೇವಿಯ ಕೊರಳಲ್ಲಿದ್ದ ಅಂದಾಜು 30 ಗ್ರಾಂ ತೂಕದ ಮಾಂಗಲ್ಯ ಸರವನ್ನು ಕಳ್ಳತನ ಮಾಡಿಕೊಂಡು  ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಾಗರ ಸಮೀಪದ ಸಿರಿವಂತೆಯ ಶಿವಕುಮಾರ್ (39) ಎನ್ನುವವನನ್ನು ಬಂಧಿಸಿ ಮಾಲನ್ನು ವಪಡಿಸಿಕೊಂಡಿದ್ದಾರೆ. ಸಾಗರ ನಗರ ಸಿಪಿಐ ಪುಲ್ಲಯ್ಯ ರಾಥೋಡ್ , ಎಸ್ ಐ ಯಲ್ಲಪ್ಪ ಹಿರಗಣ್ಣನವರ ನೇತ್ವದ ತಂಡ ಈತನನ್ನು ಪತ್ತೆ ಮಾಡಿ ಬಂಧಿಸಿದೆ. 

ಫೆಬ್ರವರಿ 14 ರಂದು ಈ ಪ್ರದೇಶದಲ್ಲಿ ಇರಲ್ಲ ಕರೆಂಟ್‌

ಫೆಬ್ರವರಿ 14 ರಂದು ನಗರದ ಆಲೋಳ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ಕಾಮಗಾರಿ ಹಮ್ಮಿಕೊಳ್ಳಲಾಗಿದ್ದು, ಆದಿನ   ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಸಾಗರ ರಸ್ತೆ, ಎ.ಪಿ.ಎಂ.ಸಿ, ಆರ್.ಎಂ.ಸಿ. 100 ಅಡಿ ರಸ್ತೆ ಮತ್ತು ಸುನ್ವಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.

SUMMARY | The police conducted raids within the limits of all police stations in the city. A huge amount of property was seized during the raid.

KEYWORDS |  police  seized, huge amount,  chatpat suddi,