ಶಿವಮೊಗ್ಗದ ಓರ್ವ ಯುವಕ ಸೇರಿದಂತೆ ಸುರತ್ಕಲ್‌ನಲ್ಲಿ ಮೂವರು ಸಮುದ್ರ ಪಾಲು

Three youths  drowned in the sea, youth from Shivamogga drowned in the sea , Kulai Jetty in Surathkal, Dakshina Kannada district

ಶಿವಮೊಗ್ಗದ ಓರ್ವ ಯುವಕ ಸೇರಿದಂತೆ ಸುರತ್ಕಲ್‌ನಲ್ಲಿ ಮೂವರು ಸಮುದ್ರ ಪಾಲು
Three youths  drowned in the sea, youth from Shivamogga drowned in the sea , Kulai Jetty in Surathkal, Dakshina Kannada district

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 9, 2025 ‌‌   

ಶಿವಮೊಗ್ಗದ ಓರ್ವ ಯುವಕ ಸೇರಿದಂತೆ ಮೂವರು ಯುವಕರು ದಕ್ಷಿಣ ಕನ್ನಡ ಜಿಲ್ಲೆ ಸುರತ್ಕಲ್​ನ ಕುಳಾಯಿ ಜೆಟ್ಟಿ ಬಳಿಯ ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ನಿನ್ನೆ ದಿನ ಈ ಘಟನೆ ನಡೆದಿದೆ. ಬೆಂಗಳೂರುನಲ್ಲಿ ಓದುತ್ತಿದ್ದ ಇವರು, ನಿನ್ನೆ ಸುರತ್ಕಲ್‌ಗೆ ಬಂದಿದ್ದರು. ಬಳಿಕ ಸಮುದ್ರದಲ್ಲಿ ಈಜಲು ಇಳಿದಿದ್ದರು. ಒಟ್ಟು ನಾಲ್ವರು ಯುವಕರ ಪೈಕಿ ಮೂವರು ‌ಸಮುದ್ರಪಾಲಾಗಿದ್ದಾರೆ. ಓರ್ವನನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದಾರೆ. 

ಚಿತ್ರದುರ್ಗ ಜಿಲ್ಲೆಯ ಉಪ್ಪರಿಗೇನಹಳ್ಳಿ ನಿವಾಸಿ ಮಂಜುನಾಥ್ ಎಸ್ (31)

ಶಿವಮೊಗ್ಗ ಜಿಲ್ಲೆಯ ಶಿವಕುಮಾರ್ (30) 

ಬೆಂಗಳೂರು ಜೆ.ಪಿ. ನಗರದ ನಿವಾಸಿ ಸತ್ಯವೇಲು (30) ಮೃತ ವಿದ್ಯಾರ್ಥಿಗಳು

ಬೀದರ್ ಜಿಲ್ಲೆಯ ಹಂಗರಗಾ ನಿವಾಸಿ ಪರಮೇಶ್ವರ್‌ (30) ಬದುಕಿ ಬಂದಿದ್ದಾರೆ

ಇವರೆಲ್ಲರು ಬೆಂಗಳೂರಿನ ಎಎಂಸಿ ಇಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿಗಳು. ಮಂಗಳವಾರ ಕಾರಿನಲ್ಲಿ ಮಂಗಳೂರಿಗೆ ಬಂದಿದ್ದರು. ಇವತ್ತು ಮಧ್ಯಾಹ್ನ ಸಮುದ್ರ ತೀರಕ್ಕೆ ಬಂದಿದ್ದಾರೆ. ಬಳಿಕ ಸಮುದ್ರಕ್ಕೆ ಇಳಿದು ಆಟವಾಡಲು ಪ್ರಾರಂಭಿಸಿದ್ದಾರೆ. ಆದರೆ ನೀರಿನ ಸೆಳೆತ ಅವರ ಜೀವ ತೆಗೆದಿದೆ. ಇನ್ನೂ  ಮೂವರ ಮೃತದೇಹ ಜೆಟ್ಟಿಯ ಬಲಭಾಗದ ಮೂಲೆಯಲ್ಲಿ ಪತ್ತೆಯಾಗಿವೆ. ಸುರತ್ಕಲ್‌ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

SUMMARY | Three youths  drowned in the sea, youth from Shivamogga drowned in the sea , Kulai Jetty in Surathkal, Dakshina Kannada district

KEY WORDS | Three youths  drowned in the sea, youth from Shivamogga drowned in the sea , Kulai Jetty in Surathkal, Dakshina Kannada district